ದೇಶ

ಪಿಎಂ ಕೇರ್ಸ್ ಫಂಡ್ ಪಾರದರ್ಶಕವಾಗಿರಬೇಕು: ರಾಹುಲ್ ಗಾಂಧಿ ಆಗ್ರಹ

Vishwanath S

ನವದೆಹಲಿ: ಪಿಎಂ ಕೇರ್ಸ್ ನಿಧಿಯ ಬಗ್ಗೆ ಹೆಚ್ಚುತ್ತಿರುವ ವಿವಾದ, ಗೊಂದಲದ ಮಧ್ಯೆಯೇ , ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಅವರು ನಿಧಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಆಗ್ರಹಪಡಿಸಿದ್ದಾರೆ. 

ಪಿಎಂ ಕೇರ್ಸ್ ಫಂಡ್ ಪಾರದರ್ಶಕವಾಗಿರಬೇಕು. ಆಡಿಟ್ ಇರಬೇಕು. ಎಷ್ಟು ಹಣವನ್ನು ಸಂಗ್ರಹಿಸಲಾಗಿದೆ, ಮತ್ತು ಅದನ್ನು ಎಲ್ಲಿ ಖರ್ಚು ಮಾಡಲಾಗಿದೆ ಎಂಬುದರ ಜನರಿಗೆ ಸರಿಯಾದ ಮಾಹಿತಿ ಕೊಡಬೇಕು ಎಂದರು. 

ಲೆಕ್ಕಪರಿಶೋಧನೆಯಲ್ಲಿ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇರಬಾರದು! ಎಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಆರೋಗ್ಯಾ ಸೇತು ಆ್ಯಪ್‌ನ ಪಾರದರ್ಶಕತೆ ಕುರಿತು ಅವರು ತಮ್ಮ ಅನುಮಾನಗಳನ್ನು ರಾಹುಲ್ ಮತ್ತೆ ಪುನರುಚ್ಚರಿಸಿದ್ದಾರೆ. ಕೊರೋನ ಸೋಂಕಿನ ಬಿಕ್ಕಟ್ಟಿನ ನಡುವೆ ಜನರಿಗೆ ಸಹಾಯ ಮಾಡಲು ಸರ್ಕಾರವು ಆ್ಯಪ್‌ ಬಳಸುವುದಕ್ಕೆ ಯಾವುದೇ ತೊಂದರೆಗಳಿಲ್ಲ, ಆದರೆ ಪಾರದರ್ಶಕತೆ ಕಾಪಾಡಬೇಕು ಎಂದರು. ಎನ್‌ಡಿಎ ಸರ್ಕಾರವು ಪಿಎಂ ಕೇರ್ಸ್ ಫಂಡ್‌ನ ಲೆಕ್ಕಪರಿಶೋಧನೆಯನ್ನು ತಳ್ಳಿಹಾಕಿದ ನಂತರ ಅವರು ಈ ರಾಹುಲ್ ಇದರ ಬಗ್ಗೆ ಆಗ್ರಹ ಮಾಡಿದ್ದಾರೆ.

SCROLL FOR NEXT