ಕಮಲ್ ಹಾಸನ್ 
ದೇಶ

ತ್ಯಾಗರಾಜರ ಕುರಿತು ಆಕ್ಷೇಪಾರ್ಹ ಹೇಳಿಕೆ: ಕಮಲ ಹಾಸನ್ ವಿರುದ್ಧ ಸಂಗೀತಗಾರರು ಕೆಂಡಾಮಂಡಲ, ಕ್ಷಮೆಗೆ ಆಗ್ರಹ

ಅಪ್ರತಿಮ ವಾಗ್ಗೇಯಕಾರ, ಸಂತ, ತ್ಯಾಗರಾಜರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ನಟ ಕಮಲ ಹಾಸನ್ ವಿರುದ್ಧ ಸಂಗೀಗಾರರು ಕೆಂಡಾಮಂಡಲರಾಗಿದ್ದಾರೆ. 

ಅಪ್ರತಿಮ ವಾಗ್ಗೇಯಕಾರ, ಸಂತ, ತ್ಯಾಗರಾಜರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ನಟ ಕಮಲ ಹಾಸನ್ ವಿರುದ್ಧ ಸಂಗೀಗಾರರು ಕೆಂಡಾಮಂಡಲರಾಗಿದ್ದಾರೆ. 

ನಟ ವಿಜಯ್ ಸೇತುಪತಿ ಜೊತೆಗೆ ವಿಡಿಯೋ ಚಾಟ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕಮಲಹಾಸನ್ ತಮ್ಮ ವೃತ್ತಿ ಜೀವನ ಹಾಗೂ ಸಿನಿಮಾದ ಬಗ್ಗೆ ಮಾತನಾಡುತ್ತ ತ್ಯಾಗರಾಜರನ್ನು ಉಲ್ಲೇಖಿಸಿದ್ದರು. ಈ ಹೇಳಿಕೆಯಿಂದ ಕಮಲ ಹಾಸನ್ ಸಂಗೀತಗಾರರಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 

ಖ್ಯಾತ ಸಂಗೀತಗಾರ ಪಾಲ್ಘಾಟ್ ರಾಮ್ ಪ್ರಸಾದ್ ಕಮಲ ಹಾಸನ್ ಹೇಳಿಕೆಯನ್ನು ಖಂಡಿಸಿ ಕ್ಷಮೆಗೆ ಆಗ್ರಹಿಸಿ  Change.org ನಲ್ಲಿ ಸಹಿ ಸಂಗ್ರಹ ಮಾಡುತ್ತಿದ್ದಾರೆ. ಕಮಲ ಹಾಸನ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ತ್ಯಾಗರಾಜರು ತಂಜಾವೂರ್ ನ ರಸ್ತೆಗಳಲ್ಲಿ ಯಾವುದಕ್ಕೂ ಬೇಡುತ್ತಿರಲಿಲ್ಲ. ಭಗವಾನ್ ರಾಮನನ್ನು ಸ್ತುತಿಸಿ ಕೀರ್ತನೆಗಳನ್ನು ರಚಿಸಿ ಊಂಛವೃತ್ತಿಯಿಂದ ಜೀವನ ನಡೆಸುತ್ತಿದ್ದರು, ಎಂದಿಗೂ ಯಾವುದಕ್ಕೂ ತ್ಯಾಗರಾಜರು ಬೇಡಿದವರಲ್ಲ, ಆದರೆ ಕಮಲಹಾಸನ್ ಅವರ ಹೇಳಿಕೆಯಿಂದ ಭಕ್ತಿ ಮಾರ್ಗ ಅನುಸರಿಸುವ ಸಂಗೀತಗಾರರಿಗೆ ಅವಮಾನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಸಂಪ್ರದಾಯದ ಹಲವಾರು ಖ್ಯಾತ ಸಂಗೀತಗಾರರು ಕಮಲಹಾಸನ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಕ್ಷಮೆಗೆ ಆಗ್ರಹಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ