ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕೋವಿಡ್-19: ಕಂಟೈನ್ಮೆಂಟ್ ಝೋನ್'ನಲ್ಲಿರುವ ಎಲ್ಲರ ತಪಾಸಣೆಗೆ ದೆಹಲಿ ನಿರ್ಧಾರ, ದೇಶದಲ್ಲಿ 33,610ಕ್ಕೇರಿದ ಸೋಂಕಿತರ ಸಂಖ್ಯೆ

ದೇಶದಲ್ಲಿ ಕೊರೋನಾ ರೌದ್ರನರ್ತನ ಮುಂದುವರೆಸಿದ್ದು, ಮಹಾಮಾರಿ ವೈರಸ್ ಸೋಂಕಿಗೆ 33,610 ಮಂದಿ ಬಳಲುತ್ತಿದ್ದಾರೆ. ಈ ನಡುವೆ ದೆಹಲಿ ಸರ್ಕಾರ ವೈರಸ್ ವಿರುದ್ಧ ತನ್ನ ಕ್ರಮಗಳನ್ನು ಮುಂದುವರೆಸಿದ್ದು, ಇದೀಗ ಕಂಟೈನ್ಮೆಂಟ್ ಢೋನ್ ನಲ್ಲಿರುವ ಪ್ರತೀಯೊಬ್ಬರನ್ನೂ ತಪಾಸಣೆ ನಡೆಸಲು ನಿರ್ಧರಿಸಿದೆ ಎಂದು ಶುಕ್ರವಾರ ತಿಳಿದುಬಂದಿದೆ.

ಸಂಗ್ರಹ ಚಿತ್ರ
Manjula VN
Updated On : 1 May 2020, 8:02 am

ನವದೆಹಲಿ: ದೇಶದಲ್ಲಿ ಕೊರೋನಾ ರೌದ್ರನರ್ತನ ಮುಂದುವರೆಸಿದ್ದು, ಮಹಾಮಾರಿ ವೈರಸ್ ಸೋಂಕಿಗೆ 33,610 ಮಂದಿ ಬಳಲುತ್ತಿದ್ದಾರೆ. ಈ ನಡುವೆ ದೆಹಲಿ ಸರ್ಕಾರ ವೈರಸ್ ವಿರುದ್ಧ ತನ್ನ ಕ್ರಮಗಳನ್ನು ಮುಂದುವರೆಸಿದ್ದು, ಇದೀಗ ಕಂಟೈನ್ಮೆಂಟ್ ಢೋನ್ ನಲ್ಲಿರುವ ಪ್ರತೀಯೊಬ್ಬರನ್ನೂ ತಪಾಸಣೆ ನಡೆಸಲು ನಿರ್ಧರಿಸಿದೆ ಎಂದು ಶುಕ್ರವಾರ ತಿಳಿದುಬಂದಿದೆ. 

ಈ ಕುರಿತು ದೆಹಲಿ ಸರ್ಕಾರ ಮಾಹಿತಿ ನೀಡಿದ್ದು, ಕಂಟೈನ್ಮೆಂಟ್ ಜೋನ್ ನಲ್ಲಿರುವ ನೀಡಿರುವ ಆದೇಶಗಳ ಪ್ರಕಾರ, ಆ ಪ್ರದೇಶದಲ್ಲಿ ನೆಲೆಯೂರಿರುವ ಪ್ರತೀಯೊಬ್ಬರನ್ನೂ 14 ದಿನಗಳಲ್ಲಿ ಮೂರು ಬಾರಿ ಪರೀಕ್ಷೆಗೊಳಪಡಿಸಲಾಗುತ್ತದೆ. ಶಿಷ್ಟಾಚಾರದ ಪ್ರಕಾರವೇ ಎಲ್ಲಾ ಕೊರೋನಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಹೇಳಿದೆ. 

ಕಂಟೈನ್ಮೆಂಟ್ ಜೋನ್ ನಲ್ಲಿರುವ ಪ್ರತೀಯೊಬ್ಬ ನಿವಾಸಿಗೂ ಆರೋಗ್ಯ ಸೇತು ಆ್ಯಪ್ ಬಗ್ಗೆ ತಿಳುವಲಿಕೆ ಇರಬೇಕು. 60 ವರ್ಷಕ್ಕೂ ಮೇಲ್ಪಟ್ಟ ಜನರ ಮೇಲೆ ಹಾಗೂ ಅರೋಗ್ಯ ಪೀಡಿತರ ಮೇಲೆ, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವವರ ಮೇಲೆ ಸೂಕ್ತ ನಿಗಾವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. 

Advertisement

Advertisement

ಈ ನಡುವೆ ಲಾಕ್'ಡೌನ್ ತೆರವಿಗೆ ಇನ್ನೂ 3 ದಿನಗಳು ಬಾಕಿ ಇರುವಾಗಲೇ ದೇಶದಲ್ಲಿ ಕೊರೋನಾ ಸಾವಿನ ಸಂಖ್ಯೆ ಗುರುವಾರ ದಾಖಲೆ ಪ್ರಮಾಣದ ಏರಿಕೆ ಕಂಡಿದೆ. 

ಒಂದೇ ದಿನ 82 ಮಂದಿ ಬಲಿಯಾಗಿದ್ದು, ಮಾರಕ ವೈರಾಣುವಿಗೆ ಈವರೆಗೆ ಬಾರತದಲ್ಲಿ ಬಲಿಯಾದವರ ಸಂಖ್ಯೆ  1,075ಕ್ಕೆ ಏರಿಕೆಯಾಗಿದ್ದು, ಇದೇ ವೇಳೆ ಗುರುವಾರ ಮತ್ತೆ ಹೊಸದಾಗಿ  1,718 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 33,610ಕ್ಕೆ ಏರಿಕೆಯಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement