ದೇಶ

ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್

Sumana Upadhyaya

ನವದೆಹಲಿ: ಕೋವಿಡ್-19 ಸಮಸ್ಯೆ ನಡುವೆ ಕೇಂದ್ರ ಆರೋಗ್ಯ ಖಾತೆ ಸಚಿವ ಡಾ. ಹರ್ಷ್ ವರ್ಧನ್ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಇದೇ 22ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

34 ಮಂದಿ ಸದಸ್ಯರನ್ನು ಹೊಂದಿರುವ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಈಗಿನ ಅಧ್ಯಕ್ಷರು ಜಪಾನ್ ನ ಡಾ ಹಿರೊಕಿ ನಕಟನಿಯಾಗಿದ್ದಾರೆ.ಭಾರತದ ಪ್ರತಿನಿಧಿಯನ್ನು ಕಾರ್ಯಕಾರಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಬೇಕೆಂಬ ಪ್ರಸ್ತಾವನೆಗೆ 194 ದೇಶಗಳನ್ನೊಳಗೊಂಡ ವಿಶ್ವ ಆರೋಗ್ಯ ಸಭೆಯಲ್ಲಿ ನಿನ್ನೆ ಸಹಿ ಮಾಡಲಾಯಿತು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಾಡಿದ್ದು ಮೇ 22ರಿಂದ 3 ವರ್ಷಗಳವರೆಗೆ ಭಾರತದ ಪ್ರತಿನಿಧಿಯನ್ನು ನಾಮಾಂಕಿತ ಮಾಡುವುದಕ್ಕೆ ಕಳೆದ ವರ್ಷ ವಿಶ್ವ ಆರೋಗ್ಯ ಸಂಸ್ಥೆಯ ದಕ್ಷಿಣ-ಪೂರ್ವ ಏಷ್ಯಾ ಗ್ರೂಪ್ ಅವಿರೋಧವಾಗಿ ತೀರ್ಮಾನಿಸಿತ್ತು. ಸ್ಥಳೀಯ ಗುಂಪಿನಲ್ಲಿ ರೊಟೇಶನ್ ಮಾದರಿಯಲ್ಲಿ ಒಂದು ವರ್ಷದವರೆಗೆ ಅಧ್ಯಕ್ಷರನ್ನು ನಾಮಾಂಕಿತ ಮಾಡಲಾಗುತ್ತದೆ.

ಇದು ಪೂರ್ಣ ಪ್ರಮಾಣದ ಹುದ್ದೆಯಲ್ಲ, ಅಧ್ಯಕ್ಷರಾದವರು ಕಾರ್ಯಕಾರಿ ಮಂಡಳಿಯ ಸಭೆಗಳಲ್ಲಿ ಭಾಗವಹಿಸಬೇಕಾಗುತ್ತದೆ ಎಂದು ಅಧಿಕಾರಿ ವಿವರಿಸಿದರು.

SCROLL FOR NEXT