ದೇಶ

ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

Raghavendra Adiga

ಲಖನೌ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಭಾನುವಾರ  (ಮೇ 10) ರಾತ್ರಿ ಲಖನೌನ ಮೆದಂತ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಟ್ಟೆ ನೋವಿನ ಸಮಸ್ಯೆಯಿಂದಾಗಿ ಯಾದವ್ ಆಸ್ಪತ್ರೆಗೆ ದಾಖಲಾಗಿರುವುದಾಗಿ ಮೂಲಗಳು ಹೇಳಿದೆ.

ಕಳೆದ ಐದು ದಿನಗಳಲ್ಲಿ ಸಮಾಜವಾದಿ ಪಕ್ಷದ ಸಂಸ್ಥಾಪಕ ಯಾದವ್ ಅವರು ಆಸ್ಪತ್ರೆಗೆ ದಾಖಲಾಗುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಇದಕ್ಕೂ ಮುನ್ನ ಅವರನ್ನು ಬುಧವಾರ (ಮೇ 6)  ಸಹ ಇದೇ ಆಸ್ಪತ್ರೆಗೆ ದಾಖಲು ಂಆಡಲಾಗಿತ್ತು.

ದೀರ್ಘಕಾಲದ ಮಲಬದ್ಧತೆಯಿಂದ ಬಳಲುತ್ತಿದ್ದ ಮುಲಾಯಂ ಸಿಂಗ್​ಗೆ ಕೊಲೊನೋಸ್ಕೋಪಿ ಸಹ ನಡೆಸಲಾಗಿದ್ದು ಪಕ್ಷದ ವಕ್ತಾರರಾದ  ರಾಜೇಂದ್ರ ಚೌಧರಿ ಅವರ ಪ್ರಕಾರ, ಹಿರಿಯ ನಾಯಕ ತನ್ನ ಸದರಿ ಆರೋಗ್ಯ ತಪಾಸಣೆಗಾಗಿ ಬುಧವಾರ ಮೆದಂತ ಆಸ್ಪತ್ರೆಗೆ ಹೋಗಿದ್ದರು, ಆದರೆ ಅವರ ಹೊಟ್ಟೆ ಮತ್ತು ಮೂತ್ರ ಸಂಬಂಧಿತ ಸಮಸ್ಯೆ ಉಲ್ಬಣಿಸಿದ ಕಾರಣ ಅವರನ್ನು ವೈದ್ಯರು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದರು.”

ಇತ್ತ ಮುಲಾಯಂ ಸಿಂಗ್ ಯಾದವ್ ಸೋದರ ಶಿವಪಾಲ್ ಸಿಂಗ್ ಯಾದವ್ "ಮುಲಾಯಂ ಆರೋಗ್ಯ ಉತ್ತಮವಾಗಿದೆ" ಎಂದಿದ್ದಾರೆ ಮಾತ್ರವಲ್ಲದೆ "ತಮ್ಮ ನಾಯಕನ ದೀರ್ಘಾವಧಿ ಉತ್ತಮ ಆರೋಗ್ಯಕ್ಕಾಗಿ ಜನರು ದೇವರಲ್ಲಿ ಪ್ರಾರ್ಥಿಸಲಿ" ಎಂದು ಕರೆ ನೀಡಿದ್ದಾರೆ.

SCROLL FOR NEXT