ವಸುಂದರಾ ರಾಜೇ 
ದೇಶ

ಬಿಜೆಪಿಗೆ ಜ್ಯೋತಿರಾದಿತ್ಯ: ಸೋದರತ್ತೆ ವಸುಂದರಾ ರಾಜೇ ರಾಜಕೀಯ ಭವಿಷ್ಯಕ್ಕೆ ಕುತ್ತು?

ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ತಮ್ಮ ಸಂಬಂಧಿ  ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು  ಬಿಜೆಪಿಗೆ ಸ್ವಾಗತಿಸಿದ್ದಾರೆ. ವಸುಂದರಾ ಅವರು 2001 ರ ವಿಮಾನ ದುರಂತದಲ್ಲಿ ಮೃತಪಟ್ಟ ಮಾಧವ್ ರಾವ್ ಸಿಂಧ್ಯಾ ಅವರ ಸಹೋದರಿ.

ಜೈಪುರ: ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ತಮ್ಮ ಸಂಬಂಧಿ  ಜ್ಯೋತಿರದಿತ್ಯ ಸಿಂಧ್ಯಾ ಅವರನ್ನು  ಬಿಜೆಪಿಗೆ ಸ್ವಾಗತಿಸಿದ್ದಾರೆ. ವಸುಂದರಾ ಅವರು 2001 ರ ವಿಮಾನ ದುರಂತದಲ್ಲಿ ಮೃತಪಟ್ಟ ಮಾಧವ್ ರಾವ್ ಸಿಂಧ್ಯಾ ಅವರ ಸಹೋದರಿ.

ವಸುಂದರಾ ಅವರು ಸದ್ಯ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ. ತಮ್ಮ ವಂಶದ ಹಿರಿಯರಾದ  ವಿಜಯರಾಜೇ ಅವರ ತತ್ವ ಮತ್ತು ಸಿದ್ದಾಂತಗಳನ್ನು ನಂಬಿ  ಹಾಗೂ ಜೊತೆಗೆ ದೇಶದ ಹಿತಾಸಕ್ತಿಯಿಂದಾಗಿ  ಸಿಂಧಿಯಾ ಬಿಜೆಪಿ ಸೇರಿದ್ದಾರೆ ಅವರನ್ನು ನಾನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.

ನಮ್ಮ ತಂಡಕ್ಕೆ  ನನ್ನ ಸೋದರಳಿಯ ಬಂದಿರುವುದು ಖುಷಿಯ ವಿಚಾರ, ರಾಜಮಾತ ಸಹಾಬ್ ಇದ್ದಿದ್ದರೇ  ಅವರು ತುಂಬಾ ಸಂತೋಷ ಪಡುತ್ತಿದ್ದರು.  ನಿನ್ನ ಧೈರ್ಯ ಮತ್ತು ಶಕ್ತಿಯನ್ನು ನಾನು ಮೆಚ್ಚುತ್ತೇನೆ. ಒಂದೇ ತಂಡದಲ್ಲಿರುವುದು ಒಳ್ಳೆಯದು. ಬಿಜೆಪಿಗೆ ಸ್ವಾಗತ ಎಂದ ವಸುಂದರಾ ಟ್ವೀಟ್ ಮಾಡಿದ್ದಾರೆ. 

ಆದರೆ ಜ್ಯೋತಿರಾದಿತ್ಯ ಬಿಜೆಪಿ ಪ್ರವೇಶದಿಂದಾಗಿ ರಾಜಸ್ತಾನ ಬಿಜೆಪಿ ಮೇಲೆ ವಸುಂದರಾ ತಮ್ಮ ಹಿಡಿತ ಕಳೆದುಕೊಳ್ಳಲಿದ್ದಾರೆ ಎಂದು ರಾಜಕೀಯ ವಲಯಗಳಲ್ಲಿ ಕೇಳಿ ಬರುತ್ತಿರುವ ಮಾತುಗಳು,  ಬಿಜೆಪಿ ರಾಜಕೀಯದ ಮುಖ್ಯವಾಹಿನಿಯಲ್ಲಿ ಪುನರಾಗಮನ ಮಾಡಲು ರಾಜೆಗೆ ಮತ್ತಷ್ಟು ಕಷ್ಟಕರವಾಗಬಹುದು ಎಂದು ಹೇಳಲಾಗುತ್ತಿದೆ. 

ಒಂದು ವೇಳೆ ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು ಮೋದಿ ತಮ್ಮ ಕೇಂದ್ರ ಸಂಪುಟಕ್ಕೆ  ಸೇರಿಸಿಕೊಂಡರೇ, ವಸುಂದರಾ ಅಥವಾ ಅವರ ಪುತ್ರ  ದುಶ್ಯಂತ್ ಸಿಂಗ್ ಅವರನ್ನು ಸಂಪುಟಕ್ಕೆ ಸೇರಿಸಿಕಕೊಳ್ಳುವುದು ಸಾಧ್ಯವಿಲ್ಲ. 

ಇದರ ಜೊತೆಗೆ ವಸುಂದರಾ ರಾಜೇ ಕೂಡ ರಾಜಸ್ತಾನ ಜವಾಬ್ದಾರಿ ಹೊರಲು ಹಿಂದೇಟು ಹಾಕುತ್ತಿದ್ದಾರೆ. ಅವರು ಕೇಂದ್ರ ಸಂಪುಟದಲ್ಲಿ ತಮಗೆ ಅಥವಾ ತಮ್ಮ ಮಗ ದುಶ್ಯಂತ್ ಸಿಂಗ್ ಗೆ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಬೇಡಿಕೆಯಿಟ್ಟಿದ್ದಾರೆ. 2018ರ ರಾಜಸ್ತಾನ ವಿಧಾನಸಭೆ ಚುನಾವಣೆ  ಸೋಲಿನ ನಂತರ ವಸುಂದರಾ ಅವರನ್ನು ನಿರ್ಲಕ್ಷ್ಯಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT