ದೇಶ

ಲಾಕ್ ಡೌನ್: ಮಾ.18ರಿಂದ ದೆಹಲಿ ವಿಮಾನ ನಿಲ್ದಾಣದಲ್ಲಿಯೇ ಜರ್ಮನ್ ವ್ಯಕ್ತಿಯ ಜೀವನ!

Lingaraj Badiger

ನವದೆಹಲಿ: ಜೀವನದ ನಿಜವಾದ ಟರ್ಮಿನಲ್ ಎಂದರೇ ಇದೇ ಇರಬೇಕು. ತನ್ನ ದೇಶದಲ್ಲಿ ಅಪರಾಧ ಹಿನ್ನಲೆ ಹೊಂದಿರುವ ಜರ್ಮನಿ ಮೂಲದ ವ್ಯಕ್ತಿಯೊಬ್ಬರು ಕೊವಿಡ್-19 ಲಾಕ್ ಡೌನ್ ಪರಿಣಾಮ ಕಳೆದ ಮಾರ್ಚ್ 18ರಿಂದ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಜೀವನ ನಡೆಸುತ್ತಿದ್ದಾರೆ.

ಮಾರ್ಚ್ 18ರಂದು ಜರ್ಮನ್ ವ್ಯಕ್ತಿ ಹನೊಯಿಯಿಂದ ದೆಹಲಿ ಮೂಲಕ ಇಸ್ತಾನ್ ಬುಲ್ ಗೆ ತೆರಳಬೇಕಿತ್ತು. ಆದರೆ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ವಿಮಾನ ಸಂಚಾರಕ್ಕೆ ನಿರ್ಬಂಧ ವಿಧಿಸಿದ ಪರಿಣಾಮ ಅವರು ದೆಹಲಿಯ ವಿಮಾನ ನಿಲ್ದಾಣದ ಟರ್ಮಿನಲ್ ಮೂರರಲ್ಲಿಯೇ ಜೀವನ ಕಳೆಯುವುಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್ 18ರಿಂದಲೇ ಟರ್ಕಿಯಿಂದ ಬರುವ ಮತ್ತು ಹೋಗುವ ವಿಮಾನ ನಿಲ್ದಾಣಗಳನ್ನು ನಿಷೇಧಿಸಲಾಗಿತ್ತು. ಅಲ್ಲದೆ ಜರ್ಮನಿಯಲ್ಲಿ ಆತನ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇರುವುದರಿಂದ ಆತ ತನ್ನ ದೇಶಕ್ಕೆ ಹೋಗಲು ಬಯಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಮಾರ್ಚ್ 19 ರಿಂದ ಈ ವ್ಯಕ್ತಿಗೆ ವಿಮಾನ ನಿಲ್ದಾಣದ ಅಧಿಕಾರಿಗಳೇ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಒದಗಿಸುತ್ತಿದ್ದು, ಈ ಕುರಿತು ಜರ್ಮನಿ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶದಲ್ಲಿ ಮಾರ್ಚ್ 25ರಿಂದ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಆದರೆ ಮಾರ್ಚ್ 18ರಂದೇ ಟರ್ಕಿ, ಚೀನಾ ಸೇರಿದಂತೆ ಕೆಲವು ದೇಶಗಳ ವಿಮಾನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು.

SCROLL FOR NEXT