ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ದೇಶೀಯ ಖಾಸಗಿ ಲಘು ವಿಮಾನಗಳ ಹಾರಾಟಕ್ಕೆ ವಿಮಾನಯಾನ ಸಚಿವಾಲಯ ಅನುಮತಿ

ಕೊರೋನಾ ವೈರಸ್ ಲಾಕ್ ಡೌನ್ 4.0 ನಿಯಮಗಳಲ್ಲಿ ಸಡಿಲಿಕೆ ತಂದಿದ್ದ ಕೇಂದ್ರ ಸರ್ಕಾರ ಇದೀಗ ದೇಶೀಯ ಖಾಸಗಿ ಲಘು ವಿಮಾನಗಳ ಹಾರಾಟಕ್ಕೆ ಕೂಡ ಅಸ್ತು ಎಂದಿದೆ.

ಸಂಗ್ರಹ ಚಿತ್ರ
Srinivasa Murthy VN
Updated On : 26 May 2020, 10:38 am

ನವದೆಹಲಿ: ಕೊರೋನಾ ವೈರಸ್ ಲಾಕ್ ಡೌನ್ 4.0 ನಿಯಮಗಳಲ್ಲಿ ಸಡಿಲಿಕೆ ತಂದಿದ್ದ ಕೇಂದ್ರ ಸರ್ಕಾರ ಇದೀಗ ದೇಶೀಯ ಖಾಸಗಿ ಲಘು ವಿಮಾನಗಳ ಹಾರಾಟಕ್ಕೆ ಕೂಡ ಅಸ್ತು ಎಂದಿದೆ.

ದೇಶೀಯ ಖಾಸಗಿ ಲಘು ವಿಮಾನಗಳು, ನಿಗದಿತವಲ್ಲದ ವಲ್ಲದ ಖಾಸಗಿ ಜೆಟ್ ವಿಮಾನಗಳು, ಖಾಸಗಿ ಹೆಲಿಕಾಪ್ಟರ್ ಗಳು, ಮೈಕ್ರೈಲೈಟ್ ವಿಮಾನಗಳ ಹಾರಾಟಕ್ಕೆ ಕೇಂದ್ರ ವಿಮಾನಯಾನ ಸಚಿವಾಲಯ ಅನುಮತಿ ನೀಡಿದೆ. 

ದೇಶದ ಉದ್ಯಮಿಗಳು ತಮ್ಮ ವ್ಯವಹಾರದ ದೃಷ್ಟಿಯಿಂದ ಖಾಸಗಿ ವಿಮಾನಗಳ ಹಾರಾಟಕ್ಕೆ ಅನುಮತಿ ಕೇಳಿದ್ದವು ಎನ್ನಲಾಗಿದೆ. ಈ ಬಗ್ಗೆ ಸಭೆಯಲ್ಲಿ ತೀರ್ಮಾನಿಸಿ ನಿರ್ಣಯ ಕೈಗೊಳ್ಳುತ್ತೇವೆ ಎಂದು ಹೇಳಿದ್ದ ಕೇಂದ್ರ ನಾಗರಿಕಯ ವಿಮಾನಯಾನ ಸಚಿವಾಲಯ ಕೊರೋನಾ ವೈರಸ್  ಲಾಕ್ ಡೌನ್ 4.0 ನಲ್ಲಿ ಖಾಸಗಿ ಜೆಟ್ ಮತ್ತು ಲಘು ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಿದೆ.

Advertisement

Advertisement

ಇನ್ನು ನಿನ್ನೆಯಿಂದ ದೇಶಾದ್ಯಂತ ದೇಶೀಯವಾಗಿ ವಿಮಾನಯಾನ ಸೇವೆ ಆರಂಭಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement