ದೇಶ

ವಿಶ್ವ ಅಮ್ಮಂದಿರ ದಿನ:ಬಾನಾಡಿಗಳಾಗಿ ಭಾರತೀಯರನ್ನು ಹೊತ್ತು ತರುವ ಕಾರ್ಯದಲ್ಲಿ ಇಬ್ಬರು ಮಹಿಳೆಯರು

Sumana Upadhyaya

ಚೆನ್ನೈ: ಮೇ ತಿಂಗಳ ಎರಡನೇ ಭಾನುವಾರ ವಿಶ್ವ ಅಮ್ಮಂದಿರ ದಿನ. ಈ ವರ್ಷ ಕೋವಿಡ್-19 ಸಂಕಷ್ಟದ ಸಮಯದಲ್ಲಿ ವಿದೇಶಗಳಲ್ಲಿರುವ ಭಾರತೀಯರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ.

ನಿನ್ನೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ವಿದೇಶದಿಂದ ಭಾರತೀಯರನ್ನು ಕರೆತರಲು ಹೋದಾಗ ಅದರ ಪೈಲಟ್ ಆಗಿದ್ದು ಇಬ್ಬರು ಮಹಿಳೆಯರು. ಒಂದು ವಿಮಾನ ತಮಿಳು ನಾಡಿನ ತಿರುಚಿಯಿಂದ ಮತ್ತೊಂದು ವಿಮಾನ ಕೇರಳದ ಕೊಚ್ಚಿಯಿಂದ ಹೊರಟಿತು. ಇತ್ತ ಮಹಿಳೆಯರು, ಮಕ್ಕಳು ಅಮ್ಮಂದಿರ ದಿನ ಎಂದು ಸಂಭ್ರಮಪಡುತ್ತಿದ್ದರೆ ಅತ್ತ ಇಬ್ಬರು ಮಹಿಳೆಯರು ಭಾರತೀಯರನ್ನು ಕರೆತರಲು ಆಕಾಶದಲ್ಲಿ ಹಾರಾಡುತ್ತಾ ಅದರ ಬಗ್ಗೆಯೇ ಗಮನ ಕೇಂದ್ರೀಕರಿಸಿದ್ದಾರೆ.

ಕ್ಯಾಪ್ಟನ್ ಕವಿತಾ ರಾಜ್ ಕುಮಾರ್ ತಮಿಳು ನಾಡಿನ ತಿರುಚಿ -ಕೌಲಾಲಂಪುರ್ -ತಿರುಚಿ ಏರ್ ಇಂಡಿಯಾ ವಿಮಾನ ಸಂಖ್ಯೆ ಐಎಕ್ಸ್ 682/681 ನಲ್ಲಿ ನಿನ್ನೆ ವಿದೇಶಕ್ಕೆ ಹಾರಿದ್ದಾರೆ. ಇನ್ನು ಕ್ಯಾಪ್ಟನ್ ಬಿಂದು ಸೆಬಾಸ್ಟಿಯನ್ ಐಎಕ್ಸ್ 443/442 ರಲ್ಲಿ ಕೊಚ್ಚಿ-ಮಸ್ಕತ್-ಕೊಚ್ಚಿ ವಿಮಾನದಲ್ಲಿ ಹೋಗಿದ್ದು ಇಂದು ವಾಪಸ್ಸಾಗಲಿದ್ದಾರೆ.

ಅಮ್ಮಂದಿರ ದಿನಾಚರಣೆ ಸಂದರ್ಭದಲ್ಲಿ ಈ ಮಹಿಳೆಯರಿಗೆ ಅಭಿನಂದನೆಗಳು.

SCROLL FOR NEXT