ಸಾಂದರ್ಭಿಕ ಚಿತ್ರ 
ದೇಶ

ಐಸಿಎಸ್ ಇ 10, 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ, ಜುಲೈ 1 ರಿಂದ 14ರ ವರೆಗೆ ಪರೀಕ್ಷೆ

ಕೊವಿಡ್-19 ಲಾಕ್ ಡೌನ್ ಪರಿಣಾಮ ಮುಂದೂಡಿಕೆಯಾಗಿದ್ದ ಕೌನ್ಸಿಲ್​ ಫಾರ್​ ದಿ ಇಂಡಿಯನ್​ ಸ್ಕೂಲ್​ ಸರ್ಟಿಫಿಕೆಟ್​ ಎಕ್ಸಾಮಿನೇಷನ್ಸ್​ (ಸಿಐಎಸ್​ಸಿಇ)ನ 10 ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಜುಲೈ 1ರಿಂದ ಜುಲೈ 14ರ ವರೆಗೆ ಪರೀಕ್ಷೆಗಳು ನಡೆಯಲಿವೆ.

ನವದೆಹಲಿ: ಕೊವಿಡ್-19 ಲಾಕ್ ಡೌನ್ ಪರಿಣಾಮ ಮುಂದೂಡಿಕೆಯಾಗಿದ್ದ ಕೌನ್ಸಿಲ್​ ಫಾರ್​ ದಿ ಇಂಡಿಯನ್​ ಸ್ಕೂಲ್​ ಸರ್ಟಿಫಿಕೆಟ್​ ಎಕ್ಸಾಮಿನೇಷನ್ಸ್​ (ಸಿಐಎಸ್​ಸಿಇ)ನ 10 ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಜುಲೈ 1ರಿಂದ ಜುಲೈ 14ರ ವರೆಗೆ ಪರೀಕ್ಷೆಗಳು ನಡೆಯಲಿವೆ.

ಐಸಿಎಸ್ ಇ ಇಂದು ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, 10ನೇ ತರಗತಿಯ ಉಳಿದಿರುವ ವಿಷಯಗಳ ಪರೀಕ್ಷೆಗಳು ಜುಲೈ 2ರಿಂದ 12ರವರೆಗೆ ನಡೆಯಲಿದ್ದು, 12ನೇ ತರಗತಿಯ ಪರೀಕ್ಷೆಗಳು ಜುಲೈ 1ರಿಂದ 14ರವರೆಗೆ ನಡೆಯಲಿವೆ. 

ದೇಶಾದ್ಯಂತ ಇರುವ ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಪರೀಕ್ಷೆಗಳು ನಡೆಯಲಿವೆ ಎಂದು ಸಿಐಎಸ್​ಸಿಇ ತಿಳಿಸಿದೆ.

12ನೇ ತರಗತಿ ಪರೀಕ್ಷೆ ವೇಳಾಪಟ್ಟಿ
ಜುಲೈ 1ರ ಬೆಳಗ್ಗೆ 11ಕ್ಕೆ ಜೀವಶಾಸ್ತ್ರ (1ನೇ ಪೇಪರ್​)
ಜುಲೈ 3ರ ಬೆಳಗ್ಗೆ 11ಕ್ಕೆ ಬಿಜಿನೆಸ್​ ಸ್ಟಡೀಸ್​
ಜುಲೈ 5ರ ಬೆಳಗ್ಗೆ 11ಕ್ಕೆ ಭೂಗೋಳ ಶಾಸ್ತ್ರ
ಜುಲೈ 7ರ ಬೆಳಗ್ಗೆ 11ಕ್ಕೆ ಸೈಕಾಲಜಿ
ಜುಲೈ 9ರ ಬೆಳಗ್ಗೆ 11ಕ್ಕೆ ಸಮಾಜಶಾಸ್ತ್ರ
ಜುಲೈ 11ರ ಬೆಳಗ್ಗೆ 11ಕ್ಕೆ ಹೋಂ ಸೈನ್ಸ್​ (1ನೇ ಪೇಪರ್​)
ಜುಲೈ 13ರ ಬೆಳಗ್ಗೆ 11ಕ್ಕೆ ಎಲೆಕ್ಟಿವ್ ಇಂಗ್ಲಿಷ್​
ಜುಲೈ 14ರ ಬೆಳಗ್ಗೆ 11ಕ್ಕೆ ಆರ್ಟ್​ 5-ಕ್ರಾಫ್ಟ್​

10ನೇ ತರಗತಿ ಪರೀಕ್ಷೆ ವೇಳಾಪಟ್ಟಿ
ಜುಲೈ 2ರ ಬೆಳಗ್ಗೆ 11ಕ್ಕೆ ಭೂಗೋಳಶಾಸ್ತ್ರ ಎಚ್​ಸಿಜಿ 2ನೇ ಪೇಪರ್​
ಜುಲೈ 4ರ ಬೆಳಗ್ಗೆ 11ಕ್ಕೆ ಆರ್ಟ್​ ಪೇಪರ್​ 4 (ಅಪ್ಲೈಡ್​ ಆರ್ಟ್​)
ಜುಲೈ 6ರ ಬೆಳಗ್ಗೆ 11ಕ್ಕೆ (ಗ್ರೂಪ್​ 3 ಎಲೆಕ್ಟಿವ್​), ಕರ್ನಾಟಕ ಸಂಗೀತ, ಕಮರ್ಷಿಯಲ್​ ಅಪ್ಲಿಕೇಷನ್ಸ್​, ಕಂಪ್ಯೂಟರ್​ ಅಪ್ಲಿಕೇಷನ್ಸ್​, ಕುಕರಿ, ನಾಟಕ, ಎಕನಾಮಿಕ್​ ಅಪ್ಲಿಕೇಷನ್ಸ್​, ಎನ್ವಿರಾನ್​ಮೆಂಟಲ್​ ಅಪ್ಲಿಕೇಷನ್ಸ್​, ಫ್ಯಾಶನ್​ ಡಿಸೈನಿಂಗ್​, ಫ್ರೆಂಚ್​, ಜರ್ಮನ್​, ಹಿಂದೂಸ್ತಾನಿ ಸಂಗೀತ, ಹೋಂ ಸೈನ್ಸ್​, ಇಂಡಿಯನ್ಸ್​ ಡಾನ್ಸ್​, ಮಾಸ್​ ಮೀಡಿಯಾ ಕಮ್ಯುನಿಕೇಷನ್​, ಫಿಜಿಕಲ್​ ಎಜುಕೇಷನ್​, ಸ್ಪಾನಿಶ್​, ವೆಸ್ಟರ್ನ್​ ಮ್ಯೂಸಿಕ್​, ಯೋಗ, ಟೆಕ್ನಿಕಲ್​ ಡ್ರಾಯಿಂಗ್​ ಅಪ್ಲಿಕೇಷನ್ಸ್​
ಜುಲೈ 8ರ ಬೆಳಗ್ಗೆ 11ಕ್ಕೆ ಹಿಂದಿ
ಜುಲೈ 10ರ ಬೆಳಗ್ಗೆ 11ಕ್ಕೆ ಜೀವಶಾಸ್ತ್ರ-ವಿಜ್ಞಾನ 3ನೇ ಪೇಪರ್​
ಜುಲೈ 12ರ ಬೆಳಗ್ಗೆ 11ಕ್ಕೆ ಎಕಾನಾಮಿಕ್ಸ್​ (ಗ್ರೂಪ್​ 2 ಎಲೆಕ್ಟಿವ್​)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT