ತಂಜಾವೂರು: ಎಲ್ಲೆಡೆ ಕೊರೋನಾ ಸೋಂಕು ಬಾಧಿಸುತ್ತಿರುವಾಗ, ತಮಿಳುನಾಡಿನ ತಂಜಾವೂರು ಜಿಲ್ಲೆಯ ಆದಿರಾಮಪಟ್ಟಣದ ಮಸೀದಿಯೊಂದರಲ್ಲಿ ಬೆಂಗಳೂರು ಹಾಗೂ ಪಶ್ಚಿಮಬಂಗಾಳದ ವ್ಯಕ್ತಿಗಳೊಂದಿಗೆ ಇಂಡೋನೇಷ್ಯಾದ 12 ಮಂದಿಯನ್ನು ಅಧಿಕಾರಿಗಳು ಅದೇ ಮಸೀದಿಯಲ್ಲೇ ಪ್ರತ್ಯೇಕವಾಗಿರಿಸಿದ್ದಾರೆ.
ಮಸೀದಿಯಲ್ಲಿ 12 ಬಾಂಗ್ಲಾದೇಶೀಯರೊಡನೆ ಬೆಂಗಳೂರು ಹಾಗೂ ಕೋಲ್ಕೊತಾದ ತಲಾ 10 ವ್ಯಕ್ತಿಗಳು ಇದೇ 23ರಿಂದ ತಂಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ತೆರಳಿ ಪರೀಶೀಲನೆ ನಡೆಸಿದರು.
ಅದೇ ಮಸೀದಿಯಲ್ಲೇ ಅವರನ್ನು ಪ್ರತ್ಯೇಕವಾಗಿರಿಸಿ, ಕೈ ಮೇಲೆ ಗುರುತು ಹಾಕಿದ್ದಲ್ಲದೆ ರಕ್ತ ಮತ್ತು ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
ಇನ್ನು ಈಗಾಗಲೇ ಧಾರ್ಮಿಕ ಪ್ರವಾಸಕ್ಕೆಂದು ಭಾರತಕ್ಕೆ ಆಗಮಿಸಿದ್ದ ಥೈಲ್ಯಾಂಡ್ ನ 6 ಮಂದಿಯನ್ನು ಮಧುರೈ ಜಿಲ್ಲೆಯ ತಿರುಮಂಗಲಂ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಲಾಗಿದೆ.
ತಮಿಳುನಾಡಿನಲ್ಲಿ ಈವರೆಗೂ ಕೊರೋನಾ ಸೋಂಕಿತರ ಸಂಖ್ಯೆ 38 ಕ್ಕೆ ಏರಿದೆ. ರಾಜ್ಯಾದ್ಯಂತೆ ವಿವಿಧ ಆಸ್ಪತ್ರೆಗಳಲ್ಲಿ 277 ವ್ಯಕ್ತಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ