ದೇಶ

ಆಯ್ದ ಕೌಂಟರ್ ಗಳಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಇಂದು ಆರಂಭ: ಸಚಿವ ಪಿಯೂಷ್ ಗೋಯಲ್

Sumana Upadhyaya

ನವದೆಹಲಿ: ಶುಕ್ರವಾರದಿಂದ ಆಯ್ದ ರೈಲ್ವೆ ನಿಲ್ದಾಣಗಳಲ್ಲಿ ಟಿಕೆಟ್ ಬುಕ್ಕಿಂಗ್ ಕೌಂಟರ್ ತೆರೆಯಲಿದೆ. ಕೊರೋನಾ ವೈರಸ್ ಲಾಕ್ ಡೌನ್ ಆದ ಸುಮಾರು ಎರಡು ತಿಂಗಳ ನಂತರ ರೈಲ್ವೆ ಸಂಚಾರ ಆರಂಭವಾಗುತ್ತಿದೆ. ಭಾರತವನ್ನು ಹಿಂದಿನ ಸಹಜ ಚಟುವಟಿಕೆಗೆ ತರಲು ರೈಲ್ವೆ ಸಂಚಾರ ಆರಂಭಿಸಬೇಕಾಗಿದೆ ಎಂದು ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ರೈಲು ಸಂಚಾರ ಸೇವೆ ಆರಂಭಿಸಲಿದ್ದು ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದಿದ್ದಾರೆ.ರೈಲ್ವೆ ಟಿಕೆಟ್ ಬುಕ್ಕಿಂಗ್ ಕೌಂಟರ್ ಸಾಮಾನ್ಯ ಸೇವಾ ಕೇಂದ್ರಗಳ ಜೊತೆ ಇಂದು ತೆರೆಯಲಿದೆ. ವಲಯ ರೈಲ್ವೆಗಳು ಯಾವ ಟಿಕೆಟ್ ಕೌಂಟರ್ ತೆರೆದಿರುತ್ತದೆ ಎಂದು ಗುರುತಿಸುತ್ತದೆ ಎಂದು ರೈಲ್ವೆ ಮಂಡಳಿ ತಿಳಿಸಿದೆ.

ಇಂದಿನಿಂದ ಕಾಯ್ದಿರಿಸಿದ ಟಿಕೆಟ್‌ಗಳ ಬುಕ್ಕಿಂಗ್ ಮತ್ತು ರದ್ದುಪಡಿಸುವಿಕೆ ಅಂಚೆ ಕಚೇರಿಗಳು, ಯಾತ್ರಿ ಟಿಕೆಟ್ ಸುವಿದಾ ಕೇಂದ್ರ ಪರವಾನಗಿದಾರರು ಮತ್ತು ಐಆರ್‌ಸಿಟಿಸಿಯ ಅಧಿಕೃತ ಏಜೆಂಟರ ಮೂಲಕ, ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯ ಮೀಸಲಾತಿ ಕೇಂದ್ರಗಳು ಮತ್ತು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಲಭ್ಯವಿರುತ್ತದೆ ಎಂದು ಇಲಾಖೆ ತಿಳಿಸಿದೆ.

SCROLL FOR NEXT