ದೇಶ

ಉತ್ತರ ಪ್ರದೇಶ: ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಿದ್ದ ವಲಸೆ ಕಾರ್ಮಿಕ ಆತ್ಮಹತ್ಯೆಗೆ ಶರಣು!

Srinivasamurthy VN

ಲಖನೌ: ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಿದ್ದ ವಲಸೆ ಕಾರ್ಮಿಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ಜೌಹಾರ್ ಪುರ ಗ್ರಾಮದ ನಿವಾಸಿ 35 ವರ್ಷದ ವಲಸೆ ಕಾರ್ಮಿಕ ಜಗದೀಶ್ ಪ್ರಸಾದ್ ಎಂಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಜಗದೀಶ್ ಪ್ರಸಾದ್ ಕಳೆದ ಆರು ತಿಂಗಳ ಹಿಂದೆ ಕೆಲಸ ಅರಸಿ ಸೂರತ್ ಗೆ ತೆರಳಿದ್ದ. ಕಳೆದ ಮೇ 20ರಂದು ಗ್ರಾಮಕ್ಕೆ  ವಾಪಸ್ ಆಗಿದ್ದ, ಈ ವೇಳೆ ಗ್ರಾಮದಲ್ಲೇ ಆತನನ್ನು ಕ್ವಾರಂಟೈನ್ ಮಾಡಲಾಗಿತ್ತು.

ಬಳಿಕ ಆತ ಕ್ವಾರಂಟೈನ್ ಕೇಂದ್ರ ಪರಾರಿಯಾಗಿ, ತನ್ನ ಮಾವನಮನೆಗೆ ಬಂದಿದ್ದ. ಆದರೆ ಮಾರನೆ ದಿನವೇ ಅಂದರೆ ಗುರುವಾರ ನೇಣು ಬಿಗಿದುಕೊಂಡು ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಿಂಡ್ವಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಮಾಹಿತಿ ನೀಡಿರುವ  ಎಸ್ ಎಚ್ ಒ ನೀರಜ್ ಕುಮಾರ್ ಅವರು, ಪ್ರಾಥಮಿಕ ತನಿಖೆಯಲ್ಲಿ ಮೃತ ಜಗದೀಶ್ ಮತ್ತು ಆತನ ಪತ್ನಿಯೊಂದಿಗೆ ಕಲಹದಿಂದಾಗಿ ಆತ ಆತ್ಮಹತ್ಯೆಗೆ ಶರಣಾಗಿರುವ ಕುರಿತು ಶಂಕೆ ವ್ಯಕ್ತವಾಗಿದೆ. ರೇಷನ್ ತರುವ ವಿಚಾರದಲ್ಲಿ ಪತ್ನಿಯೊಂದಿಗೆ ಆತ ಜಗಳ ಮಾಡಿಕೊಂಡಿದ್ದ. ಪ್ರಕರಣ  ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ
ಆತ್ಮಹತ್ಯೆಯಂತಹ ನಿರ್ಧಾರಗಳು ತಪ್ಪು. ನೀವು ವೈಯುಕ್ತಿಕ ಸಮಸ್ಯೆಗಳಿಂದಾಗಿ ಆತ್ಮಹತ್ಯೆಯಂತಹ ಯೋಚನೆ ಮಾಡುತ್ತಿದ್ದರೆ ಅಥವಾ ನಿಮಗೆ ಭಾವನಾತ್ಮಕ ನೆರವಿನ ಅಗತ್ಯತೆ ಇದ್ದರೆ ತಜ್ಞರ ಸಲಹೆ ಪಡೆಯಿರಿ. AASRA's 24x7 Helpline: +91-9820466726

SCROLL FOR NEXT