ದೇಶ

ಸಂಸದೀಯ ಸಮಿತಿ ಸಭೆ ನಡೆಸಲು ಪ್ರತಿಪಕ್ಷಗಳ ಆಗ್ರಹ: ಸರ್ಕಾರದಿಂದ ನಿರುತ್ಸಾಹ, ತಿರಸ್ಕಾರ ಸಾಧ್ಯತೆ

Sumana Upadhyaya

ನವದೆಹಲಿ: ಸಂಸದೀಯ ಸಮಿತಿಗಳ ಸಭೆಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸುವ ಸಾಧ್ಯತೆಯಿದೆ. ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಿದರೆ ರಹಸ್ಯ ಮಾಹಿತಿಗಳ ಗೌಪ್ಯತೆಗೆ ಧಕ್ಕೆಯುಂಟಾಗಬಹುದು, ಮಾಹಿತಿ ಸೋರಿಕೆಯಾಗುವ ಸಾಧ್ಯತೆಯಿದೆ ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ.

ಅಸುರಕ್ಷಿತ ಮಾಧ್ಯಮಗಳ ಮೂಲಕ ಸೂಕ್ಷ್ಮ ಮಾಹಿತಿಗಳನ್ನು ಸೋರಿಕೆ ಮಾಡುವುದು ಸರಿಯಲ್ಲ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯ ಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರ ಅಭಿಪ್ರಾಯವಾಗಿದೆ. ಸಂಸದೀಯ ವ್ಯವಹಾರಗಳ ವಿಷಯಗಳನ್ನು ಗೌಪ್ಯವಾಗಿ ಕಾಪಾಡಿಕೊಳ್ಳಬೇಕೆಂಬುದು ಸರ್ಕಾರದ ಅಭಿಪ್ರಾಯವಾಗಿದೆ.

ದೇಶದಲ್ಲಿ ವಾಯುಮಾರ್ಗ ಮತ್ತು ರೈಲು ಸಂಚಾರ ಸೇವೆಗಳನ್ನು ಹಂತ ಹಂತವಾಗಿ ಆರಂಭಿಸುತ್ತಿರುವಾಗ ಮತ್ತು ಕೇಂದ್ರ ಸರ್ಕಾರ ಅಂತರಾಜ್ಯ ಸಂಚಾರಕ್ಕೆ ಅನುವು ಮಾಡಿಕೊಡುತ್ತಿರುವ ಸಂದರ್ಭದಲ್ಲಿ ಸಮಿತಿ ಸದಸ್ಯರ ಸಂಚಾರಕ್ಕೆ ಯಾವುದೇ ಅಡಚಣೆಯಿರುವುದಿಲ್ಲ. ಹೀಗಿರುವಾಗ ಸಂಸದೀಯ ಸಮಿತಿ ಸಭೆಯನ್ನು ಜೂನ್ 1ರಿಂದ ಆರಂಭಿಸಬಹುದು.

ಕೊರೋನಾ ವೈರಸ್ ಬಿಕ್ಕಟ್ಟನ್ನು ಸರ್ಕಾರ ಹೇಗೆ ನಿಭಾಯಿಸುತ್ತಿದೆ, ವಲಸೆ ಕಾರ್ಮಿಕರ ಸಮಸ್ಯೆಗೆ ಏನು ಕ್ರಮ ಕೈಗೊಂಡಿದೆ ಎಂದು ಚರ್ಚೆ  ನಡೆಸಲು, ಸರ್ಕಾರದ ನಿಖರತೆ ಬಗ್ಗೆ ತಿಳಿದುಕೊಳ್ಳಲು ಸಂಸದೀಯ ಸಮಿತಿ ಸಭೆಗಳನ್ನು ನಡೆಸುವಂತೆ ವಿರೋಧ ಪಕ್ಷಗಳು ಇತ್ತೀಚೆಗೆ ಸರ್ಕಾರವನ್ನು ಒತ್ತಾಯಿಸಿದ್ದವು.

SCROLL FOR NEXT