20 ವರ್ಷಗಳ ಹಿಂದೆ ಕಳೆದುಕೊಂಡಿದ್ದ ಚಿನ್ನ ಮರಳಿ ಪಡೆದ ಕೇರಳದ ಗೃಹಿಣಿ 
ದೇಶ

20 ವರ್ಷಗಳ ಹಿಂದೆ ಕಳೆದುಕೊಂಡಿದ್ದ ಚಿನ್ನ ಮರಳಿ ಪಡೆದ ಕೇರಳದ ಗೃಹಿಣಿ 

ಕೇರಳದ ಗೃಹಿಣಿಯೊಬ್ಬರು 20 ವರ್ಷಗಳ ಹಿಂದೆ ಕಳೆದುಕೊಂಡಿದ್ದ ಚಿನ್ನವನ್ನು ಮರಳಿ ಪಡೆದ ವಿಲಕ್ಷಣ, ಅಚ್ಚರಿಯ ಘಟನೆ ನಡೆದಿದೆ. 

ಕಾಸರಗೋಡು: ಕೇರಳದ ಗೃಹಿಣಿಯೊಬ್ಬರು 20 ವರ್ಷಗಳ ಹಿಂದೆ ಕಳೆದುಕೊಂಡಿದ್ದ ಚಿನ್ನವನ್ನು ಮರಳಿ ಪಡೆದ ವಿಲಕ್ಷಣ, ಅಚ್ಚರಿಯ ಘಟನೆ ನಡೆದಿದೆ. 

ಬಸಾರಿಯಾ ಅವರು ವಿವಾಹ ಕಾರ್ಯಕ್ರಮವೊಂದರಲ್ಲಿ 20 ವರ್ಷಗಳ ಹಿಂದೆ ಒಟ್ಟು 28 ಗ್ರಾಮ್ ನಷ್ಟು ತೂಕವಿದ್ದ ಸೊಂಟದ ಪಟ್ಟಿಯ 12 ಗ್ರಾಮ್ ನಷ್ಟು ತೂಕವಿದ್ದ ಒಂದು ಭಾಗವನ್ನು ಕಳೆದುಕೊಂಡಿದ್ದರು. ಹೀಗೆ ಕಳೆದುಕೊಂಡಿದ್ದನ್ನು ಅಂದು ಪಡೆದಿದ್ದವರು  ಈಗ 20 ವರ್ಷಗಳ ಬಳಿಕ ಅದರ ಬದಲಿಗೆ ಚಿನ್ನದ ನಾಣ್ಯಗಳನ್ನು ಕಳಿಸಿಕೊಟ್ಟು ಕ್ಷಮೆ ಕೇಳಿದ್ದಾರೆ. 

ಸಿನಿಮೀಯ ರೀತಿಯಲ್ಲಿ ಈ ಘಟನೆ ನಡೆದಿದೆ. ರಂಜಾನ್ ನ ಅವಧಿಯಲ್ಲಿ ಕಾಸರಗೋಡಿನ ನೆಲ್ಲಿಕುಣ್ಣು ನಿವಾಸಿಯಾಗಿರುವ ಬಸರಿಯಾ ಅವರು ಮಂಗಳವಾರ (ಮೇ.19) ರಂದು ಇಫ್ತಾರ್ ಗೆ ಸಿದ್ಧತೆ ನಡೆಸಿದ್ದರು. ಈ ವೇಳೆ ಮನೆ ಬಾಗಿಲಿಗೆ ಬಂದ ಓರ್ವ ಹೆಲ್ಮೆಟ್ ಧಾರಿ ಯುವಕ, ಆಹಾರ ಪದಾರ್ಥಗಳಿದ್ದ ದೊಡ್ಡ ಪ್ಯಾಕ್ ನ್ನು ನೀಡಿದ, ಇಫ್ತಾರ್ ಆಹಾರವನ್ನು ಹಂಚಿಕೊಳ್ಳುತ್ತಿದ್ದದ್ದು ಕಾಸರಗೋಡಿನಲ್ಲಿ ಸಾಮಾನ್ಯದ ಸಂಗತಿಯಾಗಿತ್ತದರೂ ಬಸರಿಯಾ ಅವರಿಗೆ ಇದರಿಂದ ಅಚ್ಚರಿಯಾಯಿತು. ಆ ವ್ಯಕ್ತಿಯ ಪರಿಚಯವನ್ನು ಕೇಳಿದರಾದರೂ ತಾನು ಓರ್ವ ಡೆಲಿವರಿ ವ್ಯಕ್ತಿಯಷ್ಟೇ ಬೇರೆ ವ್ಯಕ್ತಿ ಇದನ್ನು ಕಳಿಸಿಕೊಟ್ಟಿದ್ದಾರೆಂಬ ಉತ್ತರವಷ್ಟೇ ಸಿಕ್ಕಿತು. ಹೆಚ್ಚು ಮಾತನಾಡುವುದರೊಳಗೆ ಆಜಾನ್ ಕೇಳಿಸಿದ ಹಿನ್ನೆಲೆಯಲ್ಲಿ ಆಕೆ ಪ್ರಾರ್ಥನೆಗೆ ತೆರಳಿದರು, ಆ ವೇಳೆಗೆ ಯುವಕನೂ ಅಲ್ಲಿಂದ ಹೊರನಡೆದಿದ್ದ. ಆಹಾರ ಪ್ಯಾಕ್ ನಲ್ಲಿ ತುಪ್ಪದ ಅನ್ನ, ಬಿಸಿಯಾದ ಬೀಫ್ ಕರಿ ಇದ್ದನ್ನು ಕಂಡ ಬಸರಿಯಾ ಅವರಿಗೆ ಮತ್ತೊಂದು ಅಚ್ಚರಿ ಎದುರಾಗಿತ್ತು ಅದೇ ಪತ್ರದ ಜೊತೆಗಿದ್ದ ಆಭರಣಗಳನ್ನು ಇಡಬಹುದಾಗಿದ್ದ ಸಣ್ಣ ಬಾಕ್ಸ್ ನಲ್ಲಿದ್ದ ಚಿನ್ನದ ಎರಡು ನಾಣ್ಯಗಳು!

"20 ವರ್ಷಗಳ ಹಿಂದೆ ನೀವು ಕಳೆದುಕೊಂಡಿದ್ದ ಚಿನ್ನ ನನಗೆ ಸಿಕ್ಕಿತ್ತು, ಆಗ ಅದನ್ನು ಹಿಂತಿರುಗಿಸಲು ಸಾಧ್ಯವಾಗಿರಲಿಲ್ಲ. ಈಗ ಅದರ ಬದಲಿಗೆ ಚಿನ್ನದ ನಾಣ್ಯಗಳನ್ನು ನೀಡುತ್ತಿದ್ದೇನೆ, ಇದನ್ನು ಒಪ್ಪಿಕೊಂಡು ನನ್ನನ್ನು ಕ್ಷಮಿಸಿ" ಎಂದು ಪತ್ರದಲ್ಲಿ ಬರೆದಿತ್ತ. ತಕ್ಷಣವೇ ಆ ಮಹಿಳೆ ಇದನ್ನು ಶಾರ್ಜಾದಲ್ಲಿ ಪಾದರಕ್ಷೆಗಳ ಅಂಗಡಿ ನಡೆಸುತ್ತಿರುವ ತನ್ನ ಪತಿ ಇಬ್ರಾಹಿಂ ತೈವಲಪ್ಪಿಲ್ ಗೆ ವಾಟ್ಸ್ ಆಪ್ ಮೂಲಕ ಕಳಿಸಿದ್ದಾರೆ. ಇದನ್ನು ನೋಡಿದ ಪತಿ 20 ವರ್ಷಗಳ ಹಿಂದೆ ವಿವಾಹ ಕಾರ್ಯಕ್ರಮದಲ್ಲಿ ಚಿನ್ನ ಕಳೆದುಕೊಂಡಿದ್ದನ್ನು ನೆನಪಿಸಿಕೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT