ದೇಶ

'ಪ್ರಮಾಣವಚನ ನಂತರ ಮಾತನಾಡುತ್ತೇನೆ': ರಾಜ್ಯಸಭೆಗೆ ನಾಮ ನಿರ್ದೇಶನ ಬಗ್ಗೆ ಮಾಜಿ ಸಿಜೆಐ ರಂಜನ್ ಗೊಗೊಯ್ 

Sumana Upadhyaya

ಗುವಾಹಟಿ: ರಾಜ್ಯಸಭಾ ಸದಸ್ಯ ಸ್ಥಾನವನ್ನು ಸ್ವೀಕರಿಸಿದ ಬಗ್ಗೆ ಪ್ರಮಾಣವಚನ ಸ್ವೀಕರಿಸಿದ ನಂತರ ಮಾತನಾಡುತ್ತೇನೆ ಎಂದು ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದ್ದಾರೆ.


ನಿನ್ನೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ವಿರೋಧ ಪಕ್ಷ ನಾಯಕರು ವ್ಯಾಪಕವಾಗಿ ಟೀಕಿಸುತ್ತಿದ್ದಾರೆ. 
ಈ ಬಗ್ಗೆ ಗೊಗೊಯ್ ಅವರ ಅಭಿಪ್ರಾಯವನ್ನು ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ, ನಾನು ಬಹುಶಃ ನಾಳೆ ದೆಹಲಿಗೆ ಹೋಗುತ್ತೇನೆ. ಅಲ್ಲಿ ಮೊದಲು ಪ್ರಮಾಣವಚನ ಸ್ವೀಕರಿಸಿ ನಂತರ ನಾನು ಮಾಧ್ಯಮಗಳ ಜೊತೆ ವಿವರವಾಗಿ ಮಾತನಾಡುತ್ತೇನೆ ಎಂದು ಗುವಾಹಟಿಯಲ್ಲಿಂದು ಹೇಳಿದರು.


ಸಾಮಾನ್ಯವಾಗಿ ರಾಜ್ಯಸಭೆಗೆ ಸೆಲೆಬ್ರಿಟಿಗಳನ್ನು, ಕಲಾವಿದರನ್ನು ನಾಮ ನಿರ್ದೇಶನ ಮಾಡಲಾಗುತ್ತದೆ. ಇದುವರೆಗೆ ಭಾರತದ ಸಂಸತ್ತು ಇತಿಹಾಸದಲ್ಲಿ ಯಾವ ಮುಖ್ಯ ನ್ಯಾಯಮೂರ್ತಿಗಳನ್ನು ಕೂಡ ನಾಮ ನಿರ್ದೇಶನ ಮಾಡಿರಲಿಲ್ಲ. ಇದುವರೆಗೆ ಮಾಜಿ ಅಡ್ವೊಕೇಟ್ ಗಳು, ಮಾಜಿ ಮುಖ್ಯ ನ್ಯಾಯಮೂರ್ತಿಗಳು ಸಂಸತ್ತು ಮತ್ತು ವಿಧಾನಸಭೆಗಳ ಸದಸ್ಯರಾಗಿದ್ದುಂಟು.


ಕೆಲ ದಶಕಗಳ ಹಿಂದೆ ಮಾಜಿ ಮುಖ್ಯ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ, ಕಾಂಗ್ರೆಸ್ ಸೇರಿ ಸಂಸತ್ತು ಸದಸ್ಯರಾಗಿದ್ದರು. 1991ರಲ್ಲಿ ನಿವೃತ್ತರಾಗಿದ್ದ ಜಸ್ಟೀಸ್ ಮಿಶ್ರಾ 1998ರಲ್ಲಿ ರಾಜ್ಯಸಭೆಗೆ ನಾಮಾಂಕಿತಗೊಂಡು ಅಲ್ಲಿ 2004ರವರೆಗೆ ಇದ್ದರು.ನಂತರ ಮಾಜಿ ಮುಖ್ಯ ನ್ಯಾಯಮೂರ್ತಿ ಪಿ ಸದಾಶಿವಂ ಅವರನನು ನರೇಂದ್ರ ಮೋದಿ ಸರ್ಕಾರ ಕೇರಳ ರಾಜ್ಯಪಾಲರನ್ನಾಗಿ ನೇಮಿಸಿತು.
ನ್ಯಾಯಾಧೀಶರಾಗಿ ರಂಜನ್ ಗೊಗೊಯ್ ಸಾಂವಿಧಾನಿಕ ಪೀಠದಲ್ಲಿ ಕುಳಿತು ಹಲವು ಮಹತ್ವಪೂರ್ಣ ತೀರ್ಪನ್ನು ನೀಡಿದ್ದಾರೆ. ಅಯೋಧ್ಯೆ ರಾಮಮಂದಿರ ನಿರ್ಮಾಣ ಅವರ ಆದೇಶಗಳಲ್ಲಿ ಪ್ರಮುಖವಾದದ್ದು. 

SCROLL FOR NEXT