ದೇಶ

ಮಹಾರಾಷ್ಟ್ರ-ಮಧ್ಯಪ್ರದೇಶದ ಗಡಿಯಲ್ಲಿ ವಲಸಿಗ ಕಾರ್ಮಿಕರಿಂದ ಕಲ್ಲು ತೂರಾಟ 

Srinivas Rao BV

ಭೋಪಾಲ್: ಕೋವಿಡ್-19 ಲಾಕ್ ಡೌನ್ ವಲಸಿಗ ಕಾರ್ಮಿಕರಿಗೆ ತೀವ್ರ ಸಂಕಷ್ಟ ಉಂಟುಮಾಡಿದ್ದು, ತಮ್ಮ ಊರುಗಳಿಗೆ ತೆರಳಲು ಸಾಧ್ಯವಾಗದೇ ಸಮಸ್ಯೆ ಎದುರಿಸುತ್ತಿದ್ದಾರೆ. 

ಮನೆಗಳಿಗೆ ತೆರಳಲು ಯತ್ನಿಸುತ್ತಿರುವ ಕಾರ್ಮಿಕರಿಗೆ ಕೆಲವೆಡೆ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಮಹಾರಾಷ್ಟ್ರ-ಮಧ್ಯಪ್ರದೇಶದ ಗಡಿಯಲ್ಲಿರುವ ಸೆಂಧ್ವಾ ಬಳಿ ನೆರೆದಿರುವ ವಲಸಿಗ ಕಾರ್ಮಿಕರು ತಮಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿಲ್ಲ ಹಾಗೂ ಆಹಾರ ನೀಡಲಾಗಿಲ್ಲ ಎಂದು ಅಸಮಾಧಾನಗೊಂಡು ಕಲ್ಲು ತೂರಾಟ ನಡೆಸಿ ಪ್ರತಿಭಟಿಸಿದ್ದಾರೆ. ಆದರೆ ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. 

ಗರ್ಭಿಣಿಯರು, ಹಿರಿಯ ನಾಗರಿಕರು, ಮಕ್ಕಳು ಸೂಕ್ತ ಸಾರಿಗೆ ವ್ಯವಸ್ಥೆ, ಆಹಾರ-ನೀರಿನ ಇಲ್ಲದೇ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 

SCROLL FOR NEXT