ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು 
ದೇಶ

ಮಹಾರಾಷ್ಟ್ರದಲ್ಲಿ ಒಂದೇ ದಿನ 72 ಮಂದಿಗೆ ಕೊರೋನಾ ವೈರಸ್, ಸೋಂಕಿತರ ಸಂಖ್ಯೆ 302ಕ್ಕೆ ಏರಿಕೆ

ಮಹಾರಾಷ್ಟ್ರದಲ್ಲಿ ಮಾರಕ ಕೊರೋನಾ ವೈರಸ್ ಹಾವಳಿ ಮತ್ತಷ್ಟು ಹೆಚ್ಚಾಗಿದ್ದು, ಇಂದು ಒಂದೇ ದಿನ ಬರೊಬ್ಬರಿ 72 ಮಂದಿಗೆ ವೈರಸ್ ಸೋಂಕು ತುಗುಲಿದೆ. 

ಮುಂಬೈ: ಮಹಾರಾಷ್ಟ್ರದಲ್ಲಿ ಮಾರಕ ಕೊರೋನಾ ವೈರಸ್ ಹಾವಳಿ ಮತ್ತಷ್ಟು ಹೆಚ್ಚಾಗಿದ್ದು, ಇಂದು ಒಂದೇ ದಿನ ಬರೊಬ್ಬರಿ 72 ಮಂದಿಗೆ ವೈರಸ್ ಸೋಂಕು ತುಗುಲಿದೆ. 

ಮಹಾರಾಷ್ಟ್ರದಲ್ಲಿ ಒಂದೇ ದಿನ ಗರಿಷ್ಠ 72 ಮಂದಿಗೆ ಕೊರೋನಾ ವೈರಸ್ ಸೋಂಕು ತಗುಲಿದ್ದು, ವಾಣಿಜ್ಯ ರಾಜಧಾನಿ ಮುಂಬೈ ಮಹಾನಗರಿಯೊಂದರಲ್ಲೇ 59 ಮಂದಿಯಲ್ಲಿ ಹೊಸದಾಗಿ ಸೋಂಕು ಕಂಡುಬಂದಿದೆ. ಮುಂಬೈ ಹೊರತು ಪಡಿಸಿ ಅಹ್ಮದ್ ನಗರದಲ್ಲಿ ಮೂರು, ಪುಣೆ, ಥಾಣೆ,  ವಾಸೈ, ವಿರಾರ್ ಮತ್ತು ಕಲ್ಯಾಣ್-ಡೊಂಬಿವಾಲಿಗಳಲ್ಲಿ ತಲಾ 2 ಸೋಂಕು ಪ್ರಕರಣಗಳು ಕಂಡುಬಂದಿದೆ.

ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 302ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೊರೋನಾ ವೈರಸ್ ಭಾರತದಲ್ಲಿ ಪತ್ತೆಯಾದ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ವೈರಸ್ ಸೋಂಕಿತರ ಪ್ರಮಾಣ ಏರಿಕೆಯಾಗಿದೆ. ಇದು  ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಲ್ಲೂ ಮೊದಲಾಗಿದೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮರು ವ್ಯಾಖ್ಯಾನ ವಿವಾದದ ನಡುವೆ ಅರಾವಳಿಯಲ್ಲಿ ಹೊಸ ಗಣಿಗಾರಿಕೆ ಗುತ್ತಿಗೆ 'ಸಂಪೂರ್ಣ ನಿಷೇಧಿಸಿದ' ಕೇಂದ್ರ

ಅತ್ಯಾಚಾರ ಸಂತ್ರಸ್ತೆ ಮೇಲೆ ಪೊಲೀಸರಿಂದ ದೌರ್ಜನ್ಯ: ‘ಸತ್ತ ಆರ್ಥಿಕತೆ ಮಾತ್ರವಲ್ಲ, ಸತ್ತ ಸಮಾಜದತ್ತ ಸಾಗುತ್ತಿದ್ದೇವೆ’

Vijay Hazare Trophy: 169 ಎಸೆತಗಳಲ್ಲಿ 212 ರನ್ ಚಚ್ಚಿದ Swastik Samal ಐತಿಹಾಸಿಕ ದಾಖಲೆ, ಸಂಜು ಸ್ಯಾಮ್ಸನ್ ರೆಕಾರ್ಡ್ ಸಮಬಲ

Vijay Hazare Trophy: 84 ಎಸೆತಗಳಲ್ಲಿ 190 ರನ್ ಚಚ್ಚಿದ ವೈಭವ್ ಸೂರ್ಯವಂಶಿ; 574 ರನ್ ಸಿಡಿಸಿ ಬಿಹಾರ ವಿಶ್ವದಾಖಲೆ!

Unnao rape case: ಆರೋಪಿ ಶಿಕ್ಷೆ ಅಮಾನತು ವಿರೋಧಿಸಿ ಪ್ರತಿಭಟನೆ; ಸಂತ್ರಸ್ತೆ, ತಾಯಿ ಮೇಲೆ ಪೊಲೀಸರ ಬಲಪ್ರಯೋಗ, ಸುದ್ದಿಗೋಷ್ಠಿಗೂ ತಡೆ! Video

SCROLL FOR NEXT