ದೇಶ

ಎನ್‌ಎಲ್‌ಸಿ ಇಂಡಿಯಾ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟ, 2 ಕಾರ್ಮಿಕರು ಸಾವು

Lingaraj Badiger

ನವದೆಹಲಿ: ಕಳೆದ ವಾರ ಎನ್‌ಎಲ್‌ಸಿ ಇಂಡಿಯಾದ ಥರ್ಮಲ್ ಪ್ಲಾಂಟ್‌ನಲ್ಲಿ ಸಂಭವಿಸಿದ್ದ ಬಾಯ್ಲರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಎಂಟು ಕಾರ್ಮಿಕರ ಪೈಕಿ ಇಬ್ಬರು ಕಾರ್ಮಿಕರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ ಎಂದು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಉಳಿದ ಆರು ಗಾಯಾಳುಗಳ ಪೈಕಿ ಒಬ್ಬ ಕಾರ್ಮಿಕನ ಸ್ಥಿತಿ ಗಂಭೀರವಾಗಿದ್ದು, ನಾಲ್ವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.

ಮೃತರು ಖಾಯಂ ಉದ್ಯೋಗಿ ಅಥವಾ ಗುತ್ತಿಗೆ ನೌಕರರೆ ಆಗಿರಲಿ ಅವರ ಕುಟುಂಬಕ್ಕೆ ಕನಿಷ್ಠ 15 ಲಕ್ಷ ರೂ.ಪರಿಹಾರ ನೀಡುವಂತೆ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಅವರು ಆದೇಶಿಸಿದ್ದಾರೆ.

ಪರಿಹಾರದ ಜೊತೆಗೆ, ಕಂಪನಿಯು ಮೃತರ ರಕ್ತಸಂಬಂಧಿಗಳಿಗೆ ಖಾಯಂ ಉದ್ಯೋಗವನ್ನು ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ವಾರ, ತಮಿಳುನಾಡಿನ ನೇವೆಲಿಯಲ್ಲಿರುವ ಕಂಪನಿಯ ವಿದ್ಯುತ್ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು, ಘಟನೆಯಲ್ಲಿ ಇಬ್ಬರು ಸಾಮಾನ್ಯ ನೌಕರರು ಮತ್ತು ಆರು ಗುತ್ತಿಗೆ ಕಾರ್ಮಿಕರು ಗಾಯಗೊಂಡಿದ್ದರು.

SCROLL FOR NEXT