ದೇಶ

ಗಿಲ್ಗಿಟ್-ಬಾಲ್ಟೀಸ್ಥಾನದಲ್ಲಿ ಚುನಾವಣೆ ನಡೆಸುವ ಇಮ್ರಾನ್ ಖಾನ್ ನಡೆಗೆ ಪಿಒಕೆ ಜನರಿಂದಲೇ ವಿರೋಧ!

Srinivas Rao BV

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮಾತನಾಡುತ್ತಿರುವ ಬೆನ್ನಲ್ಲೇ ಮಹತ್ವದ ಬೆಳವಣಿಗೆಯೊಂದು ವರದಿಯಾಗಿದೆ. 

ಗಿಲ್ಗಿಟ್-ಬಾಲ್ಟೀಸ್ಥಾನದಲ್ಲಿ ಚುನಾವಣೆ ನಡೆಸಲು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನಡೆಗೆ ಪಾಕಿಸ್ತಾನದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದ್ದು, ಪಿಒಕೆಯ ಮಾನವ ಹಕ್ಕುಗಳ ಕಾರ್ಯಕರ್ತರು ಆಕ್ಷೇಪಿಸಿದ್ದಾರೆ.

ಗಿಲ್ಗಿಟ್ ನಲ್ಲಿ ಚುನಾವಣೆ ನಡೆಸುವ ಖಾನ್ ನಡೆಯನ್ನು ಅಕ್ರಮ ಎಂದು ಕರೆದಿರುವ ಪಾಕ್ ಆಕ್ರಮಿತ ಕಾಶ್ಮೀರದ ಮಾನವ ಹಕ್ಕುಗಳ ಕಾರ್ಯಕರ್ತರು, ಪಾಕಿಸ್ತಾನ ಪ್ರಾಯೋಜಿತ ಚುನಾವಣೆಯನ್ನು ಬಹಿಷ್ಕರಿಸುವಂತೆ ಗಿಲ್ಗಿಟ್-ಬಾಲ್ಟೀಸ್ಥಾನದ ಜನತೆಗೆ ಕರೆ ನೀಡಿದ್ದಾರೆ. 

ಗಿಲ್ಗಿಟ್-ಬಾಲ್ಟಿಸ್ಥಾನ ಜಮ್ಮು-ಕಾಶ್ಮೀರದ ಅವಿಭಾಜ್ಯ ಅಂಗವಾಗಿದ್ದು, 1947 ರಿಂದಲೂ ಪಾಕಿಸ್ತಾನ ಆಕ್ರಮಿಸಿಕೊಂಡಿದೆ. ಶತಾಯ ಗತಾಯ ಗಿಲ್ಗಿಟ್ ಬಾಲ್ಟಿಸ್ಥಾನದಲ್ಲಿ ಚುನಾವಣೆ ನಡೆಸಲು ಪಾಕಿಸ್ತಾನ ಷಡ್ಯಂತ್ರ ರೂಪಿಸಿದೆ ಎಂದು ಬ್ರಿಟನ್ ನಲ್ಲಿರುವ ಪಿಒಜೆಕೆಯ ಮಾನವಹಕ್ಕುಗಳ ಕಾರ್ಯಕರ್ತ ಅಮ್ಜದ್ ಅಯೂಬ್ ಮಿರ್ಜಾ ಹೇಳಿದ್ದಾರೆ.

ಪಾಕಿಸ್ತಾನದ ಈ ಕುಕೃತ್ಯವನ್ನು ಖಂಡಿಸುವುದಾಗಿ ಅಮ್ಜದ್ ಅಯೂಬ್ ಮಿರ್ಜಾ ಹೇಳಿದ್ದಾರೆ.

SCROLL FOR NEXT