ಲವ್ ಅಗರ್ವಾಲ್ 
ದೇಶ

ಜನರ ಕಡಿಮೆ ಸಹಕಾರದಿಂದ ದೇಶದಲ್ಲಿ ಕೋವಿಡ್-19 ಹಾಟ್ ಸ್ಪಾಟ್ ಹೆಚ್ಚುತ್ತಿದೆ: ಆರೋಗ್ಯ ಸಚಿವಾಲಯ

ದೇಶಾದ್ಯಂತ ಈವರೆಗೂ 1,200 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಹಾಟ್ ಸ್ಪಾಟ್ ಗಳು ಏರಿಕೆಯಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. 

ನವದೆಹಲಿ: ದೇಶಾದ್ಯಂತ ಈವರೆಗೂ 1,200 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಹಾಟ್ ಸ್ಪಾಟ್ ಗಳು ಏರಿಕೆಯಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. 

ಮಾ.31 ರಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿರುವ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್, ಕೊರೋನಾ ವೈರಸ್ ಸೋಂಕಿತರ ಸಂಪರ್ಕ ಹಾಗೂ ತಡೆಯುವಿಕೆ ಕ್ರಮಗಳನ್ನು ಮತ್ತಷ್ಟು ತೀವ್ರಗೊಳಿಸಲಿದೆ ಎಂದು ಹೇಳಿದ್ದಾರೆ. 

ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 227 ಕೊರೋನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಜನರ ಸಹಕಾರ ಲಭ್ಯವಾಗದ ಕಾರಣ ಹಾಟ್ ಸ್ಪಾಟ್ ಗಳು ಏರಿಕೆಯಾಗಿವೆ ಎಂದು ಹೇಳಿದ್ದಾರೆ. 

ಯಾವುದೇ ಒಂದು ಕೋವಿಡ್-19 ಪ್ರಕರಣ ವರದಿಯಾದರೂ ಅದು ಸರ್ಕಾರಕ್ಕೆ ಮತ್ತೊಂದು ಹಾಟ್ ಸ್ಪಾಟ್ ಆಗಲಿದೆ. ಮುಂದಿನ ದಿನಗಳಲ್ಲಿ ವೈರಸ್ ಹರಡುವಿಕೆ ತಡೆಗಟ್ಟುವುದಕ್ಕೆ ಸರ್ಕಾರ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅಗರ್ವಾಲ್ ಮಾಹಿತಿ ನೀಡಿದ್ದಾರೆ. 

ಈ ವರೆಗೂ 42,788 ಸ್ಯಾಂಪಲ್ ಗಳನ್ನು ಪರೀಕ್ಷೆ ಮಾಡಲಾಗಿದ್ದು, ಸೋಮವಾರ ಒಂದೇ ದಿನ 4,346 ಸ್ಯಾಂಪಲ್ ಗಳನ್ನು ಪರೀಕ್ಷಿಸಲಾಗಿದೆ ಎಂದು ಅಗರ್ವಾಲ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಖಾತೆಗಾಗಿ ಫೈಟ್: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ರಾಮಲಿಂಗಾರೆಡ್ಡಿ!

ಪುಣೆ: TCS ಬಳಿಕ ಈಗ Wipro ಕಚೇರಿಯಲ್ಲಿ ಮತಾಂತರ ಮತ್ತು ಕಿರುಕುಳ ಆರೋಪ, Hindu ಟೆಕ್ಕಿ ರಾಜಿನಾಮೆ!

ಸುವೇಂದು ಅಧಿಕಾರಿ ಪಿಎ ಹತ್ಯೆ: ಕೊನೆಗೂ ಗ್ಯಾಂಗ್ ಸ್ಟರ್ Monu ಶರಣಾಗತಿ!

ಅಫ್ಘಾನ್ ವಿರುದ್ಧದ ಏಕದಿನ ಸರಣಿಗೆ ಕೊಹ್ಲಿ ಬದಲು ಗಾಯಕ್ವಾಡ್ ಆಯ್ಕೆ ಸಾಧ್ಯತೆ; ರಜತ್ ಪಾಟಿದಾರ್​ಗೂ ಸ್ಥಾನ?

ಮುಸ್ಲಿಂ ಸಮುದಾಯಕ್ಕೆ 5 ಸಚಿವ ಸ್ಥಾನ ಕೊಡಿ, ಇಲ್ಲವೆ ಪರಿಣಾಮ ನೆಟ್ಟಗಿರಲ್ಲ: ಕಾಂಗ್ರೆಸ್‌ಗೆ ಮೌಲ್ವಿಗಳ ನೇರ ಎಚ್ಚರಿಕೆ

SCROLL FOR NEXT