ಸಂಗ್ರಹ ಚಿತ್ರ 
ದೇಶ

ಕೊರೋನಾ: ಐಸೊಲೇಷನ್ ವಾರ್ಡ್‌ನಿಂದ ಓಡಿಹೋಗಿದ್ದ ಕೇರಳದ ಪೋಲೀಸ್ ಅಧಿಕಾರಿ ಕೆಲಸವೇ ಹೋಯ್ತು

ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಿಂದ ಪರಾರಿಯಾಗಿ ಎರಡು ದಿನಗಳ ನಂತರ  ಸಶಸ್ತ್ರ ಮೀಸಲು ಪೊಲೀಸ್ ಶಿಬಿರದಲ್ಲಿ ಕಾಣಿಸಿಕೊಂಡ ಕೇರಳದ ಒಬ್ಬ ಪೋಲೀಸರನ್ನು ಸೇವೆಯಿಂದ ತೆಗೆದುಹಾಕಲಾಗಿದೆ. 

ತಿರುವನಂತಪುರಂ: ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಿಂದ ಪರಾರಿಯಾಗಿ ಎರಡು ದಿನಗಳ ನಂತರ  ಸಶಸ್ತ್ರ ಮೀಸಲು ಪೊಲೀಸ್ ಶಿಬಿರದಲ್ಲಿ ಕಾಣಿಸಿಕೊಂಡ ಕೇರಳದ ಒಬ್ಬ ಪೋಲೀಸರನ್ನು ಸೇವೆಯಿಂದ ತೆಗೆದುಹಾಕಲಾಗಿದೆ. 

ತಿರುವನಂತಪುರಂನ ಅಂಬುರಿ ಮೂಲದ ಪೋಲೀಸ್ ಅಧಿಕಾರಿ ಇತ್ತೀಚೆಗೆ ಕೇರಳದ ಪಟನಂತಿಟ್ಟ ಜಿಲ್ಲೆಯ ರಣ್ಣಿ ಗ್ರಾಮಕ್ಕೆ ತೆರಳಿದ್ದರೆಂದು ತಿಳಿದು ಬಂದ ನಂತರ ಅವರನ್ನು ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿತ್ತು.ರಣ್ಣಿ ಗ್ರಾಮ್ದಲ್ಲಿ ಕೋವಿಡ್-19 ಮಾರಕ ರೋಗ ವ್ಯಾಪಕವಾಗಿ ಕಾಣಿಸಿಕೊಂಡಿದೆ.

ಅಲ್ಲದೆ ಈ ಪೋಲೀಸ್ ಅಧಿಕಾರಿ ಸೋಂಕಿತರೊಡನೆ ನೇರ ಸಂಪರ್ಕದಲ್ಲಿದ್ದನೆಂದು ಸಾಬೀತಾಗಿದೆ. ಆದರೆ, ಆ ವ್ಯಕ್ತಿ ಕಡ್ಡಾಯವಾಗಿ 14 ದಿನಗಳ ಸಂವಹನ ನಿರ್ಬಂಧವನ್ನು ಉಲ್ಲಂಘಿಸಿ ಆಸ್ಪತ್ರೆಯಿಂದ ಪರಾರಿಯಾಗಿದ್ದನು. ಅದಾಗಿ ಎರಡು ದಿನಗಳ ನಂತರ ವರು ಶಸ್ತ್ರ ಮೀಸಲು ಪೊಲೀಸ್ ಶಿಬಿರಕ್ಕೆ ತೆರಳಿದರು, ಅಲ್ಲಿ ಅವರು ಮೊದಲು ಕೆಲಸ ಮಾದ್ದರು. ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ಅಲ್ಲಿಯೇ ಇದ್ದ ಪೋಲೀಸ್ ಅಧಿಕಾರಿ ತಾವು ಸೋಂಕಿತರೊಡನಿದ್ದು ಬಳಿಕ ಆಸ್ಪತ್ರೆಯಿಂದ ಪರಾರಿಯಾಗಿದ್ದ ವಿಚಾರವನ್ನು ಮರೆ ಮಾಚಿದ್ದಾರೆ.

ಆ ವ್ಯಕ್ತಿ ಪೊಲೀಸ್ ಕ್ಯಾಂಟೀನ್‌ಗೆ ಹೋಗಿದ್ದನು, ಅಲ್ಲಿ ಪ್ರತಿದಿನ ಡಜನ್ ಗಟ್ಟಲೆ ಜನ ಸೇರುತ್ತಾರೆ.ಇದೀಗ ಇತರ ಪೊಲೀಸರ ಸುರಕ್ಷತೆಯ ಬಗ್ಗೆ ಆತಂಕ ಮೂಡಿದೆ ಎಂದು ಮೂಲಗಳು ತಿಳಿಸಿವೆ.

"ನಾವು ಸಂಪೂರ್ಣ ಆವರಣವನ್ನು ಸ್ವಚ್ಚಗೊಳಿಸಲು ಪ್ರಾರಂಭಿಸಿದ್ದೇವೆ. ಅವರು ಯಾರೊಂದಿಗೂ ವೈಯಕ್ತಿಕವಾಗಿ ಸಂವಹನ ನಡೆಸಿದ್ದಾರೆಯೇ ಎಂದು ಪರೀಕ್ಷಿಸಲು ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಲಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಸಶಸ್ತ್ರ ಮೀಸಲು ಶಿಬಿರದಲ್ಲಿ 1100 ಕ್ಕೂ ಹೆಚ್ಚು ಪೊಲೀಸರು ನೆಲೆಸಿದ್ದಾರೆ ಮತ್ತು ಅವರಲ್ಲಿ ಸೋಂಕಿನ ಹರಡುವಿಕೆಯು ಸಾರ್ವಜನಿಕರೊಂದಿಗೆ ನಿಯಮಿತವಾಗಿ ಸಂವಹನ ನಡೆಸುವುದರಿಂದ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು.

 ಬುಧವಾರ ರಾತ್ರಿಯ ವೇಳೆಗೆ ಆತನ ಪರೀಕ್ಷಾ ಫಲಿತಾಂಶ ನಿರೀಕ್ಷಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ."ಅವರ ವರದಿಯನ್ನು ಪಡೆದ ನಂತರ ನಾವು ಮುಂದಿನ ಕ್ರಮವನ್ನು ಯೋಜಿಸುತ್ತೇವೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video