ದೇಶ

ಲಾಕ್ ಡೌನ್: ದೇಶಾದ್ಯಂತ ವೈದ್ಯಕೀಯ ಸಲಕರಣೆ ಸಾಗಾಟಕ್ಕೆ ಏರ್ ಇಂಡಿಯಾ ನೆರವು

Raghavendra Adiga

ನವದೆಹಲಿ: ಕೊರೋನಾವೈರಸ್  ವಿರುದ್ಧ ಹೋರಾಟದ ಭಾಗವಾಗಿ ಕೋವಿಡ್ ಪರೀಕ್ಷೆಗೆ ಅಗತ್ಯವಾದ ವೈದ್ಯಕೀಯ ಉಪಕರಣಗಳು ಮತ್ತು ಅಗತ್ಯ ವಸ್ತುಗಳನ್ನು ಪೂರೈಸಲು ರಾಜ್ಯ ಸರ್ಕಾರಗಳೊಂದಿಗೆ  ನಾಗರಿಕ ವಿಮಾನಯಾನ ಸಚಿವಾಲಯ ಸಮನ್ವಯ ಸಾಧಿಸುತ್ತಿದೆ ಎಂದು ಸಚಿವಾಲಯ ಸೋಮವಾರ ಹೇಳಿದೆ.

"ತುರ್ತು ಆಧಾರದ ಮೇಲೆ ವಿವಿಧ ರಾಜ್ಯಗಳ ಅವಶ್ಯಕತೆಗಳ ಆಧಾರದ ಮೇಲೆ, ಸಚಿವಾಲಯದ ಹಿರಿಯ ಅಧಿಕಾರಿಗಳು ಅಗತ್ಯವಿರುವ ವಸ್ತುಗಳನ್ನು ಒದಗಿಸಲು ಸರಬರಾಜು ಏಜೆನ್ಸಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಅಪೇಕ್ಷಿತ ಸ್ಥಳಗಳಿಗೆ  ವಸ್ತುಗಳ ಪೂರೈಕೆಗೆ  ಏರ್ ಇಂಡಿಯಾ ಮತ್ತು ಸಮೂಹದ ಇತರೆ ವಿಮಾನಗಳು ಸಂಚಾರ ನಡೆಸಲಿದೆ.ಈ ಮೂಲಕ ದೇಶಾದ್ಯಂತ ಸರಬರಾಜು ಕಾರ್ಯಾಚರಣೆ ನಡೆಯಲಿದೆ" ನಾಗರಿಕ ವಿಮಾನಯಾನ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ

 ಈ ವಿಮಾನಗಳಲ್ಲಿ ಅಗತ್ಯ ವಸ್ತುಗಳ ಸಾಗಾಟಕ್ಕೆ  ಸಚಿವಾಲಯವು ಅಧಿಕಾರ ಹೊಂದಿರುವ ಏಜೆನ್ಸಿಗಳು ತಮ್ಮ ಪ್ರದೇಶದ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸುತ್ತವೆ. "ದೇಶದ ಪೂರ್ವ ಮತ್ತು ಈಶಾನ್ಯ ಭಾಗಕ್ಕೆ ಅಗತ್ಯ ವಸ್ತುಗಳ ಪೂರೈಕೆಗಾಗಿ  ದೆಹಲಿಯಿಂದ ಕೋಲ್ಕತ್ತಾಗೆ ಅಲೈಯನ್ಸ್ ಏರ್ ವಿಮಾನವು ಮಾರ್ಚ್ 29, 2020 ರಂದು ಕೋಲ್ಕತಾ, ಗುವಾಹಟಿ, ದಿಬ್ರುಘರ್, ಅಗರ್ತಲಾಕ್ಕೆ ಸಂಚರಿಸಿದೆ. ಅಲ್ಲದೆ ದೆಹಲಿಯಿಂದ ಚಂಡೀಘರ್, ಉತ್ತರ ಪ್ರದೇಶಕ್ಕೆ, ಮುಂಬೈನಿಂದ ಇತರೆ ಪ್ರದೇಶಗಳಿಗೆ ವಿಮಾನಗಳು ಅಗತ್ಯ ಸರಕು ಸರಬರಾಜು ಮಾಡಿವೆ.
 

SCROLL FOR NEXT