ದೇಶ

ವಲಸಿಗ ಕಾರ್ಮಿಕರಿಗೆ ಸಹಾಯ ಮಾಡುತ್ತಿರುವವರನ್ನು ಉತ್ತರ ಪ್ರದೇಶ ಸರ್ಕಾರ ಜೈಲಿಗಟ್ಟುತ್ತಿದೆ: ಪ್ರಿಯಾಂಕ

Srinivas Rao BV

ಲಖನೌ: ವಲಸಿಗ ಕಾರ್ಮಿಕರಿಗಾಗಿ 1,000 ಬಸ್ ಗಳ ವ್ಯವಸ್ಥೆ ವಿಷಯವಾಗಿ ಉತ್ತರ ಪ್ರದೇಶ ಸರ್ಕಾರ ಹಾಗೂ ಪ್ರಿಯಾಂಕ ವಾಧ್ರ ನಡುವೆ ಆರೋಪ-ಪ್ರತ್ಯಾರೋಗಳ ನಂತರ ಈಗ ಪ್ರಿಯಾಂಕ ವಾಧ್ರ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 

ಉತ್ತರ ಪ್ರದೇಶದಲ್ಲಿ ವಲಸಿಗ ಕಾರ್ಮಿಕರಿಗೆ ಸಹಾಯ ಮಾಡುತ್ತಿರುವವರನ್ನು ಸರ್ಕಾರ ಜೈಲಿಗೆ ಕಳಿಸುತ್ತಿದೆ ಎಂದು ಆರೋಪಿಸಿರುವ ಪ್ರಿಯಾಂಕ ವಾಧ್ರ, ಪಕ್ಷದ ಕಾರ್ಯಕರ್ತರಿಗೆ ಹೋರಾಟ ಮುಂದುವರೆಸುವಂತೆ ಕರೆ ನೀಡಿದ್ದಾರೆ. 

ಉತ್ತರ ಪ್ರದೇಶದ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಅವರನ್ನು ಎರಡು ಬಾರಿ ಬಂಧಿಸಲಾಗಿತ್ತು, ಕಾಂಗ್ರೆಸ್ ಪಕ್ಷ ವಲಸಿಗ ಕಾರ್ಮಿಕರಿಗಾಗಿ ವ್ಯವಸ್ಥೆ ಮಾಡಲಾಗಿರುವ ಬಸ್ ಗಳನ್ನು ರಾಜ್ಯಕ್ಕೆ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ. ಅಜಯ್ ಕುಮಾರ್ ಅವರನ್ನು ಎರಡು ಬಾರಿ ಬಂಧಿಸಲಾಗಿದೆ. ಕೋವಿಡ್-19 ರ ವಿರುದ್ಧ ಯೋಗಿ ಆದಿತ್ಯನಾಥ್ ಸರ್ಕಾರದ ಹೋರಾಟದ ವಿಧಾನವನ್ನು ನೋಡಿದ್ದೀರಾ? ಕಾಂಗ್ರೆಸ್ ಪಕ್ಷ ವಲಸಿಗ ಕಾರ್ಮಿಕರಿಗಾಗಿ ಬಸ್ ವ್ಯವಸ್ಥೆ ಮಾಡಿದರೆ, ಯೋಗಿ ಆದಿತ್ಯನಾಥ್ ಸರ್ಕಾರ ಕಾಂಗ್ರೆಸ್ ಅಧ್ಯಕ್ಷರನ್ನು ಸುಳ್ಳು ಆರೋಪದ ಮೇಲೆ ಜೈಲಿಗೆ ಕಳಿಸುತ್ತಿದೆ ಎಂದು ಪ್ರಿಯಾಂಕ ವಾಧ್ರ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

SCROLL FOR NEXT