ಸಂಗ್ರಹ ಚಿತ್ರ 
ದೇಶ

ಮಹಾಮಾರಿ ಕೊರೋನಾ: ದೇಶಾದ್ಯಂತ 1.7 ದಶಲಕ್ಷಕ್ಕೂ ಹೆಚ್ಚು ನಿರಾಶ್ರಿತರ ಪರದಾಟ

ದೆಹಲಿಯ ಫೂಟ್ ಪಾತ್ ನಿವಾಸಿಯಾಗಿರುವ ಮಹಿಳೆ ಸೀತಾ, ತನ್ನ ಮೊಬೈಲ್ ಫೋನ್‌ನಲ್ಲಿ ಸಂಖ್ಯೆಯನ್ನು ಡಯಲ್ ಮಾಡಿದಾಗ ಕೊರೋನಾವೈರಸ್ ಬಗೆಗೆ ಎಚ್ಚರಿಕೆ ಸಂದೇಶ ಕೇಳಿಸಿಕೊಂಡಿದ್ದಾಳೆ.  ಆದರೆ ಇದುವರೆಗೆ ಆಕೆಯನ್ನು ಯಾವುದೇ ಸರ್ಕಾರಿ ಅಧಿಕಾರಿ ಅಥವಾ ಸಲಹಾ ಸಂಸ್ಥೆ ಆಕೆಯನ್ನು ಸಂಪರ್ಕಿಸಿರಲಿಲ್ಲ. "ಮೊಬೈಲ್ ಫೋನ್ ನಲ್ಲಿ ಏನೇನೂ ಹೇಳುತ್ತಿದೆ." ಸೀತಾ ತಾತ್ಕಾಲಿಕ ತೊಟ್ಟಿಲಲ್ಲಿ ತನ

ನವದೆಹಲಿ: ದೆಹಲಿಯ ಫೂಟ್ ಪಾತ್ ನಿವಾಸಿಯಾಗಿರುವ ಮಹಿಳೆ ಸೀತಾ, ತನ್ನ ಮೊಬೈಲ್ ಫೋನ್‌ನಲ್ಲಿ ಸಂಖ್ಯೆಯನ್ನು ಡಯಲ್ ಮಾಡಿದಾಗ ಕೊರೋನಾವೈರಸ್ ಬಗೆಗೆ ಎಚ್ಚರಿಕೆ ಸಂದೇಶ ಕೇಳಿಸಿಕೊಂಡಿದ್ದಾಳೆ.  ಆದರೆ ಇದುವರೆಗೆ ಆಕೆಯನ್ನು ಯಾವುದೇ ಸರ್ಕಾರಿ ಅಧಿಕಾರಿ ಅಥವಾ ಸಲಹಾ ಸಂಸ್ಥೆ ಆಕೆಯನ್ನು ಸಂಪರ್ಕಿಸಿರಲಿಲ್ಲ. "ಮೊಬೈಲ್ ಫೋನ್ ನಲ್ಲಿ ಏನೇನೂ ಹೇಳುತ್ತಿದೆ." ಸೀತಾ ತಾತ್ಕಾಲಿಕ ತೊಟ್ಟಿಲಲ್ಲಿ ತನ್ನ ಶಿಶು ಇರುವುದನ್ನು ತೋರಿಸಿದ್ದಾರೆ.ಅಲ್ಲದೆ ಕೊವಿಡ್-19  ಅಪಾಯಕಾರಿ ವೈರಸ್ ನಿಂಡ ತಾನು ಸುರಕ್ಷಿತವಾಗಿರಲಿದ್ದೇನೆ ಎಂದು ಆಕೆ ಹೇಳೀದ್ದಾರೆ.

ಸಾಮಾಜಿಕ ಅಂತರ ಹಾಗೂ ಕೈಗಳನ್ನು ತೊಳೆದುಕೊಳ್ಳುವ ಮೂಲಕ ಶುಚಿತ್ವ ಕಾಪಾಡಿಕೊಳ್ಳುವ ನಗೆಗೆ ಸರ್ಕಾರ ಸೂಚನೆ ಹೊರಡಿಸಿದೆ ಆದರೆ ಸೀತಾಳಂತಹಾ ಜನರು ಆಗಾಗ್ಗೆ ಕೈ ತೊಳೆಯುವುದು ಹೇಗೆ  ಸಾಧ್ಯವೆಂಬುದು ಇನ್ನೂ ತಿಳಿದಿಲ್ಲ.

“ನಾವು ಪೈಪ್‌ನಿಂದ ಪಡೆಯುವ ಅದೇ ನೀರನ್ನು ಬಳಸಿದ್ದು ಅದನ್ನೇ ಕುಡಿಯಲೂ ಉಅಪಯೋಗಿಸುತ್ತೇವೆ. ಸ್ನಾನ ಮಾಡುತ್ತೇವೆ ಮತ್ತು ಆಹಾರ ಬೇಯಿಸಿಕೊಳ್ಳಲು ಸಹ ಅದೇ ನೀರನ್ನು ಬಳಸುತ್ತೇವೆ.  ನಾನು ವಿದ್ಯಾವಂತನಲ್ಲ.  ಆದರೆ ಬೀದಿಯಲ್ಲಿ ಓಡಾಡುವ ಜನರು ಏನೆಂದು ತಿಳಿದಿದ್ದಾರೆ ಎನ್ನುವುದು ನನಗೆ ಗೊತ್ತು.”ಎಂದು 23 ವರ್ಷದ ಯುವಕ  ಹೇಳಿದ್ದಾರೆ.

ಭಾರತದಲ್ಲಿ 1.7 ದಶಲಕ್ಷಕ್ಕೂ ಹೆಚ್ಚು ಮಂದಿ ಮನೆಗಳಿಲ್ಲದೆ ಬೀದಿ ಬದಿಯಲಿ ವಾಸಿಸುತ್ತಿದ್ದಾರೆ.ಅವರಲ್ಲಿ 938,384 ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ವಸತಿರಹಿತರ ವಸತಿ ಮತ್ತು ಭೂ ಹಕ್ಕುಗಳ ಅಂದಾಜಿನ ಪ್ರಕಾರ, ಮನೆಯಿಲ್ಲದವರ ನಗರ ಜನಸಂಖ್ಯೆಯನ್ನು ಕನಿಷ್ಠ 3 ಮಿಲಿಯನ್ ಎಂದು ಹೇಳಬಹುದಾಗಿದೆ.

2011 ರ ಜನಗಣತಿಯ ಮಾಹಿತಿಯ ಪ್ರಕಾರ, ಪ್ರತಿ ಚದರ ಕಿ.ಮೀ.ಗೆ ಜನಸಂಖ್ಯೆಯ ಸಾಂದ್ರತೆ. ಭಾರತದಲ್ಲಿ 382 ಎಂದಿದ್ದು “ನಾವು ಡೆಟಾಲ್ ಬಳಸಿ ಕೈತೊಳೆಯುವುದು ಹೇಗೆ?ಪ್ರತಿ ಎರಡು ದಿನಗಳಿಗೊಮ್ಮೆ ಹತ್ತಿರದ ಉದ್ಯಾನವನದಲ್ಲಿ ನೀರು ಬಂದಾಗ ಮಕ್ಕಳು ನಮ್ಮನ್ನು ಎಚ್ಚರಿಸುತ್ತಾರೆ ಮತ್ತು ನಾವು ಹೋಗಿ ನಮ್ಮ ಬಕೆಟ್‌ಗಳನ್ನು ತುಂಬುತ್ತೇವೆ ”ಎಂದು ನೆಹರು ಪ್ಲೇಸ್ ಎಂಟಿಎನ್‌ಎಲ್ ಅನೌಪಚಾರಿಕ ವಸಾಹತುವಿನಲ್ಲಿ ಶೀಲಾ ಹೇಳಿದರು.“ನಮಗೂ ಭಯವಾಗಿದೆ. ಆದರೆ ನಾವು ಏನು ಮಾಡಬಹುದು? ನಾವು ಇಕ್ಕಟ್ಟಾದ ಸ್ಥಳಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ವಾಸಿಸುತ್ತಿದ್ದೇವೆ.  ನಮಗೆ ಯಾವ ಸಹಕಾರವಿಲ್ಲ"

“ಮನೆಯಲ್ಲಿಯೇ ಇರುವುದು ಮೂಲ ಮುನ್ನೆಚ್ಚರಿಕೆ ಕ್ರಮ. ಆದರೆ ಮನೆಯಿಲ್ಲದವರು ಮನೆಯಲ್ಲಿ ಹೇಗೆ ಉಳಿಯುತ್ತಾರೆ? ಇದಲ್ಲದೆ, ಅನೌಪಚಾರಿಕ ವಸಾಹತುಗಳು ಮತ್ತು ಮನೆಯಿಲ್ಲದ  ಸಮುದಾಯಗಳು ಆಶ್ರಯ ತಾಣಗಳಲ್ಲಿ ಸಾಮಾಜಿಕ ದೂರವನ್ನು’ ಅಭ್ಯಾಸ ಮಾಡುವುದು ಅಸಾಧ್ಯ. ” ಸತಿ ಮತ್ತು ಭೂ ಹಕ್ಕುಗಳ ಕಾರ್ಯನಿರ್ವಾಹಕ ನಿರ್ದೇಶಕಿ ಶಿವಾನಿ ಚೌಧರಿ ಹೇಳಿದರು.

"ಶುದ್ಧತೆ, ಸಾಕಷ್ಟು ನೀರು ಸೇರಿದಂತೆ ಮೂಲಭೂತ ಸೇವೆಗಳಿಗಾಗಿ ದೇಶ ಆದ್ಯತೆ ಕೊಡಬೇಕಿದೆ.ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಸತಿ ಹಕ್ಕುಗಳನ್ನು ಭದ್ರಪಡಿಸಿಕೊಳ್ಳಲು ‘ಅಸಾಧಾರಣ ಕ್ರಮಗಳನ್ನು’ ತೆಗೆದುಕೊಳ್ಳಬೇಕೆಂದು ಸಮರ್ಪಕ ವಸತಿ ಹಕ್ಕಿನ ಬಗ್ಗೆ ಯುಎನ್ ವಿಶೇಷ ವರದಿಗಾರ ಬುಧವಾರ ಸರ್ಕಾರಗಳನ್ನು ಒತ್ತಾಯಿಸಿದರು.

ಅನೌಪಚಾರಿಕ ವಸಾಹತುಗಳಲ್ಲಿ ಜನರನ್ನು ತಲುಪಲು ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ಶಿವಾಜಿ ದೇವ್ ಬರ್ಮನ್ ಕರೆ ನೀಡಿದರು. ಜನದಟ್ಟಣೆ ಮತ್ತು ಅಸಮರ್ಪಕ ನೈರ್ಮಲ್ಯ ಕ್ರಮಗಳು ಇತರ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಬಹುದು ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT