ದೇಶ

ಸಂಪೂರ್ಣ ಲಾಕ್'ಡೌನ್ ನಡುವಲ್ಲೂ ದೇಶದಲ್ಲಿ ಹೆಚ್ಚಿದ ಕೊರೋನಾ ಹಾವಳಿ: 873ಕ್ಕೇರಿದ ಸೋಂಕಿತರ ಸಂಖ್ಯೆ, 900ರ ಗಡಿಯತ್ತ ಭಾರತ

Manjula VN

ನವದೆಹಲಿ: ದೇಶದಾದ್ಯಂತ ಸಂಪೂರ್ಣ ಲಾಕ್'ಡೌನ್ ಘೋಷಣೆ ಮಾಡಿದ್ದರೂ. ಇದರ ನಡುವಲ್ಲೂ ಮಹಾಮಾರಿ ಕೊರೋನಾ ವೈರಸ್ ಹಾವಳಿ ತೀವ್ರಗೊಂಡಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 873ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

873 ಮಂದಿಯ ಪೈಕಿ 775 ಮಂದಿಯಲ್ಲಿ ಸೋಂಕು ದೃಢಪಟ್ಟು, ಚಿಕಿತ್ಸೆ ಪಡೆಯುತ್ತಿದ್ದರೆ, 78 ಮಂದಿ ಸೋಂಕಿತರು ವೈರಸ್'ನಿಂಗ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ವೈರಸ್ ನಿಂದಾಗಿ ದೇಶದಲ್ಲಿ ಈ ವರೆಗೂ 19 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ ಒಬ್ಬರು ವಲಸಿಗರಾಗಿದ್ದಾರೆಂದು ತಿಳಿದುಬಂದಿದೆ. ಈ  ನಡುವೆ ಮಹಾರಾಷ್ಟ್ರ ಒಂದರಲ್ಲಿಯೇ ಒಟ್ಟು 180 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 173 ಮಂದಿ ಸೋಂಕಿನೊಂದಿಗೆ ಕೇರಳ ರಾಜ್ಯ ಎರಡನೇ ಸ್ಥಾನದಲ್ಲಿದೆ. 

ಈ ನಡುವೆ ಸಂತದ ವಿಚಾರವೆಂದರೆ, ಮಹಾರಾಷ್ಟ್ರದಲ್ಲಿ 25 ಹಾಗೂ ಕೇರಳ ರಾಜ್ಯದಲ್ಲಿ 11 ಮಂದಿ ವೈರಸ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 

ಕೃಷಿ ಕಾರ್ಮಿಕರು, ಕೈಗಾರಿಕಾ ಕಾರ್ಮಿಕರು ಹಾಗೂ ನಿರ್ಗತಿಕರಿಗೆ ಆಹಾರ, ಅಗತ್ಯ ವಸ್ತುಗಳನ್ನು ಪೂರರೈಕೆ ಮಾಡುವಂತೆ ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರೀಯ ಪ್ರಾಂತ್ಯಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಜಂಟಿ ಕಾರ್ಯದರ್ಶಿ ಪುಣ್ ಸಲಿಲಾ ಶ್ರೀವಾತ್ಸವ ಅವರು ಹೇಳಿದ್ದಾರೆ. 

SCROLL FOR NEXT