ದೇಶ

ನಿವೃತ್ತ ಸಿಜೆಐ ರಂಜನ್ ಗೊಗೊಯ್ ರಾಜ್ಯಸಭೆ ನಾಮನಿರ್ದೇಶನ: ರಾಷ್ಟ್ರಪತಿಗಳ ಕ್ರಮ ಪ್ರಶ್ನಿಸಿದ ವಿರೋಧ ಪಕ್ಷ ನಾಯಕರು 

Sumana Upadhyaya

ನವದೆಹಲಿ:ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಅವರನ್ನು ರಾಜ್ಯಸಭೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಾಮನಿರ್ದೇಶನ ಮಾಡಿರುವುದಕ್ಕೆ ಹಲವು ಪಕ್ಷಗಳ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹಲವರು ರಾಷ್ಟ್ರಪತಿ ಕೋವಿಂದ್ ಅವರ ನಡೆಯನ್ನು ಪ್ರಶ್ನಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಷ್ಟ್ರಪತಿಗಳು ದೇಶದ ಜನರಿಗೆ ಮತ್ತು ಭವಿಷ್ಯದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಏನು ಸಂದೇಶ ನೀಡುತ್ತಿದ್ದಾರೆ ಎಂದು ಕೇಳಿದ್ದಾರೆ.

ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಕೂಡ ರಾಷ್ಟ್ರಪತಿಗಳ ನಡೆಯನ್ನು ಟೀಕಿಸಿದ್ದು, ಇದು ನ್ಯಾಯಾಂಗದ ಸ್ವಾತಂತ್ರ್ಯದ ನಡೆಯ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಆಪ್ ಶಾಸಕ ರಾಘವ್ ಛಡ್ಡಾ ಅವರು ಸಹ ಗೊಗೊಯ್ ಅವರ ನಡೆಯನ್ನು ಟೀಕಿಸಿದ್ದು, ಇದು ದೇಶಕ್ಕೆ ಕೆಟ್ಟ ನಿದರ್ಶನವನ್ನು ಉಂಟುಮಾಡುತ್ತದೆ ಮತ್ತು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಭಾರೀ ಧಕ್ಕೆಯನ್ನುಂಟುಮಾಡುತ್ತದೆ ಎಂದಿದ್ದಾರೆ.


ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಮಧ್ಯೆ ಅಧಿಕಾರವನ್ನು ಬೇರ್ಪಡಿಸುವುದು ನಮ್ಮ ಸಂವಿಧಾನದ ಮೂಲ ರಚನೆಯ ಭಾಗವಾಗಿದೆ. ಅದನ್ನು  ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ನಾಶಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.


ಕಳೆದ ವರ್ಷ ನವೆಂಬರ್ 17ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾದ ರಂಜನ್ ಗೊಗೊಯ್ 2018 ಅಕ್ಟೋಬರ್ 3ರಿಂದ ನವೆಂಬರ್ 17, 2019ರವರೆಗೆ ಸುಪ್ರೀಂ ಕೋರ್ಟ್ ನ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.

SCROLL FOR NEXT