ಸಾಂದರ್ಭಿಕ ಚಿತ್ರ 
ದೇಶ

ಬೆಂಗಳೂರಿನಿಂದ ಪರಾರಿಯಾಗಿದ್ದ ಕೊರೋನಾ ಸೋಂಕಿತ ಮಹಿಳೆ ತಂದೆಯ ವಿರುದ್ಧ ಎಫ್‌ಐಆರ್ ದಾಖಲು

ಮಾಹಿತಿ ಮರೆಮಾಚಿ ಆರೋಗ್ಯ ಅಧಿಕಾರಿಗಳಿಗೆ ಪ್ರತಿರೋಧ ತೋರಿದ ಕೊರೋನಾ ವೈರಸ್ ಪಾಸಿಟಿವ್ ಮಹಿಳೆಯ ತಂದೆಯ ವಿರುದ್ಧ ದೇಶದಲ್ಲಿಯೇ ಮೊದಲ ಬಾರಿಗೆ ಆಗ್ರಾದಲ್ಲಿ ಎಫ್ ಐಆರ್ ದಾಖಲಿಸಲಾಗಿದೆ

ಆಗ್ರಾ: ಮಾಹಿತಿ ಮರೆಮಾಚಿ ಆರೋಗ್ಯ ಅಧಿಕಾರಿಗಳಿಗೆ ಪ್ರತಿರೋಧ ತೋರಿದ ಕೊರೋನಾ ವೈರಸ್ ಪಾಸಿಟಿವ್ ಮಹಿಳೆಯ ತಂದೆಯ ವಿರುದ್ಧ ದೇಶದಲ್ಲಿಯೇ ಮೊದಲ ಬಾರಿಗೆ ಆಗ್ರಾದಲ್ಲಿ ಎಫ್ ಐಆರ್ ದಾಖಲಿಸಲಾಗಿದೆ
 
ಕೊರೋನಾ ವೈರಸ್ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ 25 ವರ್ಷದ ಬೆಂಗಳೂರಿನ ಮಹಿಳೆ ಹಾಗೂ ಆಕೆಯ ತಂದೆಯ  ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಮುಖ್ಯ ವೈದ್ಯಾಧಿಕಾರಿಗಳಿಗೆ  ಆಗ್ರಾ  ಜಿಲ್ಲಾ ಮ್ಯಾಜಿಸ್ಟ್ರೇಟ್  ಆದೇಶಿಸಿದ್ದಾರೆ.
ಆಕೆಯ ಪತಿಗೆ ಕೊರೋನಾ ವೈರಸ್ ಪಾಸಿಟಿವ್ ಕಂಡುಬಂದಿತ್ತು.

ಆದಾಗ್ಯೂ, ಮಹಿಳೆ ಕುಟುಂಬ ಸದಸ್ಯರು ಆಕೆ ತಪಾಸಣೆಗೊಳಗಾಗಿ ಪ್ರತ್ಯೇಕ ಕೊಠಡಿಯಲ್ಲಿ ಇರಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಬೆಂಗಳೂರಿನಿಂದ ಪರಾರಿಯಾಗಿದ್ದ ಆ ಮಹಿಳೆಯಲ್ಲಿ ಕೋವಿಡ್- 19 ಪಾಸಿಟಿವ್ ಇರುವುದು ಶುಕ್ರವಾರ ದೃಢಪಟ್ಟಿತ್ತು. 

ಮಾರ್ಚ್ 6 ರಂದು ಆ ಮಹಿಳೆ ತನ್ನ ಪತ್ನಿಯೊಂದಿಗೆ ಯುರೋಪ್ ಗೆ ಹನಿಮೂನ್ ಗೆ ತೆರಳಿದ್ದರು. ಮಾರ್ಚ್ 9 ರಂದು ದೆಹಲಿಗೆ ಬಂದಿದ್ದು, ನಂತರ ತನ್ನ ಪೋಷಕರನ್ನು ಭೇಟಿಯಾಗಲು ಆಗ್ರಾಕ್ಕೆ ತೆರಳಿದ್ದಳು. ಮಾರ್ಚ್ 7 ರಂದು ಆಕೆಯ ಪತಿ ತಪಾಸಣೆಗೊಳಗಾಗಿದ್ದು, ಪಾಸಿಟಿವ್ ಇರುವುದು ದೃಢಪಟ್ಟಿತ್ತು. 

ಇದರಿಂದ ಭೀತಿಗೊಂಡ ಆ ಮಹಿಳೆ ತಪಾಸಣೆ ಹಾಗೂ ಪ್ರತ್ಯೇಕ ಕೊಠಡಿಯಲ್ಲಿ ಇರುವುದರಿಂದ ತಪ್ಪಿಸಿಕೊಳ್ಳಲು  ಬೆಂಗಳೂರಿನಿಂದ ಆಗ್ರಾಕ್ಕೆ ಪರಾರಿಯಾಗಿದ್ದಳು ಎಂಬುದಾಗಿ ಆಗ್ರಾದ ಅಧಿಕಾರಿಗಳು ಹೇಳಿದ್ದಾರೆ.

ಮಾರ್ಚ್ 13 ರಂದು ಸಂಬಂಧಿತ ಅಧಿಕಾರಿಗಳು ಆಗ್ರಾದಲ್ಲಿನ ಆಕೆಯ ಮನೆಗೆ ತೆರಳಿದ್ದಾಗ ದೆಹಲಿ ಮೂಲಕ ಬೆಂಗಳೂರಿಗೆ ಆ ಮಹಿಳೆ ತೆರಳಿರುವುದಾಗಿ ಸುಳ್ಳು ಹೇಳಿದ್ದರು. ನಂತರ ಆಕೆಯ ಪೋನ್  ಪರಿಶೀಲಿಸಿದಾಗ ಆಕೆ ಆಗ್ರಾದಲ್ಲಿನ ತನ್ನ ಮನೆಯಲ್ಲಿಯೇ ಇರುವುದು ಕಂಡುಬಂದಿತ್ತು ಎಂದು ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಿಂಗ್ ಹೇಳಿದ್ದಾರೆ. 

ನಂತರ ಆ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ರಕ್ತದ ಮಾದರಿಯನ್ನು ಎರಡನೇ ಸುತ್ತಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಐಪಿಸಿ ಸೆಕ್ಷನ್ 269 ( ಜೀವಕ್ಕೆ ಅಪಾಯಕಾರಿಯಾದ ರೋಗದ ಸೋಂಕು ಹರಡುವ ಸಾಧ್ಯತೆ ಇರುವಾಗ ನಿರ್ಲಕ್ಷ್ಯ ) ಹಾಗೂ ಸೆಕ್ಷನ್ 270ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ