ದೇಶ

ಕೊರೋನಾ ವೈರಸ್‌ ಭೀತಿ: ಮಾ. 31ರ ವರೆಗೆ ಪಂಜಾಬ್ ಸಂಪೂರ್ಣ ಸ್ಥಬ್ಧ

Srinivasamurthy VN

ಅಮೃತಸರ: ಕೊರೋನಾ ವೈರಸ್‌ ಸೋಂಕಿಗೆ ಭಾರತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 6ಕ್ಕೇರಿದ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ಪಂಜಾಬ್ ಸರ್ಕಾರ ಮಾ. 31ರ ವರೆಗೆ ತನ್ನ ರಾಜ್ಯವನ್ನು ಸಂಪೂರ್ಣ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಪಂಜಾಬ್ ನಲ್ಲಿ ಕೊರೋನಾ ಸೋಂಕು ವ್ಯಾಪಿಸುವುದನ್ನು ತಡೆಯುವ ಕ್ರಮವಾಗಿ ಪಂಜಾಬ್‌ ಅನ್ನು ಸಂಪೂರ್ಣ ಸ್ತಬ್ಧಗೊಳಿಸಲು ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ನಿರ್ಧರಿಸಿದ್ದಾರೆ. ಪಂಜಾಬ್ ನಲ್ಲಿ ಈಗಾಗಲೇ ಕೊರೋನಾ ಸೋಂಕಿಗೆ ತುತ್ತಾದವರ ಸಂಖ್ಯೆ 13ಕ್ಕೇರಿದ್ದು, ಈಗಾಗಲೇ ಮೂರು ಮಂದಿ ಸಾವನ್ನಪ್ಪಿದ್ದಾರೆ. 

ಇದೇ ಕಾರಣಕ್ಕೆ ಪಂಜಾಬ್ ಸಿಎಂ ಅಮರೀಂದರ್‌ ಸಿಂಗ್‌ ಮಾರ್ಚ್ 31ರವರೆಗೂ ಪಂಜಾಬ್ ರಾಜ್ಯವನ್ನು ಸಂಪೂರ್ಣ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಈ ವೇಳೆ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಲಭ್ಯತೆಯಲ್ಲಿ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಲೂ ಸೂಚಿಸಲಾಗಿದೆ. ಅಂತೆಯೇ ಸರ್ಕಾರಿ ಸೇವೆಗಳು, ಜೀವನಾವಶ್ಯಕ ಪರಿಕಗಳನ್ನು ಮಾರಾಟ ಮಾಡುವ ಅಂಗಡಿಗಳು ನಿಷೇಧಾಜ್ಞೆಯ ವೇಳೆಯೂ ತೆರೆದಿರಲಿವೆ. 

ನಿಷೇಧಾಜ್ಞೆ ಜಾರಿ ಹೊಣೆಯನ್ನು ಡಿಸಿಗಳು ಮತ್ತು ಎಸ್‌ಎಸ್‌ಪಿಎಸ್‌ಗಳ ಹೆಗಲಿಗೆ ಹೊರಿಸಲಾಗಿದೆ ಎಂದು ತಿಳಿದುಬಂದಿದೆ.

SCROLL FOR NEXT