ದೇಶ

ಛತ್ತೀಸ್ ಗಢದ ದಾಂತೇವಾಡದಲ್ಲಿ 27 ನಕ್ಸಲೀಯರು ಶರಣಾಗತಿ

Nagaraja AB

ದಾಂತೇವಾಡ: ಛತ್ತೀಸ್ ಗಢದ ದಾಂತೇವಾಡದಲ್ಲಿ ಭಾನುವಾರ 27 ನಕ್ಸಲೀಯರು ಪೊಲೀಸರಿಗೆ ಶರಣಾಗಿದ್ದಾರೆ.ಮಾವೋವಾದಿ ಸಿದ್ಧಾಂತದಲ್ಲಿ ನಿರಾಸೆ ಮತ್ತು  ಪೊಲೀಸರ ಪುನವರ್ಸತಿ ಕಾರ್ಯಕ್ರಮದಿಂದ ಪ್ರೇರಣೆಗೊಂಡು ನಕ್ಸಲೀಯರು ಶರಣಾಗಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಕ್ಸಲೀಯರಿಗೆ  ಪುನವರ್ಸತಿಗಾಗಿ ಈ ವರ್ಷದ ಜೂನ್ ತಿಂಗಳಲ್ಲಿ ಜಿಲ್ಲಾ ಪೊಲೀಸರಿಂದ ನಿಮ್ಮ ಮನೆ, ಹಳ್ಳಿಗೆ ಹಿಂತಿರುಗಿ ಪ್ರಚಾರವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದ್ದು, ಈವರೆಗೂ 177 ಕ್ರಾಂತಿಕಾರಿಗಳು ಶರಣಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಆರು ಮಹಿಳೆಯರು ಸೇರಿದಂತೆ 27 ನಕ್ಸಲೀಯರು ಜಿಲ್ಲೆಯ ಬರ್ಸೂರು ಠಾಣೆಯಲ್ಲಿ ಹಿರಿಯ ಪೊಲೀಸ್ ಮತ್ತು ಸಿಆರ್ ಪಿಎಫ್ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ ಎಂದು ದಾಂತೇವಾಡ ಎಸ್ಪಿ ಅಭಿಷೇಕ್ ಪಲ್ಲವ ಹೇಳಿದ್ದಾರೆ.

ಇತ್ತೀಚಿಗೆ ಮಾವೋವಾದಿ ಸಿದ್ಧಾಂತದಲ್ಲಿ ನಿರಾಸೆ ಮತ್ತು ಹಿಂಸೆ ತ್ಯಜಿಸುವಂತೆ ಸ್ಥಳೀಯ ಪೊಲೀಸರು ನಡೆಸುತ್ತಿರುವ ಆಂದೋಲನದಿಂದ ಸ್ಪೋರ್ತಿಗೊಂಡು ಶರಣಾಗಿರುವುದಾಗಿ ನಕ್ಸಲೀಯರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

SCROLL FOR NEXT