ದೇಶ

ಗೃಹ ಸಚಿವಾಲಯ ಫೇಸ್ ಬುಕ್ ಪುಟದಲ್ಲಿ ವಿಸ್ಕಿ, ಲಿಕ್ಕರ್ ಬಾಟಲ್ ಫೋಟೋ, ವೈರಲ್ ಆದ ಕೂಡಲೇ ಡಿಲೀಟ್!

Sumana Upadhyaya

ನವದೆಹಲಿ: ಕೇಂದ್ರ ಗೃಹ ಸಚಿವಾಲಯದ ಅಧಿಕೃತ ಫೇಸ್ ಬುಕ್ ಪುಟದಲ್ಲಿ ಪ್ರಮಾದವಶಾತ್ ವಿಸ್ಕಿ ಬಾಟಲ್ ಗಳು, ಲಿಕ್ಕರ್ ತುಂಬಿದ ಬಾಟಲ್ ಗಳು ಮತ್ತು ಸ್ನಾಕ್ಸ್ ಗಳ ಫೋಟೋಗಳು ಅಪ್ ಲೋಡ್ ಆಗಿದ್ದು ವಿವಾದ ಸೃಷ್ಟಿಯಾಯಿತು.

ಆಂಫಾನ್ ಚಂಡಮಾರುತ ನಂತರ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ ಡಿಆರ್ ಎಫ್)ಯ ಪರಿಹಾರ ಕಾರ್ಯಗಳ ಫೋಟೋಗಳನ್ನು ಗೃಹ ಸಚಿವಾಲಯ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಲಾಗಿದ್ದು ಅದರ ಜೊತೆ ಈ ಫೋಟೋ ಕೂಡ ಅಪ್ ಲೋಡ್ ಆಗಿತ್ತು.

ಫೇಸ್ ಬುಕ್ ಪೋಸ್ಟ್ ನಲ್ಲಿ ಪಿಐಬಿ ಇಂಡಿಯಾ, ಎನ್ ಡಿಆರ್ ಎಫ್, ಡಿಡಿ ಬಾಂಗ್ಲಾನ್ಯೂಸ್ ನ್ನು ಟ್ಯಾಗ್ ಮಾಡಲಾಗಿದ್ದು ಆಂಫಾನ್ ನಂತರದ ಮರುಸ್ಥಾಪನೆ ಎಂಬ ಹ್ಯಾಶ್ ಟ್ಯಾಗ್ ಮಾಡಲಾಗಿದೆ. ಬೆಳಗ್ಗೆ 9 ಗಂಟೆಗೆ ಫೋಟೋ ಶೇರ್ ಮಾಡಲಾಗಿದ್ದು ಅದು ವೈರಲ್ ಆಗುತ್ತಿದ್ದಂತೆ ಅರ್ಧ ಗಂಟೆಯೊಳಗೆ ಡಿಲೀಟ್ ಮಾಡಲಾಯಿತು.

ಗೃಹ ಸಚಿವಾಲಯದ ಪುಟವನ್ನು ನಿಭಾಯಿಸುತ್ತಿರುವ ವ್ಯಕ್ತಿಯಿಂದ ಆದ ಆಕಸ್ಮಿಕ ಪ್ರಮಾದ ಎಂದು ಅಧಿಕಾರಿಗಳು ಹೇಳಿದ್ದಾರೆ. ಗೃಹ ಸಚಿವಾಲಯದ ಪುಟವನ್ನು ನಿಭಾಯಿಸುವ ವ್ಯಕ್ತಿ ಈಗಾಗಲೇ ಕ್ಷಮೆ ಕೇಳಿದ್ದಾರೆ. ಫೋಟೋವನ್ನು ಬೆಳಗ್ಗೆ 9.32ಕ್ಕೆ ಡಿಲೀಟ್ ಮಾಡಲಾಗಿದೆ ಎಂದು ಗೃಹ ಸಚಿವಾಲಯ ಮೂಲಗಳು ತಿಳಿಸಿವೆ.

SCROLL FOR NEXT