ಸಂಗ್ರಹ ಚಿತ್ರ 
ದೇಶ

ಲಾಕ್ ಡೌನ್ 4.0: ರೆಡ್ ಝೋನ್ ಗಳಲ್ಲೂ ಅತ್ಯಾವಶ್ಯಕವಲ್ಲದ ವಸ್ತುಗಳ ತಲುಪಿಸಲು ಇ-ಕಾಮರ್ಸ್ ಕಂಪನಿಗಳಿಗೆ ಅವಕಾಶ

ಕೊರೋನಾ ವೈರಸ್ ಲಾಕ್ ಡೌನ್ 4.0 ನಡುವೆಯೇ ನಿಯಮಗಳಲ್ಲಿ ಸಡಿಲಿಕೆ ತಂದಿರುವ ಕೇಂದ್ರ ಸರ್ಕಾರ ರೆಡ್ ಝೋನ್ ಗಳಲ್ಲೂ ಅತ್ಯಾವಶ್ಯಕವಲ್ಲದ ವಸ್ತುಗಳ ತಲುಪಿಸಲು ಇ-ಕಾಮರ್ಸ್ ಕಂಪನಿಗಳಿಗೆ ಅವಕಾಶ ನೀಡಿದೆ.

ನವದೆಹಲಿ: ಕೊರೋನಾ ವೈರಸ್ ಲಾಕ್ ಡೌನ್ 4.0 ನಡುವೆಯೇ ನಿಯಮಗಳಲ್ಲಿ ಸಡಿಲಿಕೆ ತಂದಿರುವ ಕೇಂದ್ರ ಸರ್ಕಾರ ರೆಡ್ ಝೋನ್ ಗಳಲ್ಲೂ ಅತ್ಯಾವಶ್ಯಕವಲ್ಲದ ವಸ್ತುಗಳ ತಲುಪಿಸಲು ಇ-ಕಾಮರ್ಸ್ ಕಂಪನಿಗಳಿಗೆ ಅವಕಾಶ ನೀಡಿದೆ.

ಕೇಂದ್ರ ಸರ್ಕಾರ ದೇಶಾದ್ಯಂತ ಹೇರಲಾಗಿರುವ ಲಾಕ್ ಡೌನ್ ಅನ್ನು ಮೇ 31ರವರೆಗೂ ವಿಸ್ತರಣೆ ಮಾಡಿದ್ದು, ಇದರ ನಡುವೆಯೇ ಹಲವು ನಿಯಮಗಳಲ್ಲಿ ಸಡಿಲಿಕೆ ತಂದಿದೆ. ಈ ಪೈಕಿ ಇ ಕಾಮರ್ಸ್ ಗಳಲ್ಲಿ ಕೆಲ ಬದಲಾವಣೆ ತಂದಿದ್ದು, ಇನ್ನು ಮುಂದೆ ಅಮೇಜಾನ್, ಫ್ಲಿಪ್ ಕಾರ್ಟ್ ನಂತಹ  ಇ-ಕಾಮರ್ಸ್ ಸಂಸ್ಥೆಗಳು ರೆಡ್ ಝೋನ್ ಗಳಲ್ಲೂ ಅತ್ಯಾವಶ್ಯಕವಲ್ಲದ ವಸ್ತುಗಳ ತಲುಪಿಸಲು ಅವಕಾಶ ನೀಡಲಾಗಿದೆ.

ಈ ಹಿಂದೆ ಅಂದರೆ ಲಾಕ್ ಡೌನ್ 3.0 ಸಂದರ್ಭದಲ್ಲಿ ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಮಾತ್ರ ಅಗತ್ಯವಿಲ್ಲದ ವಸ್ತುಗಳನ್ನು ತಲುಪಿಸಲು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ಈ ಹಿಂದೆ ಅವಕಾಶವಿತ್ತು. ಈಗ ಇದರಲ್ಲಿ ಕೆಂಪು ವಲಯಗಳಿಗೂ ಅವಕಾಶ ನೀಡಲಾಗಿದೆ. ಇನ್ನು ಕಂಟೈನ್  ಮೆಂಟ್ ಝೋನ್ ಗಳಲ್ಲಿ ಆನ್‌ಲೈನ್ ಮಾರಾಟದ ಮೇಲಿನ ನಿರ್ಬಂಧ ಮುಂದುವರೆದಿದ್ದು, ಅಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿದೆ.  

ಅಂತಿಮ ನಿರ್ಧಾರ ರಾಜ್ಯ ಸರ್ಕಾರಗಳದ್ದೇ..!
ಇನ್ನು ಕೇಂದ್ರ ಸರ್ಕಾರ ಇ-ಕಾಮರ್ಸ್ ಗಳಿಗೆ ರೆಡ್ ಝೋನ್ ಗಳಲ್ಲಿ ಅತ್ಯಾವಶ್ಯಕವಲ್ಲದ ವಸ್ತುಗಳನ್ನು ಸರಬರಾಜು ಮಾಡಲು ಅವಕಾಶ ನೀಡಿದೆಯಾದರೂ, ಅಂತಿಮ ನಿರ್ಧಾರ ಕೈಗೊಳ್ಳುವ ಅವಕಾಶವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ. ರಾಜ್ಯ ಸರ್ಕಾರಗಳು ಅನುಮತಿಸಿದರೆ ಮಾತ್ರ ಈ ಸೇವೆ ರೆಡ್ ಝೋನ್ ಗಳಲ್ಲಿ ಲಭ್ಯವಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT