ದೇಶ

ಕೋವಿಡ್-19: ಕಾಶ್ಮೀರದಿಂದ ರಜೌರಿವರೆಗೂ ಮಾಲೀಕನನ್ನು ಕರೆದೊಯ್ದ ಕುದುರೆಗೆ 'ಹೋಮ್ ಕ್ವಾರಂಟೈನ್' 

Nagaraja AB

ಜಮ್ಮು: ಕಾಶ್ಮೀರದಿಂದ ಜಮ್ಮ ವಲಯದ ರಜೌರಿ ಜಿಲ್ಲೆಯವರೆಗೂ ತನ್ನ ಮಾಲೀಕನನ್ನು ಕರೆದೊಯ್ದ ಕುದುರೆಯೊಂದಕ್ಕೆ ಕೊರೋನಾವೈರಸ್ ಭೀತಿಯ ಹಿನ್ನೆಲೆಯಲ್ಲಿ ಇತರ ಪ್ರಾಣಿಗಳಿಂದ ಪ್ರತ್ಯೇಕಗೊಳಿಸಿ ಹೋಮ್ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.

ಮುಘಲ್ ರಸ್ತೆ ಮಾರ್ಗವಾಗಿ ಕಣಿವೆ ರಾಜ್ಯದಿಂದ ಕುದುರೆ ಮೂಲಕ ಮಾಲೀಕನನ್ನು ಕರೆದೊಯ್ದ ನಂತರ ಮುಂಜಾಗ್ರತಾ ಕ್ರಮವಾಗಿ ಕುದುರೆಯನ್ನು ಇತರ ಪ್ರಾಣಿಗಳಿಂದ ಪ್ರತ್ಯೇಕಗೊಳಿಸುವಂತೆ ರಾಜೌರಿಯ ಕುಟುಂಬವೊಂದಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಶೋಫಿಯನ್ ನಿಂದ ತವರು ಜಿಲ್ಲೆ ರಜೌರಿಗೆ ಆಗಮಿಸಿದ ಬಳಿಕ ಕುದುರೆ ಸವಾರನನ್ನು ಪೊಲೀಸರು ತಪಾಸಣೆಗೊಳಪಡಿಸಿದ್ದಾರೆ ಎಂದು ತಾನಾಮಂಡಿ ತಹಸೀಲ್ದಾರ್ ಅಂಜುಮ್ ಬಸೀರ್ ಖಾನ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. 

ಕುದುರೆ ಸವಾರಿ ಮಾಡಿದ ವ್ಯಕ್ತಿಯನ್ನು ಕ್ವಾರಂಟೈನ್ ಗೆ ಕಳುಹಿಸಲಾಗಿದ್ದು, ಕೋವಿಡ್-19 ಪರೀಕ್ಷೆಗಾಗಿ ಆತನ ಮಾದರಿಯನ್ನು ಸಂಗ್ರಹಿಸಲಾಗಿದೆ ಎಂದು ಖಾನ್ ತಿಳಿಸಿದ್ದಾರೆ. 

ರಜೌರಿ ಸೇರಿದಂತೆ ಜಮ್ಮು ವಲಯದ ಇತರ ನಾಲ್ಕು ಜಿಲ್ಲೆಗಳನ್ನು ಕಳೆದ ವಾರ ಹಸಿರು ವಲಯ ಎಂದು ಘೋಷಿಸಲಾಗಿದೆ. ಆದರೆ, ಶೋಫಿಯನ್ ಸೇರಿದಂತೆ ಇತರ 10 ಜಿಲ್ಲೆಗಳು ಕೆಂಪು ವಲಯದಲ್ಲಿವೆ. ರೆಡ್ ವಲಯದಿಂದ ಹಸಿರು ವಲಯಕ್ಕೆ ತೆರಳಬೇಕಾದರೆ ಅನುಮತಿ ಅಗತ್ಯವಾಗಿದೆ. 

SCROLL FOR NEXT