ದೇಶ

ತಾಯಿ ದೇವತೆಗೆ ಮೋದಿ ಬರೆದಿರುವ ಪತ್ರಗಳಿಗೆ ಪುಸ್ತಕ ರೂಪ: ಹಾರ್ಪರ್ ಕಾಲಿನ್ಸ್ ನಿಂದ ಮುಂದಿನ ತಿಂಗಳು ಪ್ರಕಟ

Nagaraja AB

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಯುವಕರಾಗಿದ್ದಾಗ 'ಜಗತ್ ಜನನಿ' ಎಂದು ಸಂಭೋದಿಸಿ ಪ್ರತಿ ರಾತ್ರಿ ವಿವಿಧ ವಿಷಯಗಳ ಕುರಿತು ತನ್ನ ತಾಯಿಗೆ ಬರೆದಿರುವ ಅನೇಕ ಪತ್ರಗಳು ಮುಂದಿನ ತಿಂಗಳು ಪುಸ್ತಕ ರೂಪದಲ್ಲಿ ಇಂಗ್ಲಿಷ್ ನಲ್ಲಿ ಪ್ರಕಟವಾಗಲಿದೆ.

ಖ್ಯಾತ ಚಲನಚಿತ್ರ ವಿಮರ್ಶಕ ಭಾವನಾ ಸೋಮಯ್ಯ ಅವರು ಗುಜರಾತಿಯಿಂದ ಅನುವಾದಿಸಿರುವ 'ಲೆಟರ್ಸ್ ಟು ಮದರ್'  ಇ- ಬುಕ್ ಮತ್ತು ಹಾರ್ಡ್‌ಬ್ಯಾಕ್ ಆಗಿ ಬಿಡುಗಡೆ ಮಾಡಲಾಗುವುದು. 1986ಕ್ಕೂ ಹಿಂದಿನ ಈ ಪತ್ರಗಳನ್ನು ಮೋದಿಯ ಡೈರಿಯಿಂದ ತೆಗೆದುಕೊಳ್ಳಲಾಗಿದೆ ಎಂದು ಹಾರ್ಪರ್ ಕಾಲಿನ್ಸ್  ಹೇಳಿದೆ.

ಇದು ಸಾಹಿತ್ಯಿಕ ಬರವಣಿಗೆಯ ಪ್ರಯತ್ನವಲ್ಲ; ಈ ಪುಸ್ತಕದಲ್ಲಿ ಕಾಣಿಸಿಕೊಂಡಿರುವ ಹಾದಿಗಳು ನನ್ನ ಅವಲೋಕನಗಳ ಪ್ರತಿಬಿಂಬಗಳು ಮತ್ತು  ಕೆಲವೊಮ್ಮೆ ಸರಿಯಾಗಿರದ ಆಲೋಚನೆಗಳು, ಯಾವುದೇ ಫಿಲ್ಟರ್ ಮಾಡದೆ ವ್ಯಕ್ತಪಡಿಸಿರುವುದಾಗಿ ಮೋದಿ ಹೇಳಿರುವುದನ್ನು ಹಾರ್ಪರ್ ಕಾಲಿನ್ಸ್  ಇಂಡಿಯಾ ತಿಳಿಸಿದೆ.

'ನಾನು ಲೇಖಕ ಅಲ್ಲ, ನಮ್ಮಲ್ಲಿನ ಬಹುತೇಕ ಮಂದಿ ಬರವಣಿಗೆಗಾರರು ಅಲ್ಲ, ಆದರೆ, ಎಲ್ಲರೂ ಏನ್ನನಾದರೂ ಅಭಿವ್ಯಕ್ತಿ ಪಡಿಸಲು ಬಯಸುತ್ತಾರೆ. ಪ್ರಚೋದನಾಕಾರಿ ಮಿತಿ ಮೀರಿದಾಗ ಪೆನ್ ಮತ್ತು ಕಾಗದ ಬಿಟ್ಟರೆ ಬೇರೆ ಆಯ್ಕೆಗಳಿಲ್ಲ. ಬರೆಯುವ ಅಗತ್ಯವಿಲ್ಲ, ಆದರೆ, ಮನಸ್ಸು ಹಾಗೂ ತಲೆಯೊಳಗೆ ಏನು ನಡೆಯುತ್ತಿದೆ ಮತ್ತು ಏಕೆ ಎಂಬುದನ್ನು ಆತ್ಮಾ ವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಮೋದಿ ಹೇಳಿದ್ದಾರೆ.

SCROLL FOR NEXT