ದೇಶ

ಅಯೋಧ್ಯೆ ರಾಮಜನ್ಮಭೂಮಿ ಭವ್ಯ ಮಂದಿರ ನಿರ್ಮಾಣಕ್ಕೆ ಅಧಿಕೃತ ಚಾಲನೆ, ರಾಮಲಲ್ಲಾಗೆ ವಿಶೇಷ ಪೂಜೆ

Raghavendra Adiga

ಅಯೋಧ್ಯೆ: ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಭವ್ಯ ದೇವಾಲಯದ ನಿರ್ಮಾಣವು ಇಂದಿನಿಂದ (ಮೇ 26) ಅಧಿಕೃತವಾಗಿ ಪ್ರಾರಂಭವಾಗಿದೆ ಎಂದುರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯಗೋಪಾಲ್ ದಾಸ್ ಘೋಷಿಸಿದ್ದಾರೆ.

ಸಧ್ಯ ರಾಮ್ ಲಲ್ಲಾ ವಿಗ್ರಹವಿರುವ ಹೊಸದಾಗಿ ನಿರ್ಮಾಣವಾದ ತಾತ್ಕಾಲಿಕ ದೇವಾಲಯದ ರಚನೆಯಲ್ಲಿ ಪೂಜೆ ನಡೆಸಿದ ನಂತರ ಮಹಂತ್ ಈ ಘೋಷಣೆ ಮಾಡಿದ್ದಾರೆ. ಫೈಬರ್ ನಿಂದ ನಿರ್ಮಿಸಲಾದ ಈ ಹೊಸ ರಚನೆಯು ಮಾನಸ ಭವನದಲ್ಲಿದೆ.

ಈ ಹಿಂದೆ ನೆಲದಲ್ಲಿ ಹೂತುಹೋಗಿದ್ದ ಶಿಲೆಗಳನ್ನು ತೆಗೆದು ನೆಲವನ್ನು ಸಮಗೊಳಿಸುವ ಕಾರ್ಯ ನಡೆದಿದ್ದು  ಈ ಪ್ರಕ್ರಿಯೆಯಲ್ಲಿಯೇ ಐದು ಅಡಿ ಶಿವಲಿಂಗ್, ಏಳು ಕಂಬಗಳ ಕಪ್ಪು ಶಿಲಾರಚನೆ, ಆರು ಕಂಬಗಳ ಕೆಂಪು ಮರಳುಗಲ್ಲು ಮತ್ತು ದೇವಿ-ದೇವತೆಗಳ ಮುಕ್ಕಾದ ವಿಗ್ರಹಳು ಪತ್ತೆಯಾಗಿದ್ದವು.

ಅಲ್ಲದೆ, ಲಾಕ್‌ಡೌನ್ ಮತ್ತು ಕರೋನಾ ಬಿಕ್ಕಟ್ಟು ಅಯೋಧ್ಯೆಯಲ್ಲಿ ರಾಮ ದೇವಾಲಯದ ನಿರ್ಮಾಣದ ಜವಾಬ್ದಾರಿಯನ್ನು ಹೊಂದಿರುವ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ದೇಣಿಗೆ ನೀಡುವುದಕ್ಕೆ ಯಾವ ಅಡ್ಡಿಯನ್ನೂ ತರಲಿಲ್ಲ. ಲಾಕ್‌ಡೌನ್ ಅವಧಿಯಲ್ಲಿ ಟ್ರಸ್ಟ್‌ನ ಎರಡು ಖಾತೆಗಳಲ್ಲಿ 4.60 ಕೋಟಿ ರೂ. ಸಂಗ್ರಹವಾಗಿದೆ ಎಂದು ಮಹಂತ್ ಹೇಳಿದ್ದಾರೆ.

SCROLL FOR NEXT