ದೇಶ

ಗುರುಮೂರ್ತಿ-ರಜನಿಕಾಂತ್ ಭೇಟಿ: ಗರಿಗೆದರಿದ ಕುತೂಹಲ

Shilpa D

ಚೆನ್ನೈ: ಪ್ರಸಿದ್ದ ರಾಜಕೀಯ ಮತ್ತು ಆರ್ಥಿಕ ತಜ್ಞ ಹಾಗೂ ವಿಮರ್ಶಕ ಎಸ್ ಗುರುಮೂರ್ತಿ ಭಾನುವಾರ ರಜನಿಕಾಂತ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಅನಾರೋಗ್ಯದ ಕಾರಣ ರಜನಿಕಾಂತ್ ರಾಜಕೀಯ ಪ್ರವೇಶಿಸುವುದಿಲ್ಲ ಎಂಬ ಬಗ್ಗೆ ಕೆಲವು ದಿನಗಳಿಂದ ಕೇಳಿ ಬರುತ್ತಿದ್ದ ಸುದ್ದಿಗಳ ಹಿನ್ನೆಲೆಯಲ್ಲಿ ಸುಮಾರು 90 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.

ಸಭೆಯ ಗೌಪ್ಯ ಮೂಲಗಳ ಪ್ರಕಾರ, ಗುರುಮೂರ್ತಿ ಅವರು ರಜನಿಕಾಂತ್ ಅವರನ್ನು ರಾಜಕೀಯದಿಂದ ದೂರವಿಡುವ ಯೋಜನೆಗಳನ್ನು ಮರುಪರಿಶೀಲಿಸಬೇಕು ಎಂದು  ತಿಳಿದುಬಂದಿದೆ. ಬಿಜೆಪಿ ಆಪ್ತರೆಂದೇ ಪರಿಗಣಿತರಾಗಿರುವ ಗುರುಮೂರ್ತಿ, ತಮಿಳುನಾಡು ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. 

ತಮಿಳುನಾಡಿನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಂದಾಗಿ ತಮ್ಮನ್ನು ತಾವೇ ತಮಿಳುನಾಡು ವಿಧಾನಸಭೆ ಚುನಾವಣೆಯಿಂದ ದೂರ ಉಳಿಯುವಂತೆ ನಿರ್ಧರಿಸಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಕೊರೋನಾ ಸಾಂಕ್ರಾಮಿಕ ರೋಗ, ಅವರ ವಯಸ್ಸು, ಮತ್ತು ಆರೋಗ್ಯ ಸ್ಥಿತಿ, ಹಾಗೂ ಲಸಿಕೆ ದೊರೆಯುವ ಬಗ್ಗೆ ಅನಿಶ್ಚಿತತೆಯಿಂದಾಗಿ ರಾಜಕೀಯ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ತಮ್ಮ ಆರೋಗ್ಯದ ಬಗ್ಗೆ ಬಂದಿರುವ ವರದಿ ನಿಜವೆಂದು ರಜನಿಕಾಂತ್ ಒಪ್ಪಿಕೊಂಡಿದ್ದಾರೆ.

SCROLL FOR NEXT