ದೇಶ

ದೆಹಲಿ ನಿಜಾಮುದ್ದೀನ್ ಕಾರ್ಯಕ್ರಮದಲ್ಲಿದ್ದವರ ಪೈಕಿ 441 ಜನರಿಗೆ ಕೊರೋನಾ ಲಕ್ಷಣ: ಆಸ್ಪತ್ರೆಗೆ ದಾಖಲು  

Srinivas Rao BV

ನವದೆಹಲಿ: ದೆಹಲಿಯಲ್ಲಿ ಕೊರೋನಾ ನಡುವೆಯೂ ನಿಜಾಮುದ್ದೀನ್ ಮಸೀದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರಿಂದ ಸೋಂಕು ಹರಡುವ ಭೀತಿ ಎದುರಾಗಿದೆ. 

ಕೊರೋನಾಗೆ ನಿಜಾಮುದ್ದೀನ್ ಹಾಟ್ ಸ್ಪಾಟ್ ಆಗಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 1,548 ಮಂದಿಯ ಪೈಕಿ 441 ಜನರಿಗೆ ರೋಗಲಕ್ಷಣ ಕಾಣಿಸಿಕೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ದೆಹಲಿಯ ಸ್ಥಿತಿಯ ಬಗ್ಗೆ ಸ್ವತಃ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಹಿತಿ ನೀಡಿದ್ದು 97 ಕೊರೋನಾ ಪ್ರಕರಣಗಳ ಪೈಕಿ 24 ಪ್ರಕರಣಗಳು ನಿಜಾಮುದ್ದೀನ್ ನಿಂದ ಉಂಟಾಗಿರುವುದಾಗಿದ್ದು 41 ಪ್ರಕರಣಗಳು ವಿದೇಶದಿಂದ ಬಂದಿರುವವರದ್ದಾಗಿದೆ. ಉಳಿದ 22 ಪ್ರಕರಣಗಳು ವಿದೇಶದಿಂದ ಬಂದವರ ಸಂಪರ್ಕದಲ್ಲಿರುವವರದ್ದಾಗಿದ್ದು, 10 ಪ್ರಕರಣಗಳ ಮೂಲ ಇನ್ನಷ್ಟೇ ತಿಳಿಯಬೇಕಿದೆ ಎಂದು ಹೇಳ್ದಿದಾರೆ

ಸ್ಥಳೀಯವಾಗಿ ಕೊರೋನಾ ವೈರಾಣು ಸೋಂಕು ಹರಡಿಲ್ಲ. ದೆಹಲಿಯಲ್ಲಿ ಕೊರೋನಾ ವೈರಸ್ 3 ನೇ ಹಂತ ತಲುಪಿಲ್ಲ ಎಂದು ಸಿಎಂ ಕೇಜ್ರಿವಾಲ್ ತಿಳಿಸಿದ್ದಾರೆ.   

ನಿಜಾಮುದ್ದೀನ್ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸುವಂತೆ ಲೆಫ್ಟಿನೆಂಟ್ ಗೌರ್ನರ್ ಗೆ ಪತ್ರ ಬರೆದಿರುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ. ಯಾವುದೇ ಅಧಿಕಾರಿಯ ಕರ್ತವ್ಯ ಲೋಪ ಕಂಡುಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ. ನಿಜಾಮುದ್ದೀನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಉಳಿದ, ರೋಗಲಕ್ಷಣಗಳಿಲ್ಲದ 1,107 ಜನರನ್ನು ಕ್ವಾರಂಟೈನ್ ಗೆ ಕಳಿಸಲಾಗಿದೆ.

SCROLL FOR NEXT