ದೇಶ

ಬೇಷರತ್ತಾಗಿ ನನ್ನ ಹಣ ತೆಗೆದುಕೊಂಡು ಪ್ರಕರಣವನ್ನು ಕೊನೆಗೊಳಿಸಿ: ಕೇಂದ್ರ ಸರ್ಕಾರಕ್ಕೆ ವಿಜಯ್ ಮಲ್ಯ ಮನವಿ

Raghavendra Adiga

ನವದೆಹಲಿ: ಬ್ಯಾಂಕಿನಿಂದ ಸಾವಿರಾರು ಕೋಟಿ ಸಾಲ ಪಡೆದು ಮರುಪಾವತಿಸದೆ ದೇಶ ಬಿಟ್ಟು ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಲಂಡನ್ ಕೋರ್ಟ್ ನಲ್ಲಿ ತನ್ನನ್ನು ಭಾರತಕ್ಕೆ ಹಸ್ತಾಂತರಿಸುವುದರ ವಿರುದ್ಧ ಹೋರಾಡುತ್ತಿದ್ದಾರೆ.ಇದೀಗ ಮಲ್ಯ " ತನ್ನ ಎಲ್ಲಾ ಬಾಕಿಗಳನ್ನು ಮರುಪಾವತಿಸುವ ಪ್ರಸ್ತಾಪ" ವನ್ನು ಪುನರುಚ್ಚರಿಸಿದ್ದು ತಾನು ಸಾಲದ ಎಲ್ಲಾ ಮೊತ್ತವನ್ನೂ ಪುನರ್ ಪಾವತಿಸುತ್ತೇನೆ, ಈ ನನ್ನ ಪ್ರಸ್ತಾಪವನ್ನು ಸರ್ಕಾರ ಒಪ್ಪಿಕೊಳ್ಲಬೇಕು ಹಾಗೂ ತನ್ನ ವಿರುದ್ಧದ ಪ್ರಕರಣಗಳನ್ನು ಕೈಬಿಡಬೇಕು ಎಂದು ಮನವಿ ಮಾಡಿದ್ದಾರೆ.

ಸಾಂಕ್ರಾಮಿಕ ರೋಗ ಕೊರೋನಾವೈರಸ್ ಸಂಕಷ್ಟದ ನಡುವೆ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಕ್ಕಾಗಿ ಭಾರತ ಸರ್ಕಾರವನ್ನು ಶ್ಲಾಘಿಸಿದ ವಿಜಯ್ ಮಲ್ಯ  ತಮ್ಮ ಬಾಕಿ ಹಣವನ್ನು ಪಾವತಿಸಲು ನಾನು ಪದೇ ಪದೇ ಪ್ರಸ್ತಾಪಿಸುತ್ತಿದ್ದು ಸರ್ಕಾರ ಅನುಮತಿಸದೆ ಇರುವುದರಿಂದ ನಿರಾಶರಾಗಿದ್ದಾರೆ.

"ಕೊರೋನಾವೈಅರಸ್ ಪರಿಹಾರ ಪ್ಯಾಕೇಜ್ಗಾಗಿ ಸರ್ಕಾರಕ್ಕೆ ಅಭಿನಂದನೆಗಳು. ಸರ್ಕಾರ ಅಗತ್ಯವಿರುವಷ್ಟು ಕರೆನ್ಸಿಯನ್ನು ಮುದ್ರಿಸಬಹುದು ಆದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸಾಲಗಳ 100% ಮರುಪಾವತಿಯನ್ನು ನೀಡುವ ನನ್ನಂತಹ ಸಣ್ಣ ದಾನಿಗಳನ್ನು ನಿರಂತರವಾಗಿ ನಿರ್ಲಕ್ಷಿಸಬೇಕೇ?" ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ.

ಅಂದಾಜು 9,000 ಕೋಟಿ ರೂ.ಗಳ ವಂಚನೆ ಮತ್ತು ಅಕ್ರ್ಮ ಹಣ ವರ್ಗಾವಣೆ  ಆರೋಪದ ಮೇಲೆ ಭಾರತಕ್ಕೆ ಬೇಕಾಗಿರುವ  ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಮಾಲೀಕ ವಿಜಯ್ ಮಲ್ಯ  "ದಯವಿಟ್ಟು ನನ್ನ ಹಣವನ್ನು ಬೇಷರತ್ತಾಗಿ ತೆಗೆದುಕೊಂಡು ನನ್ನ ವಿರುದ್ಧದ ಪ್ರಕರಣಗಳನ್ನು ಮುಚ್ಚಿಬಿಡಿ" ಎಂದು ಕೇಳಿದ್ದಾರೆ. ಕಿಂಗ್‌ಫಿಶರ್ ಏರ್‌ಲೈನ್ಸ್ ನಿಂದ ವಸೂಲಿಯಾಗದ ಸಾಲಕ್ಕೆ ಸಂಬಂಧಿಸಿದ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಭಾರತಕ್ಕೆ ಹಸ್ತಾಂತರಿಸುವ ಆದೇಶದ ವಿರುದ್ಧ ಲಂಡನ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ವಜಾ ಆದ ಬಳಿಕ ಮಲ್ಯ ಯುಕೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

SCROLL FOR NEXT