ದೇಶ

ಬಸ್ಸಿನಲ್ಲೇ ಅವಳಿ ಮಕ್ಕಳಿಗೆ ಜನ್ಮವಿತ್ತ ವಲಸೆ ಕಾರ್ಮಿಕ ಮಹಿಳೆ, ಜನಿಸಿದ ಕೆಲ ಗಂಟೆಗಳಲ್ಲಿ ಶಿಶುಗಳು ಸಾವು

Raghavendra Adiga

ಬರೇಲಿ: ಆರು ತಿಂಗಳ ಗರ್ಭಿಣಿಯಾಗಿದ್ದ ವಲಸೆ ಕಾರ್ಮಿಕ ಮಹಿಳೆಯೊಬ್ಬರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ. 

ಭಾನುವಾರ ನಡೆದ ಘಟನೆಯಲ್ಲಿ ಶಿಶುಗಳು ಜನಿಸಿದ ಒಂದು ಗಂಟೆಯೊಳಗೆ ಮೃತಪಟ್ಟಿವೆ. ಸಧ್ಯ ಮಹಿಳೆಯನ್ನು ಕ್ವಾರಂಟೈನ್  ಮಾಡಲಾಗಿದ್ದು ಆಕೆಯ ಸ್ವ್ಯಾಬ್ ಮಾದರಿಗಳನ್ನು ಕೊರೋನಾ ಪರೀಕ್ಷೆಗಳಿಗೆ ಕಳುಹಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಮೂಲೊಅದವರಾಗಿದ್ದ 24 ವರ್ಷದ ಗರ್ಭಿಣಿ ಹಾಗೂ ಆಕೆಯ ಪತಿ  (26)ಹಾಪುರ್ ಜಿಲ್ಲೆಯ ಇಟ್ಟಿಗೆ ಗೂಡಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್ ಡೌನ್ ಸಮಯದಲ್ಲಿ ಕಾರ್ಖಾನೆ ಸ್ಥಗಿತವಾಗಿದ್ದ ಕಾರಣ ಅವರು ಸರ್ಕಾರದ ಸಹಾಯದಿಂದ ಮನೆಗೆ ಮರಳಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರು ಆದರೆ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಇದಕ್ಕಾಗಿ ಅವರು ತಾವು ಖಾಸಗಿ ಬಸ್ ಪ್ರಯಾಣಕ್ಕೆ ಮುಂದಾದರು. ಇತರ 42 ಜನರೊಂದಿಗೆ ಒಟ್ಟಾಗಿ 1.2 ಲಕ್ಷ ರೂ. ಖರ್ಚಿನೊಂದಿಗೆ ಖಾಸಗಿ ಬಸ್ ಪ್ರಯಾಣ ಪ್ರಾರಂಭಿಸಿದ್ದ ವೇಳೆ ಮಹಿಳೆಗೆ ಹೆರಿಗೆ ನೋವು ತೀವ್ರವಾಗ್ಗಿದೆ.  ಆಗ ದಂಪತಿಯನ್ನು ಬರೇಲಿಯ ಬಿತ್ರಿ ಚೈನ್‌ಪುರ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ 24  ಬಸ್ ಚಾಲಕ ಬಸ್ಸಿನಿಂದ ಕೆಳಗಿಳಿಸಿದ್ದಾನೆ. ಲ್ಲಿಂದ 108 ಆಂಬ್ಯುಲೆನ್ಸ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆತಂದಿತ್ತು.

ಆದಾಗ್ಯೂ, ಬಸ್ ಚಾಲಕ ತಾನು ಬಸ್ ನೊಂದಿಗೆ ಕಾಯಲು ನಿರಾಕರಿಸಿದ್ದಾನೆ.  ಇತರ ಪ್ರಯಾಣಿಕರೊಂದಿಗೆ ಗಮ್ಯಸ್ಥಾನಕ್ಕೆ ತೆರಳಿದ್ದಾನೆ.  ಜಿಲ್ಲಾ ಆಸ್ಪತ್ರೆಯ ವೈದ್ಯರು ಹೇಳಿದಂತೆ ಮಹಿಳೆ ಈಗಾಗಲೇ ಬಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು. ಅವಳು ಇಲ್ಲಿಗೆ ತಲುಪಿದಾಗ ಎರಡೂ ಮಕ್ಕಳು ಮೃತಪಟ್ಟಿದ್ದವು. ಅವರ ಸ್ಥಿತಿ ಸ್ಥಿರವಾಗಿದೆ ಆದರೆ ಆಕೆ ಮಕ್ಕಳ ಸಾವಿನಿಂದ ದುಃಖಿತಳಾಗಿದ್ದಾಳೆ. ವಳು ಕೇವಲ ಆರು ತಿಂಗಳು ಗರ್ಭಿಣಿ. ಅವಳು ಬೇರೆ ಜಿಲ್ಲೆಯಿಂದ ಪ್ರಯಾಣಿಸಿದ್ದ ಕಾರಣ ಅವಳ ಕೋವಿಡ್ ಪರೀಕ್ಷೆ ನಡೆಯಬೇಕಿದೆ" ಎಂದಿದ್ದಾರೆ.

ಇದಕ್ಕೂ ಮುನ್ನ, ಶುಕ್ರವಾರ, ಸುಮಾರು 21 ವರ್ಷ ವಯಸ್ಸಿನ ಮತ್ತೊಬ್ಬ ವಲಸೆ ಕಾರ್ಮಿಕ ಮಹಿಳೆ ಕುಶಾಂಬಿ ಜಿಲ್ಲೆಯ ಸಿರಾತು ಎಂಬಲ್ಲಿ ಶ್ರಮಿಕ್ ರೈಲಿನಲ್ಲೇ ಅವಳಿ ಮಕ್ಕಳಿಗೆ ಜನ್ಮ ಕೊಟ್ಟಿದ್ದಳು. ಆದಾಗ್ಯೂ, ನವಜಾತ ಅವಳಿಗಳು ಜನಿಸಿದ ಕೆಲವೇ ಗಂಟೆಗಳ ನಂತರ ಮರಣಹೊಂದಿದವು ಮತ್ತು ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿತ್ತು.  

SCROLL FOR NEXT