ಧಾರ್ಮಿಕ ಗುರು ದಲೈಲಾಮ 
ದೇಶ

ಭಾರತದ ಕೊರೋನಾ ವಿರುದ್ಧದ ಹೋರಾಟಕ್ಕೆ ದಲೈಲಾಮ ಬೆಂಬಲ, ಪ್ರಧಾನಿ ಮೋದಿ ಕಾರ್ಯ ಶ್ಲಾಘಿಸಿದ ಬೌದ್ಧ ಧಾರ್ಮಿಕ ಗುರು!

ಇಡೀ ವಿಶ್ವವನ್ನೇ ಕಾಡುತ್ತಿರುವ ಮಾರಕ ಕೊರೋನಾ ವೈರಸ್ ವಿರುದ್ಧ ಭಾರತದ ಹೋರಾಟವನ್ನು ಖ್ಯಾತ ಬೌದ್ಧ ಧಾರ್ಮಿಕ ಗುರು ದಲೈಲಾಮಾ ಶ್ಲಾಘಿಸಿದ್ದು, ಪಿಎಂ ಕೇರ್ಸ್ ಫಂಡ್ ಗೆ ತಾವೂ ಕೂಡ ತಮ್ಮ ಕೈಲಾದ ಧನ ಸಹಾಯ ಮಾಡುವುದಾಗಿ ಘೋಷಣೆ  ಮಾಡಿದ್ದಾರೆ.

ಧರ್ಮಶಾಲಾ: ಇಡೀ ವಿಶ್ವವನ್ನೇ ಕಾಡುತ್ತಿರುವ ಮಾರಕ ಕೊರೋನಾ ವೈರಸ್ ವಿರುದ್ಧ ಭಾರತದ ಹೋರಾಟವನ್ನು ಖ್ಯಾತ ಬೌದ್ಧ ಧಾರ್ಮಿಕ ಗುರು ದಲೈಲಾಮಾ ಶ್ಲಾಘಿಸಿದ್ದು, ಪಿಎಂ ಕೇರ್ಸ್ ಫಂಡ್ ಗೆ ತಾವೂ ಕೂಡ ತಮ್ಮ ಕೈಲಾದ ಧನ ಸಹಾಯ ಮಾಡುವುದಾಗಿ ಘೋಷಣೆ  ಮಾಡಿದ್ದಾರೆ.

ಧರ್ಮಶಾಲಾದಲ್ಲಿ ಇದೇ ಮೊದಲ ಬಾರಿಗೆ ಕೊರೋನಾ ವೈರಸ್ ವಿಚಾರದ ಕುರಿತು ಮಾತನಾಡಿದ ದಲೈಲಾಮಾ ಅವರು, ಇಂತಹ ಕ್ಲಿಷ್ಠ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ವಹಣಾ ಚಾತುರ್ಯವನ್ನು ಮೆಚ್ಚಲೇಬೇಕು. ಇಡೀ ವಿಶ್ವವೇ ಮಾರಕ ಕೊರೋನಾ  ವೈರಸ್ ದಾಳಿಗೆ ನಲುಗುತ್ತಿದೆ. ಇಂತಹ ಕಠಿಣ ಸಂದರ್ಭದಲ್ಲಿ ಕಠಿಣ ಕ್ರಮಗಳಿಂದ ಮಾತ್ರ ಪರಿಸ್ಥಿತಿ ನಿಯಂತ್ರಣ ಸಾಧ್ಯ ಎಂದು ಹೇಳಿದ್ದಾರೆ. ಅಂತೆಯೇ ಕೊರೊನಾ ವೈರಸ್‌ ಸೋಂಕನ್ನು ನಿಯಂತ್ರಿಸಲು ಪ್ರಧಾನಿ ಮೋದಿಯ ಪ್ರಯತ್ನಗಳಿಗೆ ಬೆಂಬಲ ಸೂಚಿಸಿದ್ದಾರೆ.

ಈ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ದಲೈಲಾಮ ಅವರು ಪತ್ರ ಬರೆದಿದ್ದು, ದಲೈಲಾಮ ಅವರು ಕೊರೊನಾ ವೈರಸ್‌ ನಿಯಂತ್ರಿಸುವಲ್ಲಿ ಕೇಂದ್ರ ಸರಕಾರ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳನ್ನು ಶ್ಲಾಘಿಸಿದ್ದಾರೆ. ಅಂತಾರಾಷ್ಟ್ರೀಯ ಸಂಘಟನೆಯಾದ 'ದಕ್ಷಿಣ  ಏಷ್ಯಾ ಪ್ರಾದೇಶಿಕ ಸಹಕಾರ ಸಂಘ' (ಸಾರ್ಕ್) ನಲ್ಲಿ ಪ್ರಧಾನಿ ಮೋದಿ ಅವರ ಪಾತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

'ಕೊರೋನಾ ವೈರಸ್ ವಿರುದ್ಧ ಹೋರಾಡಲು ಸಾರ್ಕ್ ದೇಶಗಳ ಸಹಯೋಗದಲ್ಲಿ ತುರ್ತು ನಿಧಿ ಸ್ಥಾಪಿಸಿರುವುದು ಹಾಗೂ ಮಾಹಿತಿ ವಿನಿಮಯ ಮಾಡುಕೊಳ್ಳುತ್ತಿರುವುದು ಒಂದು ಉತ್ತಮ ನಡೆ. ಅಲ್ಲದೆ ಲಾಕ್ ಡೌನ್ ನಂತಹ ಕಠಿಣ ಕ್ರಮದಿಂದಾಗಿ ವೈರಸ್ ಸೋಂಕು ಪ್ರಸರಣ  ತಡೆಯಬಹುದು. ಆದರೆ ಲಾಕ್ ಡೌನ್ ನಿಂದಾಗಿ ಲಕ್ಷಾಂತರ ಜನರ ನಿತ್ಯ ಜೀವನದ ಮೇಲೆ ಹೊಡೆತ ಬೀಳಬಹುದು. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ನಿಧಿ ಸ್ಥಾಪನೆ ಮಾಡಿದ್ದಾರೆ.  ಪಿಎಂ ಕೇರ್‌ ಫಂಡ್‌, ಲಾಕ್‌ಡೌನ್‌ನಿಂದಾಗಿ ಒಂದು ಹೊತ್ತಿನ ಊಟವನ್ನೂ  ಕಳೆದುಕೊಂಡವರ ನೆರವಿಗಿದೆ. ದಲೈಲಾಮಾ ಟ್ರಸ್ಟ್‌ನಿಂದ ನಾನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿದ್ದೇನೆ. ಹಾಗೂ ನಮ್ಮ ಕಚೇರಿಯಲ್ಲಿ ಕೆಲಸ ಮಾಡುವವರಿಗೂ ಒಂದು ದಿನದ ಸಂಬಳವನ್ನು ಪಿಎಂ ಕೇರ್‌ ಫಂಡ್‌ಗೆ ನೀಡುವಂತೆ ತಿಳಿಸಿದ್ದೇನೆ ಎಂದು  ದಲೈಲಾಮಾ ಪತ್ರದಲ್ಲಿ ಹೇಳಿದ್ದಾರೆ. 

ಕೊರೊನಾ ವೈರಸ್‌ ಪರಿಣಾಮ ದೇಶಾದ್ಯಂತ ಲಾಕ್ಡೌನ್‌ ಜಾರಿಯಲ್ಲಿದ್ದು, ಇದರಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸಹಾ ಮಾಡಲೆಂದು ಕೇಂದ್ರ ಸರಕಾರವು' ಪಿಎಂ ಕೇರ್ಸ್‌ ಫಂಡ್‌' ಸ್ಥಾಪಿಸಲಾಗಿದೆ. ಈಗಾಗಲೇ ಹಲವಾರು ಉದ್ಯಮಿಗಳು, ನಟರು, ಸಂಸ್ಥೆಗಳು ಕೊರೊನಾ ವಿರುದ್ಧದ  ಹೋರಾಟಕ್ಕೆ ಕೈಜೋಡಿಸಿದ್ದಾರೆ. ಎಸ್‌ಬಿಐನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 2,56,000 ನೌಕರರು ಕೊರೊನಾ ವಿರುದ್ಧದ ಹೋರಾಟಕ್ಕಾಗಿ ತಮ್ಮ ಎರಡು ದಿನಗಳ ಸಂಬಳವನ್ನು ಪ್ರಧಾನ ಮಂತ್ರಿಯ ರಾಷ್ಟ್ರೀಯ ಪರಿಹಾರ ನಿಧಿಗೆ ಕೊಡುಗೆ ನೀಡಲು ನಿರ್ಧರಿಸಿದ್ದಾರೆ. ಎಸ್‌ಬಿಐ  ನೌಕರರ ಈ ಒಂದು ದಿಟ್ಟ ನಿರ್ಧಾರದಿಂದ ಪಿಎಂ ಕೇರ್ಸ್‌ ಫಂಡ್‌ಗೆ 100 ಕೋಟಿ ರೂಪಾಯಿ ಜಮೆಯಾಗಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT