ಕೊರೋನಾ: ಸಹ ಪ್ರಯಾಣಿಕನಿಗೆ ಸೋಂಕು, ಸ್ವಯಂ ನಿರ್ಬಂಧದಲ್ಲಿ ದುಬೈ-ಮಂಗಳೂರು ವಿಮಾನದ 90 ಪ್ರಯಾಣಿಕರು! 
ದೇಶ

ಕೊರೋನಾ: ಸಹ ಪ್ರಯಾಣಿಕನಿಗೆ ಸೋಂಕು, ಸ್ವಯಂ ನಿರ್ಬಂಧದಲ್ಲಿ ದುಬೈ-ಮಂಗಳೂರು ವಿಮಾನದ 90 ಪ್ರಯಾಣಿಕರು! 

ದೇಶಾದ್ಯಂತ ಕೊರೋನಾ ವೈರಾಣು ಹರಡುವಿಕೆ ಹೆಚ್ಚಾಗುತ್ತಿದ್ದು, ದುಬೈ-ಮಂಗಳೂರು ವಿಮಾನದಲ್ಲಿ ಪ್ರಯಾಣಿಸಿದ್ದ ಓರ್ವ ವ್ಯಕ್ತಿಗೆ ಸೋಂಕು ಪತ್ತೆಯಾಗಿದೆ. 

ಮಂಗಳೂರು: ದೇಶಾದ್ಯಂತ ಕೊರೋನಾ ವೈರಾಣು ಹರಡುವಿಕೆ ಹೆಚ್ಚಾಗುತ್ತಿದ್ದು, ದುಬೈ-ಮಂಗಳೂರು ವಿಮಾನದಲ್ಲಿ ಪ್ರಯಾಣಿಸಿದ್ದ ಓರ್ವ ವ್ಯಕ್ತಿಗೆ ಸೋಂಕು ಪತ್ತೆಯಾಗಿದೆ. 

ಮಾ.14 ರಂದು ದುಬೈ ನಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದ್ದು, ಆತನೊಂದಿಗೆ ಪ್ರಯಾಣಿಸಿದ್ದ 90 ಪ್ರಯಾಣಿಕರು ಸ್ವಯಂ ನಿರ್ಬಂಧದಲ್ಲಿದ್ದು ಮನೆಯಲ್ಲಿ ಉಳಿದಿದ್ದಾರೆ. 

ಸೋಂಕು ಪತ್ತೆಯಾಗಿರುವ ವ್ಯಕ್ತಿ ಕೇರಳದವರಾಗಿದ್ದು, ಕಾಸರಗೋಡಿಗೆ ತೆರಳಿದ್ದರು. ತಕ್ಷಣವೇ ಎಚ್ಚೆತ್ತುಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲಾಡಳಿತದ ಅಧಿಕಾರಿಗಳು ಕಾಸರಗೋಡಿನ ಅಧಿಕಾರಿಗಳನ್ನು ಸಂಪರ್ಕಿಸಿ, ಸೋಂಕು ತಗುಲಿದ್ದ ವ್ಯಕ್ತಿ ಕಾಸರಗೋಡಿಗೆ ತಲುಪುವುದಕ್ಕೂ ಮುನ್ನ ಸಂಚರಿಸಿದ್ದ ಸ್ಥಳ ಸಂಪರ್ಕಿಸಿದ್ದ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆದಿದ್ದರು. 

ಸೋಂಕು ತಗುಲಿದ್ದ ವ್ಯಕ್ತಿ ಮಂಗಳೂರಿನಿಂದ ಕಾಸರಗೋಡಿಗೆ ನೇರವಾಗಿ ಬಂದಿದ್ದ ಎಂಬ ಮಾಹಿತಿಯನ್ನು ಕೇರಳ ನೀಡಿತ್ತು. ಇತ್ತ ದಕ್ಷಿಣ ಕನ್ನಡ ಜಿಲ್ಲಾಡಳಿತ ಸೋಂಕು ತಗುಲಿದ್ದ ವ್ಯಕ್ತಿಯೊಂದಿಗೆ ವಿಮಾನದಲ್ಲಿ ಸಂಚರಿಸಿದ್ದವರ ಬಗ್ಗೆ ಮಾಹಿತಿ ಪಡೆದು ಅವರಿಗೆ ಮನೆಯಲ್ಲಿ ಇರುವಂತೆ ನಿರ್ಬಂಧ ವಿಧಿಸಲಾಗಿದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್