ದೇಶ

ಅಕ್ರಮ ಕಾರ್ಯಾಚರಣೆಗೆ ಶೇ.100ರಷ್ಟು ದಂಡ ಪಾವತಿಸಲು 2019ರಲ್ಲಿ ಎಲ್ ಜಿ ಪಾಲಿಮರ್ಸ್ ಒಪ್ಪಿಕೊಂಡಿತ್ತು!

Sumana Upadhyaya

ಹೈದರಾಬಾದ್: ವಿಶಾಖಪಟ್ಟಣಂ ಎಲ್ ಜಿ ಪಾಲಿಮರ್ಸ್ ಘಟಕ ಪರಿಸರ ತೆರವು (Environment Clearance) ಮಾನ್ಯತೆ ಹೊಂದಿಲ್ಲದಿರುವುದರಿಂದ ದಂಡ ಎದುರಿಸುವ ಸಾಧ್ಯತೆಯಿದೆ.

ಕಾರ್ಖಾನೆಯನ್ನು ಅಕ್ರಮವಾಗಿ ನಡೆಸಲಾಗುತ್ತಿದೆ ಎಂದು ಒಪ್ಪಿಕೊಂಡಿರುವ ಕಂಪೆನಿ ಶೇಕಡಾ 100ರಷ್ಟು ದಂಡ ಕಟ್ಟಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ನಾಲ್ಕು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಕಂಪೆನಿಗೆ ಸರ್ಕಾರ ಎಷ್ಟು ದಂಡ ಹಾಕಲಿದೆ ಎಂಬುದು ಸ್ಪಷ್ಟವಾಗಿಲ್ಲ.

ಕಳೆದ ವರ್ಷ ಅಂದರೆ 2019ರ ಮೇ ತಿಂಗಳಲ್ಲಿ ಎಲ್ ಜಿ ಪಾಲಿಮರ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕ ಪಿ ಚಂದ್ರ ಮೋಹನ್ ರಾವ್ ಸಲ್ಲಿಸಿದ್ದ ಅಫಿಡವಿಟ್ಟಿನಲ್ಲಿ ಕಂಪೆನಿಗೆ ಪರಿಸರ ತೆರವು ಮಾನ್ಯತೆ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. 2017ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ ಅವರು ತಮ್ಮ ಕಂಪೆನಿ ನಿಯಮಗಳನ್ನು ಮತ್ತು ಕಾರ್ಖಾನೆಗಳ ಷರತ್ತುಗಳನ್ನು ಪಾಲಿಸಿಲ್ಲ ಎಂಬುದು ಒಪ್ಪಿಕೊಂಡಿದ್ದಾರೆ.

ಎಲ್ ಜಿ ಪಾಲಿಮರ್ಸ್ ಕ್ಯಾಟಗರಿ ಎಯಲ್ಲಿ ಬರುತ್ತಿದ್ದು ಅದಕ್ಕಾಗಿ ಪರಿಸರ ಪರವಾನಗಿ ಪೂರ್ವ ಅನುಮತಿ ಸಿಗಬೇಕು.

SCROLL FOR NEXT