ದೇಶ

ಲಾಕ್ ಡೌನ್ ನಲ್ಲಿ ಸಿಲುಕಿದ್ದ 6.48 ಲಕ್ಷಕ್ಕೂ ಹೆಚ್ಚು ಜನರನ್ನು ತವರಿಗೆ ತಲುಪಿಸಿದ ಶ್ರಮಿಕ ರೈಲು

Lingaraj Badiger

ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ ಪರಿಣಾಮ ವಿವಿಧ ಸ್ಥಳಗಳಲ್ಲಿ ಸಿಲುಕಿದ್ದ ಸುಮಾರು 6.48 ಲಕ್ಷ ವಲಸೆ ಕಾರ್ಮಿಕರನ್ನು 542 ಶ್ರಮಿಕ ವಿಶೇಷ ರೈಲುಗಳ ಮೂಲಕ ಅವರ ಊರುಗಳಿಗೆ ತಲುಪಿಸಲಾಗಿದೆ.

542 ಶ್ರಮಿಕ ರೈಲುಗಳ ಪೈಕಿ 448 ರೈಲುಗಳು ನಿಗದಿತ ಸ್ಥಳ ತಲುಪಿದ್ದು, 94 ರೈಲುಗಳು ಮಂಗಳವಾರ ನಿಗದಿತ ಸ್ಥಳ ತಲುಪಲಿವೆ ಎಂದು ಭಾರತೀಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಶ್ರಮಿಕ ವಿಶೇಷ ರೈಲುಗಳು ತಿರುಚಿರಾಪಳ್ಳಿ, ಬರೌನಿ, ಖಂಡ್ವಾ, ಜಗನ್ನಾಥಪುರ, ಖುರ್ದಾ ರಸ್ತೆ, ಪ್ರಯಾಗರಾಜ್,ಜಗನ್ನಾತಪುರಾ, ಬಾಲಿಯಾ, ಗಯಾ, ವಾರಣಾಸಿ, ದರ್ಭಂಗಾ, ಗೋರಖ್‌ಪುರ, ಲಖನೌ ಸೇರಿದಂತೆ ದೇಶದ ಹಲವು ನಗರಗಳಿಗೆ ಸಂಚರಿಸಿವೆ.

ಶ್ರಮಿಕ ವಿಶೇಷ ರೈಲಿನಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪ್ರಯಾಣಕ್ಕೂ ಮುನ್ನ ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗಿದೆ. ಪ್ರಯಾಣದ ವೇಳೆ ಎಲ್ಲರಿಗೂ ಉಚಿತ ಊಟ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ. ಈ ವಿಶೇಷ ರೈಲಿನ ಮೂಲಕ ಸುಮಾರು 6. 48 ಲಕ್ಷ ಕಾರ್ಮಿಕರು ಪ್ರಯಾಣಿಸಿದ್ದಾರೆ ಎಂದು ರೈಲ್ವೆ ತಿಳಿಸಿದೆ.

SCROLL FOR NEXT