ದೇಶ

ಮಾರ್ಗಸೂಚಿ ಬದಲಾಯಿಸಿದ ರೈಲ್ವೆ ಇಲಾಖೆ: ಮೂರು ಕಡೆ ನಿಲ್ಲಲಿದೆ ಶ್ರಮಿಕ್ ರೈಲು

Shilpa D

ಭೂಪಾಲ್: ಬೇರೆ ಬೇರೆ ಸ್ಥಳಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರನ್ನು ಕರೆದೊಯ್ಯುತ್ತಿರುವ ಶ್ರಮಿಕ್ ರೈಲುಗಳ ಸಂಚಾರ ನಿಯಮದಲ್ಲಿ ಬದಲಾವಣೆ ಮಾಡಿದೆ.

ಈಗ ರೈಲುಗಳು ತಮ್ಮ ಸ್ಥಾನ ತಲುಪುವ ಮಾರ್ಗದಲ್ಲಿ ಮೂರು ನಿಲ್ದಾಣಗಳಲ್ಲಿ ಸ್ಟಾಪ್ ಕೊಡಲಿದೆ. ರೈಲು ಸಾಮರ್ಥ್ಯವು ರೈಲಿನಲ್ಲಿರುವ ಸ್ಲೀಪರ್ ಬರ್ತ್ ಗಳ ಸಂಖ್ಯೆಗೆ ಸಮನಾಗಿರಬೇಕು.

ಸೋಮವಾರ ಗುಜರಾತ್ ನಿಂದ ಶ್ರಮಿಕ್ ರೈಲಿನಲ್ಲಿ ಭೂಪಾಲ್ ಗೆ 1383 ವಲಸೆ ಕಾರ್ಮಿಕರು ಪ್ರಯಾಣ ಬೆಳೆಸಿದರು. ನಿನ್ನೆ ಸಂಜೆ ಗುಜರಾತ್ ನಿಂದ ರೈಲು ಹೊರಟಿತು. ಜಿಲ್ಲಾಡಳಿತಗಳು ಅವರನ್ನು ಬಸ್ ನಲ್ಲಿ ತಮ್ಮ ಊರುಗಳಿಗೆ ಕಳುಹಿಸಲಿವೆ. 30 ಜಿಲ್ಲೆಗಳ ಈ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ನಲ್ಲಿಟ್ಟು, ಅವರಿಗೆ ಆಹಾರ ವ್ಯವಸ್ಥೆ ಕಲ್ಪಿಸಲಿದೆ.

ಭೂಪಾಲ್ ನಿಲ್ದಾಣದಲ್ಲಿ ಇವರಿಗೆಲ್ಲಾ ಆರೋಗ್ಯ ತಪಾಸಣೆ ಮಾಡಲಾಗಿದೆ. ಇವೆರೆಲ್ಲಾ ಮಾರ್ಚ್ 20 ರಿಂದ ಮೊರ್ಬಿಯಲ್ಲಿ ಸಿಲುಕಿಕೊಂಡಿದ್ದಾರೆ. ಇವರಿಗೆಲ್ಲಾ ಉಚಿತ ಪ್ರಯಾಣ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.

SCROLL FOR NEXT