ದೇಶ

ಮೋದಿ 2.0 ಸರ್ಕಾರದ ವಾರ್ಷಿಕೋತ್ಸವಕ್ಕೆ ಬಿಜೆಪಿಯಿಂದ ಭರ್ಜರಿ ತಯಾರಿ: ಯೋಜನೆಗಳು ಹೀಗಿವೆ...

Srinivas Rao BV

ನವದೆಹಲಿ: ಮೋದಿ 2.0 ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ವಾರ್ಷಿಕೋತ್ಸವದ ತಯಾರಿಯಲ್ಲಿ ತೊಡಗಿದೆ. 

ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಬಿಜೆಪಿ 750 ವರ್ಚ್ಯುಯಲ್ ಸಭೆಗಳನ್ನು (ವಿಡಿಯೋ ಕಾನ್ಫರೆನ್ಸ್) ನಡೆಸಲು ಬಿಜೆಪಿ ಸಿದ್ಧತೆ ನಡೆಸಿದೆ. ಕೋವಿಡ್-19 ರ ಭೀತಿಯ ನಡುವೆಯೇ ಈ ತಯಾರಿಗಳು ನಡೆದಿದ್ದು, ಬಹುತೇಕ ಕಾರ್ಯಕ್ರಮಗಳು ಆನ್ ಲೈನ್ ಮೂಲಕವೇ ನಡೆಯಲಿದೆ. 

ರಾಷ್ಟ್ರೀಯ ನಾಯಕರು ಮತ್ತು ರಾಜ್ಯ ನಾಯಕತ್ವದಿಂದ ಸುಮಾರು 1,000 ವರ್ಚ್ಯುಯಲ್‍ ಸಭೆಗಳು ನಡೆಯಲಿವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೇಳಿದ್ದಾರೆ. ಈ ಕುರಿತಂತೆ ಸೋಮವಾರ ಪಕ್ಷದ ರಾಜ್ಯಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಅವರು ತಿಳಿಸಿದ್ದಾರೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಪ್ರಧಾನ ಮಂತ್ರಿಯವರ 'ಆತ್ಮ ನಿರ್ಭರ್ ಭಾರತ್’ ಕೇಂದ್ರಬಿಂದುವಾಗಲಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ದೇಶಾದ್ಯಂತ 10 ಕೋಟಿ ಮನೆಗಳಿಗೆ ಪ್ರಧಾನಿ ಕೈ ಬರಹಗದ ಪತ್ರಗಳ ಪ್ರತಿಯನ್ನು ತಲುಪಿಸುವ ಕೆಲಸವೂ ನಡೆಯಲಿದೆ. ಈ ಪತ್ರದಲ್ಲಿ ಕೊರೋನಾ ವೈರಸ್ ವಿರುದ್ಧ ಹೋರಾಡಲು ಪ್ರಧಾನಿ ನೀಡಿರುವ ಸಲಹೆಗಳು ಹಾಗೂ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಇರಲಿವೆ. 

ಆರ್ಟಿಕಲ್ 370 ರದ್ದತಿ, ತ್ರಿವಳಿ ತಲಾಖ್ ಕಾಯ್ದೆ ಜಾರಿ, ರಾಮ ಮಂದಿರ ನಿರ್ಮಾಣಕ್ಕೆ ಸಿದ್ಧತೆಗಳು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರಥಮ ವರ್ಷದ ಸಾಧನಾ ಪಟ್ಟಿಯಲ್ಲಿರಲಿವೆ. 

SCROLL FOR NEXT