ಸಂಗ್ರಹ ಚಿತ್ರ 
ದೇಶ

ಕೊರೋನಾಗೆ ಯುಎಇ ಕಂಗಾಲು: ನೆರವಿನ ಹಸ್ತ ಚಾಚಿದ ಭಾರತ, 88 ನರ್ಸ್'ಗಳ ರವಾನೆ

ಮಹಾಮಾರಿ ಕೊರೋನಾ ನಿಗ್ರಹಿಸುವಲ್ಲಿ ಅರಬ್ ಸಂಯುಕ್ತ ಸಂಸ್ತಾನ (ಯುಎಇ) ಕಂಗಾಲಾಗಿದ್ದು, ಈ ಹಿನ್ನೆಲೆಯಲ್ಲಿ ನೆರೆ ರಾಷ್ಟ್ರಕ್ಕೆ ನೆರವಿನ ಹಸ್ತ ಚಾಚಿರುವ ಭಾರತ, ಆರೋಗ್ಯ ವೃತ್ತಿನಿರತರಿಗೆ ಸಹಾಯವಾದುವ ಉದ್ದೇಶದಿಂದ ಭಾರತದ 88 ನರ್ಸ್'ಗಳ ತಂಡವನ್ನು ದುಬೈಗೆ ರವಾನಿಸಿದೆ. 

ನವದೆಹಲಿ: ಮಹಾಮಾರಿ ಕೊರೋನಾ ನಿಗ್ರಹಿಸುವಲ್ಲಿ ಅರಬ್ ಸಂಯುಕ್ತ ಸಂಸ್ತಾನ (ಯುಎಇ) ಕಂಗಾಲಾಗಿದ್ದು, ಈ ಹಿನ್ನೆಲೆಯಲ್ಲಿ ನೆರೆ ರಾಷ್ಟ್ರಕ್ಕೆ ನೆರವಿನ ಹಸ್ತ ಚಾಚಿರುವ ಭಾರತ, ಆರೋಗ್ಯ ವೃತ್ತಿನಿರತರಿಗೆ ಸಹಾಯವಾದುವ ಉದ್ದೇಶದಿಂದ ಭಾರತದ 88 ನರ್ಸ್'ಗಳ ತಂಡವನ್ನು ದುಬೈಗೆ ರವಾನಿಸಿದೆ. 

ಪ್ರಸ್ತುತ ಭಾರತ ರವಾನಿಸಿರುವ ತಂಡದಲ್ಲಿ 88 ನರ್ಸ್ ಗಳಿದ್ದು, ಇವರು ತುರ್ತು ನಿಗಾ ಘಟಕಗಳಲ್ಲಿ ಕಾರ್ಯನಿರ್ವುಹಿಸುವ ತಜ್ಞತೆಯನ್ನು ಹೊಂದಿದ್ದಾರೆಂದು ತಿಳಿದುಬಂದಿದೆ. 

ಕೊಲ್ಲಿ ರಾಷ್ಟ್ರವಾಗಿರುವ ಯುಎಇಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 17,417 ದಾಟಿದೆ. ಕಳೆದ 24 ಗಂಟೆಗಳಲ್ಲಿ ಆ ರಾಷ್ಟ್ರದಲ್ಲಿ 624 ಹೊಸ ಪ್ರಕರಣಗಳು ದಾಖಲಾಗಿವೆ. ಇನ್ನು ಒಟ್ಟು 185 ಮಂದಿ ಹೆಮ್ಮಾರಿ ವೈರಸ್'ಗೆ ಬಲಿಯಾಗಿದ್ದಾರೆ. 

ಯುಎಇಗೆ ತಲುಪಿರುವ ಕರ್ನಾಟಕ, ಕೇರಳ ಮತ್ತು ಮಹಾರಾಷ್ಚ್ರದ ಈ ದಾದಿಯರನ್ನು ಮೊದಲು 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇಡಲಾಗುತ್ತದೆ. ನಂತರ ಅವರನ್ನು ವಿವಿಧ ಆಸ್ಪತ್ರೆಗಳಲ್ಲಿ ಕೆಲಸದ ಮೇಲೆ ನಿಯೋಜಿಸಲಾಗುತ್ತದೆ. ದಾದಿಯರ ನಿಯೋಜನೆ ಉಭಯ ದೇಶಗಳ ನಡುವಿನ ಬಾಂಧ್ಯವವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಯುಎಇಯ ಭಾರತದ ರಾಯಭಾರಿ ಪವನ್ ಕಪೂರ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ವಿಜಯೇಂದ್ರ ಮಾತನ್ನು ನಂಬುತ್ತೇನೆ, ಆದ್ರೆ...: BJPಗೆ ಘರ್ ವಾಪ್ಸಿ ಬಗ್ಗೆ ಈಶ್ವರಪ್ಪ ಶಾಕಿಂಗ್ ಹೇಳಿಕೆ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ