ದೇಶ

ಕೊರೋನಾ ಭೀತಿ:  'ವರ್ಕ್ ಫ್ರಮ್ ಹೋಮ್' ನೀತಿ ಜಾರಿಗೆ ತನ್ನಿ- ಎಲ್ಲಾ ಕಂಪನಿಗಳಿಗೆ ಸರ್ಕಾರ ಸಲಹೆ

Manjula VN

ನವದೆಹಲಿ: ಕೊರೋನಾ ವೈರಸ್ ವಿರುದ್ಧ ಹೋರಾಡಲು ಸಾಮಾಜಿಕ ಅಂತರ ಅಗತ್ಯವಿದ್ದು, ಎಲ್ಲಾ ನೌಕರರು ಹಾಗೂ ಸಿಬ್ಬಂದಿಗಳಿಗಾಗಿ ಪರ್ಕ್ ಫ್ರಮ್ ಹೋಮ್ ನೀತಿ ಜಾರಿಗೆ ತರುವಂತೆ ಎಲ್ಲಾ ಕಂಪನಿಗಳಿಗೆ ಸರ್ಕಾರ ಸಲಹೆ ನೀಡಿದೆ. 

ಈ ಕುರಿತು ಮಾತನಾಡಿರುವ ಕಾರ್ಪೊರೇಟ್ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಇಂಜೆಟಿ ಶ್ರೀನಿವಾಸ್ ಅವರು, ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಂಪನಿಗಳಲ್ಲಿ ಕಾನೂನಿನ ಅಡಿಯಲ್ಲಿ ಜಾರಿಗೆ ತರಬಹುದಾದ ನಿಯಮಗಳ ಬಗ್ಗೆ ಸಚಿವಾಲಯ ಪರಿಶೀಲನೆ ನಡೆಸುತ್ತಿದೆ. ವಿಡಿಯೋ ಕಾನ್ಫರೆನ್ಸ್ ಮೂೂಲಕ ಈಗಾಗಲೇ ಸಚಿವಾಲಯ ಕಂಪನಿಗಳೊಂದಿಗೆ ಸಭೆ ನಡೆಸಲು ಅನುಮತಿ ನೀಡಿದೆ. ಜೂನ್ 30ರವರೆಗೆ ಇದೇ ರೀತಿಯ ವಿಡಿಯೋ ಹಾಗೂ ಆಡಿಯೋ ಕಾನ್ಫರೆನ್ಸ್ ಗಳನ್ನು ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. 

ಕೊರೋನಾ ವೈರಸ್ ನಿಯಂತ್ರಿಸಲು ನಗರ ಪ್ರದೇಶಗಳಲ್ಲಿನ ಜನರ ಪ್ರತಿಕ್ರಿಯೆ ಅತ್ಯಂತ ಮುಖ್ಯವಾಗಿದೆ. ಹೀಗಾಗಿ ಮಾರ್ಚ್ 31ರವರೆಗೂ ಕಂಪನಿಗಳು ವರ್ಕ್ ಫ್ರಮ್ ಹೋಮ್ ನೀತಿ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ವಿಡಿಯೋ ಕಾನ್ಫರೆನ್ಸ್, ಎಲೆಕ್ಟಾನಿಕ್, ಟೆಲಿಫೋನ್ ಹಾಗೂ ಕಂಪ್ಯೂಟರ್ ಗಳ ಮೂಲಕ ಕಾನ್ಫರೆನ್ಸ್ ಗಳನ್ನು ನಡೆಸಿ ಎಂದು ಸಲಹೆನೀಡಿದ್ದಾರೆ. 

SCROLL FOR NEXT