ದೇಶ

ಕೊರೋನಾ ಹೆಮ್ಮಾರಿಗೆ ದೇಶದಲ್ಲಿ 28 ಬಲಿ: 1100 ಪಾಸಿಟಿವ್ ಪ್ರಕರಣಗಳು, ನಾಲ್ವರು ದೆಹಲಿ ಅಧಿಕಾರಿಗಳ ಅಮಾನತು

Nagaraja AB

ನವದೆಹಲಿ: ಮಾರಕ ಕೊರೋನಾವೈರಸ್ ಹರಡದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ದೇಶಾದ್ಯಂತ ಹೆಮ್ಮಾರಿಗೆ ಬಲಿಯಾದವರ ಸಂಖ್ಯೆ 28ಕ್ಕೆ ಏರಿಕೆ ಆಗಿದ್ದು, 1100 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 

ವಲಸೆ ಕಾರ್ಮಿಕರಿಂದ ಮಾರಣಾಂತಿಕ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು  ಎಲ್ಲಾ ರಾಜ್ಯ ಹಾಗೂ ಜಿಲ್ಲಾ ಗಡಿಗಳನ್ನು ಬಂದ್ ಮಾಡುವಂತೆ ಆದೇಶಿಸಿರುವ ಕೇಂದ್ರ ಸರ್ಕಾರ, ಈಗಾಗಲೇ ವಲಸೆ ಹೋಗುತ್ತಿರುವವರನ್ನು 14 ದಿನಗಳ ಕ್ವಾರೆಂಟೈನ್ ಗೆ ಕಳುಹಿಸಲು ಸೂಚಿಸಿದೆ. 

ರಾಷ್ಟ್ರ ರಾಜಧಾನಿ ದೆಹಲಿವೊಂದಲ್ಲಿಯೇ  23 ಹೊಸ ಪ್ರಕರಣಗಳು ನಿನ್ನೆ ವರದಿಯಾಗಿದ್ದು, ಒಟ್ಟಾರೇ ಸೋಂಕಿತರ ಸಂಖ್ಯೆ 72 ಆಗಿದೆ. ನೊಯ್ಡಾ, ಮಹಾರಾಷ್ಟ್ರ , ಬಿಹಾರ ಮತ್ತಿತರ ರಾಜ್ಯಗಳಲ್ಲಿಯೂ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಮತ್ತೊಂದೆಡೆ ಲಾಕ್ ಡೌನ್ ಸಂದರ್ಭದಲ್ಲಿ  ಕರ್ತವ್ಯದಲ್ಲಿ ಗಂಭೀರ ಲೋಪ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರದ ಇಬ್ಬರು ಹಿರಿಯ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಸೇವೆಯಿಂದ ಅಮಾನತು ಮಾಡಿದೆ. ಇತರ ಇಬ್ಬರಿಗೆ ಶೋಕಾಸ್ ನೋಟಿಸ್ ನೀಡಿದೆ.

ಸಾರಿಗೆ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಹಣಕಾಸು ವಿಭಾಗದ ಪ್ರಧಾನ ಕಾರ್ಯದರ್ಶಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಗೃಹ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದ್ದಾರೆ. 

SCROLL FOR NEXT