ದೇಶ

ಕಾಶ್ಮೀರ: ಇಫ್ತಾರ್ ಕೂಟಕ್ಕಾಗಿ ಬ್ರೆಡ್ ಖರೀದಿಸುತ್ತಿದ್ದ ವೇಳೆ ಭಯೋತ್ಪಾದಕ ದಾಳಿ, ಇಬ್ಬರು ಬಿಎಸ್‌ಎಫ್‌ ಯೋಧರು ಹುತಾತ್ಮ

Raghavendra Adiga

ಶ್ರೀನಗರ: ಮೋಟಾರು ಸೈಕಲ್‌ನಲ್ಲಿಆಗಮಿಸಿದ್ದ ಭಯೋತ್ಪಾದಕರು ಮಾರುಕಟ್ಟೆ ಪ್ರದೇಶದಲ್ಲಿ ಬೇಕರಿ ಮೇಲೆ ಗುಂಡಿನ ದಾಳಿ ನಡೆಸಿದಾಗ ಇಫ್ತಾರ್‌ಗೆ ಕೆಲವೇ ನಿಮಿಷಗಳ ಮೊದಲು, ಗಡಿ ಭದ್ರತಾ ಪಡೆ ಕಾನ್‌ಸ್ಟೆಬಲ್‌ಗಳಾದ ಜಿಯಾ-ಉಲ್-ಹಕ್ ಮತ್ತು ರಾಣಾ ಮೊಂಡಾಲ್ ಸಾವನ್ನಪ್ಪಿದ್ದಾರೆ. ಅವರು  ತಮ್ಮ ರಂಜಾನ್ ಉಪವಾಸವನ್ನು ಮುರಿಯಲು ಬ್ರೆಡ್ ಖರೀದಿಸುತ್ತಿದ್ದಾಗ ಉಗ್ರರಿಂದ ಕೊಲ್ಲಲ್ಪಟ್ಟಿದ್ದಾರೆ. 

ಶ್ರೀನಗರದ ಹೊರವಲಯದಲ್ಲಿರುವ ಸೌರಾದಲ್ಲಿ ಈದ್‌ಗೆ ಕೆಲವೇ ದಿನಗಳ ಮೊದಲು ಬುಧವಾರ ಸಂಜೆ ಈ ದಾಳಿ ನಡೆದಿದೆ.

ಜನದಟ್ಟಣೆ ಪ್ರದೇಶದಲ್ಲಿ ಕಣ್ಮರೆಯಾಗುವ ಮುನ್ನ ಭಯೋತ್ಪಾದಕರು ಇಬ್ಬರು ಸೈನಿಕರಿಗೆ ಗುಂಡುಗಳನ್ನು ಹಾರಿಸಿದ್ದಾರೆಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಕ್ ಮತ್ತು ಮೊಂಡಾಲ್ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮೂಲದವರು ಆದರೆ ಅವರ ಶವಗಳನ್ನು ಮನೆಗೆ ವಾಪಸ್ ಕಳುಹಿಸಲು ಸಾಧ್ಯವಿಲ್ಲ ಏಕೆಂದರೆ ಆಂಫಾನ್ ಚಂಡಮಾರುತದಿಂದ ಉಂಟಾದ ಹಾನಿಯಿಂದಾಗಿ ರಾಜ್ಯದ ವಿಮಾನ ನಿಲ್ದಾಣಗಳು ಮುಚ್ಚಲ್ಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

34 ವರ್ಷದ ಹಕ್ ಮತ್ತು 29 ವರ್ಷದ ಮೊಂಡಾಲ್ ಇಬ್ಬರಿಗೂ ತಲೆಗೆ ಗಂಭೀರ ಗಾಯಗಳಾಗಿವೆ. ಬಿಎಸ್‌ಎಫ್‌ನ 37 ನೇ ಬೆಟಾಲಿಯನ್‌ನ ಇಬ್ಬರು ಯೋಧರನ್ನು ಪಾಂಡಚ್ ಶಿಬಿರದಲ್ಲಿ ಪೋಸ್ಟ್ ಮಾಡಲಾಗಿತ್ತು. 2009 ರಲ್ಲಿ ಬಿಎಸ್‌ಎಫ್‌ಗೆ ಸೇರ್ಪಡೆಯಾದ ಹಕ್, ಅವರ ಪೋಷಕರು, ಪತ್ನಿ ನಫ್ಸಿನಾ ಖತುನ್ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. 

ದುರಂತವೆಂದರೆ ಹಕ್ ಮಗಳು  ನಾಲ್ಕು ವರ್ಷದ ಜೆಶ್ಲಿನ್ ಜಿಯುಲ್ ಕಿವುಡಿ ಹಾಗೂ ಮೂಕಿಯಾಗಿದ್ದಾಳೆ. ಇನ್ನು  ಜೆನ್ನಿಫರ್ ಜಿಯುಲ್ ಗೆ ಕೇವಲ ಆರು ತಿಂಗಳ ಪ್ರಾಯ!

ಮುರ್ಷಿದಾಬಾದ್ ಪಟ್ಟಣದಿಂದ 30 ಕಿ.ಮೀ ದೂರದಲ್ಲಿರುವ ರೆಜಿನಗರದಲ್ಲಿ ಈ ಕುಟುಂಬ ವಾಸ್ತವ್ಯವಿದೆ.  ಮೊಂಡಾಲ್ ಆರು ತಿಂಗಳ ಮಗಳ ಜೊತೆಗೆ ಅವನ ಹೆತ್ತವರು ಮತ್ತು ಪತ್ನಿ ಜೆಶ್ಮಿನ್ ಖತುನ್ ರನ್ನೂ ಬಿಟ್ಟು ಹೋಗಿದ್ದಾರೆ. ಅವರು ಮುರ್ಷಿದಾಬಾದ್‌ನ ಸಹೇಬ್ರಂಪುರದಲ್ಲಿ ವಾಸಿಸುತ್ತಿದ್ದರು

SCROLL FOR NEXT