ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕೇರಳದಲ್ಲಿ ಸದ್ಯ ಇರುವುದು ಕೇವಲ 30 ಕೊರೋನಾ ಸೋಂಕಿತರು

ಜನವರಿ 30 ರಂದು ದೇಶದ ಮೊದಲ ಕೊರೊನಾ ವೈರಸ್‌ ಸೋಂಕು ಪ್ರಕರಣ ಕಾಣಿಸಿಕೊಂಡು, ನಂತರದಲ್ಲಿ ರಾಜ್ಯವಾರು ಸೋಂಕಿತರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಹೊಯ್ದಾಡುತ್ತಿದ್ದ ಕೇರಳದಲ್ಲಿ ಈ ವರೆಗೆ ಒಟ್ಟಾರೆ 503 ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಸಾಂದರ್ಭಿಕ ಚಿತ್ರ
Shilpa D
Updated On : 7 May 2020, 12:51 pm

ಕೊಚ್ಚಿ: ಜನವರಿ 30 ರಂದು ದೇಶದ ಮೊದಲ ಕೊರೊನಾ ವೈರಸ್‌ ಸೋಂಕು ಪ್ರಕರಣ ಕಾಣಿಸಿಕೊಂಡು, ನಂತರದಲ್ಲಿ ರಾಜ್ಯವಾರು ಸೋಂಕಿತರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಹೊಯ್ದಾಡುತ್ತಿದ್ದ ಕೇರಳದಲ್ಲಿ ಈ ವರೆಗೆ ಒಟ್ಟಾರೆ 503 ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಸದ್ಯ ಅಲ್ಲಿ ಕೇವಲ 30 ಕೊರೊನಾ ವೈರಸ್‌ ಸೋಂಕಿತರು ಮಾತ್ರವೇ ಇದ್ದು, ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.  ಕೇರಳದಲ್ಲಿ ಈ ವರೆಗೆ ಒಟ್ಟಾರೆ 503 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದಕ್ಕೆ ಪ್ರತಿಯಾಗಿ ಈ ವರೆಗೆ 469 ಮಂದಿ ಗುಣಮುಖರಾಗಿದ್ದಾರೆ. ಅಲ್ಲಿ ಸೋಂಕಿನಿಂದಾಗಿ ನಾಲ್ವರು  ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು 30 ಮಂದಿಯಷ್ಟೇ ಆಸ್ಪತ್ರೆಯಲ್ಲಿದ್ದಾರೆ.

ಕೇರಳದಲ್ಲಿ ಕಳೆದೆ 24 ಗಂಟೆಗಳಲ್ಲಿ ಯಾವುದೇ ಹೊಸ ಸೋಂಕು ಪ್ರಕರಣಗಳೂ ಕಂಡು ಬಂದಿಲ್ಲ. ಕೇರಳದಲ್ಲಿ ಕೋವಿಡ್‌ ರೋಗ ಗುಣಮುಖವಾಗುತ್ತಿರುವ ಪ್ರಮಾಣ ಶೇ. 93.24% ರಷ್ಟು ಇದೆ. ಇದು ದೇಶದ ಯಾವುದೇ ರಾಜ್ಯಗಳಿಗಿಂತಲೂ ಅಧಿಕ. ಕರ್ನಾಟಕದಲ್ಲಿ ಸೋಂಕಿನಿಂದ ಗುಣಮುಖರಾಗುವವರ ಪ್ರಮಾಣ 49.18% ಆಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಅಂಕಿಅಂಶಗಳಿಂದ ಗೊತ್ತಾಗಿದೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement